'ಟಗರು' ಚಿತ್ರಕ್ಕೆ ಶುಭ ಕೋರಿದ ಪವನ್ ಓಡೆಯರ್, ಸಂತೋಷ್ ಆನಂದ್ ರಾಮ್
'ಟಗರು' ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗಲಿದೆ. ಸಿನಿಮಾಗೆ ಇನ್ನು 3 ದಿನ ಬಾಕಿ ಇದ್ದು ಅಭಿಮಾನಿಗಳು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೆ ಕನ್ನಡ ಚಿತ್ರರಂಗದ ನಿರ್ದೇಶಕರು ಕೂಡ 'ಟಗರು' ನೋಡಲು ಕಾಯುತ್ತಿದ್ದಾರೆ.
ಸದ್ಯ 'ಟಗರು' ಸಿನಿಮಾಗೆ ನಿರ್ದೇಶಕರಾದ ಪವನ್ ಓಡೆಯರ್ ಮತ್ತು ಸಂತೋಷ್ ಆನಂದ್ ರಾಮ್ ಶುಭಕೋರಿದ್ದಾರೆ. ಫೇಸ್ ಬುಕ್ ನಲ್ಲಿ ಈ ಇಬ್ಬರು ನಿರ್ದೇಶಕರು ವಿಡಿಯೋ ಮೂಲಕ ತಮ್ಮ ಶುಭಾಶಯವನ್ನು 'ಟಗರು' ಚಿತ್ರತಂಡಕ್ಕೆ ಹೇಳಿದ್ದಾರೆ.
ಪವನ್ ಒಡೆಯರ್ 'ಮಾತನಾಡಿ 'ಟಗರು' ಟ್ರೇಲರ್ ನೋಡಿ ಫಿದಾ ಆಗಿದ್ದೇನೆ. ಶುಕ್ರವಾರ ಮಾರ್ನಿಂಗ್ ಶೋ ಸಿನಿಮಾ ನೋಡಬೇಕು. ಅದ್ಬುತವಾಗಿ ಸಿನಿಮಾ ಮಾಡಿರುತ್ತಾರೆ. ನೀವು ಟಿಕೆಟ್ ಬುಕ್ ಮಾಡಿ ನೋಡಿ.'' ಎಂದು ಹೇಳಿದ್ದಾರೆ.

ಇನ್ನೂ 'ಟಗರು' ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ನಟಿ ಭಾವನಾ, ಮಾನ್ವಿತಾ ಹರೀಶ್, ಧನಂಜಯ್, ವಸಿಷ್ಟ ಸಿನಿಮಾದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರದಲ್ಲಿದೆ. 'ಟಗರು' ಸಿನಿಮಾ ಇದೇ ತಿಂಗಳು 23ಕ್ಕೆ ರಿಲೀಸ್ ಆಗುತ್ತಿದೆ. ಈಗಾಗಲೇ 'ಟಗರು' ಟಿಕೆಟ್ ಬುಕ್ಕಿಂಗ್ ಶುರು ಆಗಿದೆ.


Click it and Unblock the Notifications











