ನಿರ್ದೇಶಕ ಪವನ್ ಒಡೆಯರ್ ಮುಂದಿನ ಚಿತ್ರ 'ನಟರಾಜ ಸರ್ವೀಸ್'

By Harshitha

ಕನ್ನಡ ನಿರ್ದೇಶಕ ಪವನ್ ಒಡೆಯರ್ ಅದೃಷ್ಟ ಚೆನ್ನಾಗಿದೆ. 'ಗೋವಿಂದಾಯ ನಮಃ', 'ಗೂಗ್ಲಿ', 'ರಣವಿಕ್ರಮ' ಅಂತಹ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡಿದ ಪವನ್ ಒಡೆಯರ್ ಇದೀಗ 'ಜೆಸ್ಸಿ' ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

'ಜೆಸ್ಸಿ' ಚಿತ್ರದ ಶೂಟಿಂಗ್ ಇನ್ನು 10 ದಿನ ಬಾಕಿ ಇದೆ. ಅಷ್ಟು ಬೇಗ ಪವನ್ ಒಡೆಯರ್ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಅದೇ 'ನಟರಾಜ ಸರ್ವೀಸ್'.

pawan wadeyar

ಶೀರ್ಷಿಕೆ ಕೇಳಿದ ತಕ್ಷಣ ವಿಚಿತ್ರ ಅಂತ ನಿಮಗೆ ಅನಿಸಬಹುದು. 'ನಟರಾಜ ಸರ್ವೀಸ್' ಔಟ್ ಅಂಡ್ ಔಟ್ ಕಾಮಿಡಿ ಎಂಟರ್ ಟೈನರ್. ಸ್ಕ್ರಿಪ್ಟಿಂಗ್ ಕೆಲಸವೆಲ್ಲಾ ಫೈನಲ್ ಆಗಿದ್ದು, ಈ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಆಪ್ತ ಎನ್.ಎಸ್.ರಾಜ್ ಕುಮಾರ್ ಬಂಡವಾಳ ಹಾಕಲಿದ್ದಾರೆ. [ಪವನ್ ಒಡೆಯರ್ 'ಜೆಸ್ಸಿ' ಚಿತ್ರದ ಫಸ್ಟ್ ಲುಕ್ ಔಟ್]

'ಮೈನಾ', 'ಜಟ್ಟ' ಮತ್ತು 'ಮೈತ್ರಿ' ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಎನ್.ಎಸ್.ರಾಜ್ ಕುಮಾರ್ ಇದೀಗ 'ನಟರಾಜ ಸರ್ವೀಸ್' ಗೆ ದುಡ್ಡು ಹಾಕುವುದಕ್ಕೆ ಮುಂದೆ ಬಂದಿದ್ದಾರೆ.

'ನಟರಾಜ ಸರ್ವೀಸ್' ಚಿತ್ರದ ನಾಯಕ ಯಾರಾಗಲಿದ್ದಾರೆ ಅನ್ನುವುದರ ಬಗ್ಗೆ ಮಾತುಕತೆ ನಡೆಯುತ್ತಿದೆ. 'ನಟರಾಜ ಸರ್ವೀಸ್' ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

More from Filmibeat

English summary
Kannada Director Pawan Wadeyar's directorial next is titled as 'Nataraja Service'. N.S.Rajkumar is producing this movie. Star cast has not finalized yet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X