For Quick Alerts
  ALLOW NOTIFICATIONS  
  For Daily Alerts

  ಹೊಸ ಜೀವನಕ್ಕೆ ಅಡಿಯಿಟ್ಟ ಪವನ್ ಒಡೆಯರ್ ದಂಪತಿಗೆ ಶುಭ ಕೋರಿದ ಪುನೀತ್

  By Harshitha
  |
  ಪವನ್-ಅಪೇಕ್ಷಾಗೆ ಶುಭಾಶಯ ಕೋರಿದ ನಟ ಸಾರ್ವಭೌಮ..! | Filmibeat Kannada

  ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ... ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶರಣ್, ಯಶ್ ಹಾಗೂ ಧನಂಜಯ್ ಅಂತಹ ತಾರೆಯರಿಗೆ ಆಕ್ಷನ್ ಕಟ್ ಹೇಳಿದ ಪವನ್ ಒಡೆಯರ್ ಇಂದು ಹೊಸ ಬಾಳಿಗೆ ಅಡಿಯಿಟ್ಟರು.

  ನಟಿ ಅಪೇಕ್ಷಾ ಪುರೋಹಿತ್ ಜೊತೆಗೆ ಇವತ್ತು ನಿರ್ದೇಶಕ ಪವನ್ ಒಡೆಯರ್ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.

  ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಅಪೇಕ್ಷಾ ಪುರೋಹಿತ್-ಪವನ್ ಒಡೆಯರ್ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಗುರು ಹಿರಿಯರ ಸಮ್ಮುಖದಲ್ಲಿ ಎಂಟು ತಿಂಗಳ ಹಿಂದೆ ಎಂಗೇಜ್ ಆಗಿದ್ದ ಈ ಜೋಡಿ ಇದೀಗ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ.

  ಪವನ್ ಒಡೆಯರ್-ಅಪೇಕ್ಷಾ ಪುರೋಹಿತ್ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು, ನವ ದಂಪತಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭ ಹಾರೈಸಿದ್ದಾರೆ. ಮುಂದೆ ಓದಿರಿ...

  ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ರಾಜ್ ಕುಮಾರ್

  ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ರಾಜ್ ಕುಮಾರ್

  ಇಂದು ನಡೆದ ನಿರ್ದೇಶಕ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ವಿವಾಹ ಮಹೋತ್ಸವದಲ್ಲಿ ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್ ಭಾಗವಹಿಸಿದರು. ಹೊಸ ಜೋಡಿಗೆ ಅಪ್ಪು ಶುಭ ಕೋರಿದರು.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಪವನ್ ಒಡೆಯರ್

  ಅಪ್ಪು ಜೊತೆಗೆ ಎರಡು ಸಿನಿಮಾ

  ಅಪ್ಪು ಜೊತೆಗೆ ಎರಡು ಸಿನಿಮಾ

  ಪುನೀತ್ ರಾಜ್ ಕುಮಾರ್ ಗಾಗಿ 'ರಣ ವಿಕ್ರಮ' ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದು ಇದೇ ಡೈರೆಕ್ಟರ್ ಪವನ್ ಒಡೆಯರ್. ಈಗ ಪವನ್ ಒಡೆಯರ್ ಹಾಗೂ ಪುನೀತ್ ಕಾಂಬಿನೇಶನ್ ನಲ್ಲಿ 'ನಟ ಸಾರ್ವಭೌಮ' ಸಿನಿಮಾ ತಯಾರಾಗುತ್ತಿದೆ.

  ಇದೇ ತಿಂಗಳು ನಡೆಯಲಿದೆ ಪವನ್ ಒಡೆಯರ್-ಅಪೇಕ್ಷಾ ವಿವಾಹ ಮಹೋತ್ಸವ

  ಬಾಗಲಕೋಟೆಯಲ್ಲಿ ವಿವಾಹ

  ಬಾಗಲಕೋಟೆಯಲ್ಲಿ ವಿವಾಹ

  ಬಾಗಲಕೋಟೆಯ ವಿದ್ಯಗಿರಿಯಲ್ಲಿರುವ ಗೌರಿಶಂಕರ್ ಕಲ್ಯಾಣ ಮಂಟಪದಲ್ಲಿ ಇಂದು ಬೆಳಗ್ಗೆ 9.05ಕ್ಕೆ ಇದ್ದ ಮುಹೂರ್ತದಲ್ಲಿ ಅಪೇಕ್ಷಾ ಪುರೋಹಿತ್ ಕೊರಳಿಗೆ ಪವನ್ ಒಡೆಯರ್ ತಾಳಿ ಕಟ್ಟಿದರು.

  ಬಾಗಲಕೋಟೆ ಮೂಲದ ಅಪೇಕ್ಷಾ

  ಬಾಗಲಕೋಟೆ ಮೂಲದ ಅಪೇಕ್ಷಾ

  ನಟಿ ಅಪೇಕ್ಷಾ ಪುರೋಹಿತ್ ಮೂಲತಃ ಬಾಗಲಕೋಟೆಯವರು. ಹೀಗಾಗಿ ವಧು ತವರೂರಿನಲ್ಲಿಯೇ ಮದುವೆ ಕಾರ್ಯಕ್ರಮ ನಡೆದಿದೆ.

  ಪಕ್ಕಾ ಅರೇಂಜ್ ಮ್ಯಾರೇಜ್

  ಪಕ್ಕಾ ಅರೇಂಜ್ ಮ್ಯಾರೇಜ್

  ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್... ಇಬ್ಬರೂ ಸ್ಯಾಂಡಲ್ ವುಡ್ ನಲ್ಲಿ ಚಿರಪರಿಚಿತರು. ಹೀಗಿದ್ದರೂ, ಇದು ಲವ್ ಮ್ಯಾರೇಜ್ ಅಲ್ಲ. ಬದಲಾಗಿ ಅರೇಂಜ್ಡ್ ಮ್ಯಾರೇಜ್. ಕುಟುಂಬದವರೇ ನಿಶ್ಚಯಿಸಿರುವ ಮದುವೆ ಇದು.

  ಯಾರೀ ಅಪೇಕ್ಷಾ ಪುರೋಹಿತ್.?

  ಯಾರೀ ಅಪೇಕ್ಷಾ ಪುರೋಹಿತ್.?

  ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪೇಕ್ಷಾ ಪುರೋಹಿತ್ ಟಿ.ಎನ್.ಸೀತಾರಾಮ್ ನಿರ್ದೇಶನದ 'ಕಾಫಿ ತೋಟ' ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

  ಹ್ಯಾಪಿ ಮ್ಯಾರೀಡ್ ಲೈಫ್

  ಹ್ಯಾಪಿ ಮ್ಯಾರೀಡ್ ಲೈಫ್

  ಇದೀಗಷ್ಟೇ ಹೊಸ ಬಾಳಿಗೆ ಅಡಿಯಿಟ್ಟಿರುವ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ಗೆ ನಮ್ಮ ಕಡೆಯಿಂದಲೂ ಶುಭಾಶಯಗಳು.

  English summary
  Kannada Director Pawan Wadeyar-Apeksha Purohit got married today at Bagalkot. Have a look at the pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X