ಇದೇ ತಿಂಗಳು ನಡೆಯಲಿದೆ ಪವನ್ ಒಡೆಯರ್-ಅಪೇಕ್ಷಾ ವಿವಾಹ ಮಹೋತ್ಸವ
Recommended Video

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ ಪವನ್ ಒಡೆಯರ್-ನಟಿ ಅಪೇಕ್ಷಾ ಪುರೋಹಿತ್ ರವರ ನಿಶ್ಚಿತಾರ್ಥ ಸಮಾರಂಭ ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ನಡೆದಿತ್ತು.
ಬಾಗಲಕೋಟೆ ಮೂಲದ ಅಪೇಕ್ಷಾ ಪುರೋಹಿತ್ ಹಾಗೂ ಬೆಳಗಾವಿ ಮೂಲದ ಪವನ್ ಒಡೆಯರ್ ಕುಟುಂಬಸ್ಥರ ಸಮ್ಮುಖದಲ್ಲಿ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡಿದ್ದರು. ನಿಶ್ಚಿತಾರ್ಥ ನೆರವೇರಿದ ಎಂಟು ತಿಂಗಳ ಬಳಿಕ ಹಸೆಮಣೆ ಏರಲು ಈ ಜೋಡಿ ಸಿದ್ಧವಾಗಿದೆ.
ನಿರ್ದೇಶಕ ಪವನ್ ಒಡೆಯರ್-ನಟಿ ಅಪೇಕ್ಷಾ ಪುರೋಹಿತ್ ವಿವಾಹ ಮಹೋತ್ಸವ ಆಗಸ್ಟ್ 20 (ಸೋಮವಾರ) ರಂದು ನಡೆಯಲಿದೆ. ವಧು ಅಪೇಕ್ಷಾ ತವರು ಬಾಗಲಕೋಟೆಯ ವಿದ್ಯಗಿರಿಯಲ್ಲಿರುವ ಗೌರಿಶಂಕರ್ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9.05 ಕ್ಕೆ ಮದುವೆ ನೆರವೇರಲಿದೆ.
ಪವನ್ ಒಡೆಯರ್ ಹಾಗೂ ಅಪೇಕ್ಷಾ.. ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಾರಣ ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರು, ತಂತ್ರಜ್ಞರು ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ.

ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ನಟ ಸಾರ್ವಭೌಮ' ಚಿತ್ರದ ಶೂಟಿಂಗ್ ನಿಂದ ಬ್ರೇಕ್ ಪಡೆದಿರುವ ಪವನ್ ಒಡೆಯರ್ ಲಗ್ನಪತ್ರಿಕೆ ಹಂಚುವುದರಲ್ಲಿ ಬಿಜಿಯಾಗಿದ್ದಾರೆ.
'ಗೋವಿಂದಾಯ ನಮಃ', 'ಗೂಗ್ಲಿ', 'ರಣವಿಕ್ರಮ', 'ಜೆಸ್ಸಿ' ಹಾಗೂ 'ನಟರಾಜ ಸರ್ವೀಸ್' ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಜನಪ್ರಿಯ ನಿರ್ದೇಶಕ ಪವನ್ ಒಡೆಯರ್. ಇನ್ನೂ ಅಪೇಕ್ಷಾ ಪುರೋಹಿತ್ 'ಕಾಫಿ ತೋಟ' ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೇ ಕೆಲ ಧಾರಾವಾಹಿಗಳಲ್ಲಿಯೂ ಮಿಂಚಿದ್ದಾರೆ.


Click it and Unblock the Notifications











