twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಕಲಿಯುವ ಆಸಕ್ತಿಯಿದೆಯೇ?: ನಿರ್ದೇಶನದ ಪಾಠ ಹೇಳಿಕೊಡುತ್ತಾರೆ ಈ ನಿರ್ದೇಶಕರು

    |

    ಸಿನಿಮಾ ಪ್ರೇಕ್ಷಕರು ಮತ್ತು ನಿರ್ದೇಶಕರ ನಡುವೆ ಸಂವಹನ-ಸಂವಾದಕ್ಕೆ ವೇದಿಕೆಯಾಗುವಂತಹ ವಿನೂತನ ಪರಿಕಲ್ಪನೆ 'ಎಫ್‌ಯುಸಿ' (ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್) ಅಸ್ತಿತ್ವಕ್ಕೆ ಬಂದಿದೆ. 'ಲೂಸಿಯಾ' ನಿರ್ದೇಶಕ ಪವನ್ ಕುಮಾರ್ ಅವರ ಕೂಸಾದ ಎಫ್‌ಯುಸಿಯಲ್ಲಿ ಸಿನಿಮಾ ಬಗ್ಗೆ ಆಸಕ್ತಿಯುಳ್ಳವರು ವಿವಿಧ ಸಿನಿಮಾಗಳ ಬಗ್ಗೆ ಸಂವಾದ ನಡೆಸಬಹುದು, ಅಪರೂಪದ ಚಿತ್ರಗಳನ್ನು ನೋಡಬಹುದಾದ ಅವಕಾಶವಿದೆ. ಅಷ್ಟೇ ಅಲ್ಲ ಸಿನಿಮಾ ಕಲಿಕೆಗೂ ಇದು ವೇದಿಕೆಯಾಗಿದೆ.

    Recommended Video

    Akshay Kumar only Indian in the top 100 richest celebrities list | Akshay Kumar | Forbes

    ಸಿನಿಮಾ ಬಗ್ಗೆ ಅನುಭವ, ಜ್ಞಾನವುಳ್ಳ ನಿರ್ದೇಶಕರು ಈ ವೇದಿಕೆಯಲ್ಲಿ ಸಿಗಲಿದ್ದಾರೆ. ಸಿನಿಮಾ ಪ್ರಾಜೆಕ್ಟ್‌ಗಳಿಗೆ ನಿರ್ದೇಶಕರೊಂದಿಗೆ ಸಹಭಾಗಿತ್ವ ಹೊಂದಲು ಸಹ ಇಲ್ಲಿ ಅವಕಾಶ ಸಿಗಲಿದೆ. ಸಿನಿಮಾ ಬಗ್ಗೆ ತಿಳಿಯಲು, ಕಲಿಯಲು ಇರುವ ಆಸಕ್ತರಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ರೀತಿಯ ವರ್ಕ್‌ಶಾಪ್ ನಡೆಸಲಾಗುತ್ತದೆ.

    ನಿರ್ದೇಶಕರು-ಪ್ರೇಕ್ಷಕರಿಗೆ ವೇದಿಕೆ: 'ಲೂಸಿಯಾ' ಪವನ್ ವಿಶಿಷ್ಟ ಯೋಜನೆ ಆರಂಭನಿರ್ದೇಶಕರು-ಪ್ರೇಕ್ಷಕರಿಗೆ ವೇದಿಕೆ: 'ಲೂಸಿಯಾ' ಪವನ್ ವಿಶಿಷ್ಟ ಯೋಜನೆ ಆರಂಭ

    ಅಷ್ಟೇ ಅಲ್ಲ, ನಿರ್ದೇಶಕರು ಇಲ್ಲಿ ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರಸ್ತಾಪಿಸಲಿದ್ದು, ಅವುಗಳ ಆಯ್ಕೆಗೆ ಕ್ಲಬ್ ಸದಸ್ಯರು ಮತ ಚಲಾಯಿಸುವ ಪ್ರಕ್ರಿಯೆ ಕೂಡ ಇದೆ. ಮುಂದೆ ಓದಿ..

    ನಿರ್ದೇಶಕರು ಯಾರು?

    ನಿರ್ದೇಶಕರು ಯಾರು?

    ಹೀಗೆ ಸಿನಿಮಾ ಬಗ್ಗೆ ಮಾಹಿತಿ ನೀಡಲು ಖ್ಯಾತ ನಿರ್ದೇಶಕರು ಇಲ್ಲಿ ಲಭ್ಯಲಿದ್ದಾರೆ. ಸದ್ಯಕ್ಕೆ ಕನ್ನಡದ 12 ನಿರ್ದೇಶಕರು ಸಿನಿಮಾ ಪಾಠ ಮಾಡಲಿದ್ದಾರೆ. ಪವನ್ ಕುಮಾರ್, ಯೋಗರಾಜ್ ಭಟ್, ಶಶಾಂಕ್, ಜಯತೀರ್ಥ, ಆದರ್ಶ್ ಈಶ್ವರಪ್ಪ, ಅಭಯ ಸಿಂಹ, ಅರವಿಂದ್ ಶಾಸ್ತ್ರಿ, ಮಂಸೋರೆ, ಗಿರಿರಾಜ್ ಬಿಎಂ, ಅರವಿಂದ್ ಕುಪ್ಳೀಕರ್, ಚೈತನ್ಯ ಕೆಎಂ, ಎಸ್.ಡಿ ಅರವಿಂದ್ ಇಲ್ಲಿ ಕಾರ್ಯಾಗಾರಗಳನ್ನು ನಡೆಸಿಕೊಡಲಿದ್ದಾರೆ.

    ಸಿನಿಮಾ ಆವಿಷ್ಕಾರಗಳ ಚರ್ಚೆ

    ಸಿನಿಮಾ ಆವಿಷ್ಕಾರಗಳ ಚರ್ಚೆ

    ಸಿನಿಮಾ ಬಗ್ಗೆ ಆಸಕ್ತರು ಒಂದೇ ವೇದಿಕೆಯಲ್ಲಿ ಸೇರುವ ಅವಕಾಶವಿದು. ಇಲ್ಲಿ ತಮಾಷೆಯಾಗಿ ಹರಟುತ್ತಾ, ಹೊಸ ಸಂಗತಿಗಳು, ಆವಿಷ್ಕಾರಗಳ ಬಗ್ಗೆ ಚರ್ಚಿಸುತ್ತಾ ಕಲಿಕೆ ನಡೆಯುತ್ತದೆ. ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಚಟುವಟಿಕೆಗಳು ನಡೆಯಲಿದ್ದು, ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಕೂಡ ಇದಕ್ಕೆ ಸಂಪರ್ಕಿಸಲಾಗಿದೆ. ಒಂದು ತಿಂಗಳಿನಿಂದ ಈ ಬಗ್ಗೆ ಮಾತನಾಡುತ್ತಿದ್ದೆ. ಈಗ ಅಧಿಕೃತವಾಗಿ ಇದು ಲಾಂಚ್ ಆಗಿದೆ ಎಂದು ಪವನ್ ತಿಳಿಸಿದ್ದಾರೆ

    ನಿರ್ದೇಶಕ ಪವನ್ ಗೆ ಗೆಳೆಯರಾಗಿ, ಚಿತ್ರರಂಗ ಬದಲಾವಣೆಗೆ ಕಾರಣರಾಗಿನಿರ್ದೇಶಕ ಪವನ್ ಗೆ ಗೆಳೆಯರಾಗಿ, ಚಿತ್ರರಂಗ ಬದಲಾವಣೆಗೆ ಕಾರಣರಾಗಿ

    ಸಿನಿಮಾ ಜ್ಞಾನ ವಿಸ್ತರಣೆ

    ಸಿನಿಮಾ ಜ್ಞಾನ ವಿಸ್ತರಣೆ

    ಇಲ್ಲಿ ಸದಸ್ಯರಾದರೆ ಅವರಿಗೆ ಒಂದು ಸಿನಿಮಾ ವೀಕ್ಷಣೆಗೆ ಸಿಗುತ್ತದೆ. ನಿರ್ದೇಶಕರ ಜತೆ ಸಂವಾದ ನಡೆಸುವ ಅವಕಾಶ, ಸಿನಿಮಾ ಕುರಿತು ಜ್ಞಾನ ಪಡೆಯುವ ಸೌಲಭ್ಯ ಸಿಗುತ್ತದೆ, ಹಾಗೆಯೇ ಆ ನಿಧಿಯು ಚಿತ್ರ ನಿರ್ಮಾಣಕ್ಕೂ ಬಳಕೆಯಾಗುತ್ತದೆ. ಆಸಕ್ತರು ಚಂದಾದಾರರಾಗುವ ಮೂಲಕ ಹಣ ಪಾವತಿಸಿ ಇದರ ಸದಸ್ಯರಾಗಬಹುದು. ಆ ಹಣವನ್ನು ಸಿನಿಮಾ ಸಂಬಂಧಿತ ಉದ್ದೇಶಗಳಿಗೆ ಬಳಸಲಾಗುತ್ತದೆ.

    ಸಿನಿಮಾ ನಿರ್ಮಾಣಕ್ಕೂ ಜಾಗ

    ಸಿನಿಮಾ ನಿರ್ಮಾಣಕ್ಕೂ ಜಾಗ

    ಇನ್ನೂ ಅನೇಕ ಚಟುವಟಿಕೆಗಳು ಇಲ್ಲಿ ನಡೆಯಲಿದ್ದು, ಸಿನಿಮಾ ಆಸಕ್ತರು ನಿರ್ದೇಶನಕ್ಕೆ ಇಳಿಯಲು, ಅಪರೂಪದ ಸಿನಿಮಾಗಳನ್ನು ವಿಕ್ಷಿಸಲು, ಕುಳಿತಲ್ಲಿಂದಲೇ ಸಿನಿಮಾ ನಿರ್ಮಾಣ ಮಾಡುವುದು ಮುಂತಾದವುಗಳಿಗೆ ಎಫ್‌ಯುಸಿ ವೇದಿಕೆಯಾಗಲಿದೆ.

    English summary
    Director Pawan Kumar's initiative FUC: Filmmakers United Club has released the list of its first 12 filmmakers.
    Friday, June 5, 2020, 16:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X