twitter
    For Quick Alerts
    ALLOW NOTIFICATIONS  
    For Daily Alerts

    ಅಣ್ಣಾವ್ರ ಸಿನಿಮಾ ಬಳಿಕ ಅತೀ ಹೆಚ್ಚು ಭಾಷೆಗೆ ರಿಮೇಕ್ ಆಗಿ ದಾಖಲೆ ಬರೆದ ಕನ್ನಡದ 'ಯು ಟರ್ನ್'

    |

    ಕನ್ನಡದ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗಿ ಸಕ್ಸಸ್ ಕಂಡಿರುವುದು ತೀರ ವಿರಳ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಗಡಿಗೂ ಮೀರಿ ಪ್ರೇಕ್ಷಕರನ್ನು ತಲುಪುತ್ತಿವೆ. ಸಾಕಷ್ಟು ಸಿನಿಮಾಗಳು ಪರಭಾಷೆಗೆ ರಿಮೇಕ್ ಆಗುತ್ತಿರುವುದು ಹೆಮ್ಮೆಯ ವಿಚಾರ.

    Recommended Video

    U Turn Beats DrRajkumar Record | ಎಂಟು ಭಾಷೆಗಳಿಗೆ ರೀಮೇಕ್ ಆಗಿ ಕನ್ನಡದಲ್ಲಿ ದಾಖಲೆ ಬರೆದ ಯು-ಟರ್ನ್

    ಒಂದು ಸಿನಿಮಾ ಹೆಚ್ಚು ಎಂದರೆ ದಕ್ಷಿಣ ಭಾರತದ ಮೂರು ಭಾಷೆಯ ಜೊತೆಗೆ ಹಿಂದಿ ಭಾಷೆಯಲ್ಲಿ ರಿಮೇಕ್ ಆಗಿ ಪ್ರದರ್ಶನ ಕಾಣಬಹುದು. ಆದರೆ ಕೆಲವೇ ಕೆಲವು ಸಿನಿಮಾಗಳು ಇದಕ್ಕಿಂತನೂ ಹೆಚ್ಚು ಭಾಷೆಯಲ್ಲಿ ರಿಮೇಕ್ ಆಗುವ ಮೂಲಕ ದಾಖಲೆ ನಿರ್ಮಿಸಿವೆ. ಇದೇ ಸಾಲಿಗೆ ಈಗ ಕನ್ನಡದ ಯು ಟರ್ನ್ ಸಿನಿಮಾ ಕೂಡ ಸೇರಿದೆ. ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಅತೀ ಹೆಚ್ಚು ಭಾಷೆಗೆ ರಿಮೇಕ್ ಆದ ಕನ್ನಡದ ಏಕೈಕ ಸಿನಿಮಾ ಎನಿಸಿಕೊಂಡಿದೆ. ಮುಂದೆ ಓದಿ..

    'ಇಕ್ಕಟ್'ನಲ್ಲಿ ಸಿಲುಕಿದವರ ಬೆಂಬಲಕ್ಕೆ ನಿಂತ ಲೂಸಿಯ ಪವನ್ ಕುಮಾರ್'ಇಕ್ಕಟ್'ನಲ್ಲಿ ಸಿಲುಕಿದವರ ಬೆಂಬಲಕ್ಕೆ ನಿಂತ ಲೂಸಿಯ ಪವನ್ ಕುಮಾರ್

    8 ಭಾಷೆಗೆ 'ಯು ಟರ್ನ್' ರಿಮೇಕ್

    8 ಭಾಷೆಗೆ 'ಯು ಟರ್ನ್' ರಿಮೇಕ್

    ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಯು ಟರ್ನ್ ಸಿನಿಮಾ ಅತೀ ಹೆಚ್ಚು ಭಾಷೆಗೆ ಎಂದರೆ ಬರೋಬ್ಬರಿ 8 ಭಾಷೆಗೆ ರಿಮೇಕ್ ಆಗುವ ಮೂಲಕ ಕನ್ನಡದಲ್ಲಿ ದಾಖಲೆ ನಿರ್ಮಿಸಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆ ತಮಿಳು, ತೆಲುಗು ಮತ್ತು ಮಲಯಾಳಂ ಜೊತೆಗೆ ಸಿಂಹಳಿ, ಫಿಲಿಪಿನೋ, ಹಿಂದಿ ಮತ್ತು ಬಂಗಾಳಿ ಭಾಷೆಗೆ ಯು ಟರ್ನ್ ರಿಮೇಕ್ ಆಗಿದೆ.

    ಸಾಧಾರಣ ಯಶಸ್ಸು ಕಂಡ ಸಿನಿಮಾ

    ಸಾಧಾರಣ ಯಶಸ್ಸು ಕಂಡ ಸಿನಿಮಾ

    ಕನ್ನಡದಲ್ಲಿ 2016ರಲ್ಲಿ ತೆರೆಗೆ ಬಂದ ಯು ಟರ್ನ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಕಮಾಯಿ ಮಾಡಿರಲಿಲ್ಲ. ಸಾಧಾರಣ ಯಶಸ್ಸು ಕಂಡ ಸಿನಿಮಾ 8 ಭಾಷೆಯಲ್ಲಿ ರಿಮೇಕ್ ಆಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

    ಪವನ್ ಕುಮಾರ್ ಪ್ರತಿಕ್ರಿಯೆ

    ಪವನ್ ಕುಮಾರ್ ಪ್ರತಿಕ್ರಿಯೆ

    ಈ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. '2016ರಲ್ಲಿ ಬಿಡುಗಡೆಯಾದ ಯು ಟರ್ನ್ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಯಶಸ್ಸು ಕಂಡಿತ್ತು, ಸಾಮಾನ್ಯ ಯಶಸ್ಸಿನ ಸಿನಿಮಾ ಅನೇಕ ಬಾರಿ ರಿಮೇಕ್ ಆಗಿದೆ. ಆದರೆ ಈ ಕತೆ ಕತೆಗಾರನೊಂದಿಗೆ ವಿಶೇಷ ಸಂಪರ್ಕ ಹೊಂದಿದೆ. ಬರಹಗಾರನಾಗಿ ಇದಕ್ಕಿಂತ ಏನು ಹೆಚ್ಚು ಲಾಭವಲ್ಲ' ಎಂದಿದ್ದಾರೆ.

    'ಲೂಸಿಯಾ' ಪವನ್ ಕುಮಾರ್ ವೆಬ್ ಸರಣಿಯಲ್ಲಿ ಅಮಲಾ ಪೌಲ್'ಲೂಸಿಯಾ' ಪವನ್ ಕುಮಾರ್ ವೆಬ್ ಸರಣಿಯಲ್ಲಿ ಅಮಲಾ ಪೌಲ್

    ಹೆಚ್ಚು ಭಾಷೆಗೆ ರಿಮೇಕ್ ಆಗಿತ್ತು ಅಣ್ಣಾವ್ರ ಸಿನಿಮಾ

    ಹೆಚ್ಚು ಭಾಷೆಗೆ ರಿಮೇಕ್ ಆಗಿತ್ತು ಅಣ್ಣಾವ್ರ ಸಿನಿಮಾ

    ಅಂದಹಾಗೆ ಅತೀ ಹೆಚ್ಚು ಭಾಷೆಗೆ ರಿಮೇಕ್ ಆದ ಕನ್ನಡದ ಮತ್ತೊಂದು ಸಿನಿಮಾ ಎಂದರೆ ಡಾ. ರಾಜ್ ಕುಮಾರ್ ನಟನೆಯ ಅನುರಾಗ ಅರಳಿತು ಸಿನಿಮಾ. ಈ ಚಿತ್ರ ಆ ಕಾಲಕ್ಕೆ 6 ಭಾಷೆಗೆ ರಿಮೇಕ್ ಆಗುವ ಮೂಲಕ ಬೇರೆ ಬೇರೆ ಭಾಷೆಯ ಪ್ರೇಕ್ಷಕರ ಗಮನ ಸೆಳೆದಿದ್ದು. ತಮಿಳು, ತೆಲುಗು, ಹಿಂದಿ, ಬೆಂಗಾಳಿ, ಒಡಿಯಾ ಮತ್ತು ಬಾಂಗ್ಲದೇಶಿ ಬೆಂಗಾಳಿಗೆ ರಿಮೇಕ್ ಆಗಿತ್ತು. ಹೆಚ್ಚು ಭಾಷೆಗೆ ರಿಮೇಕ್ ಆದ ಮೊದಲ ಸಿನಿಮಾ ಎನಿಸಿಕೊಂಡಿತ್ತು.

    English summary
    Pawan Kumar's U Turn kannada film remade in 8 languages.
    Tuesday, March 30, 2021, 16:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X