twitter
    For Quick Alerts
    ALLOW NOTIFICATIONS  
    For Daily Alerts

    ಪವನ್ ಒಡೆಯರ್ ಸಿನಿಮಾ ಡೊಳ್ಳುಗೆ ರಾಷ್ಟ್ರ ಪ್ರಶಸ್ತಿ: ಶೀಘ್ರದಲ್ಲಿಯೇ ಥಿಯೇಟರ್‌ನಲ್ಲಿ ರಿಲೀಸ್!

    |

    ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾ 'ಡೊಳ್ಳು' ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಹಲವು ಚಲ ಚಿತ್ರೋತ್ಸವದಲ್ಲಿ ಭಾಗಿಯಾಗಿದೆ. ಈಗ ಇದೇ ಸಿನಿಮಾಗೆ ಮತ್ತೊಂದು ಪ್ರಶಸ್ತಿ ಬಂದಿದೆ. 68ನೇ ರಾಷ್ಟ್ರೀಯ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಹೆಮ್ಮೆ ಎನಿಸಿದೆ.

    30 ವಿವಿಧ ಭಾಷೆಯ 400 ಸಿನಿಮಾಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಇವುಗಳಲ್ಲಿ ಪವನ್ ಒಡೆಯರ್ ಸಿನಿಮಾ 'ಡೊಳ್ಳು' ಎರಡು ವಿಭಾಗದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕನ್ನಡದ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ಆಡಿಯೋಗ್ರಾಫಿ ವಿಭಾಗದಲ್ಲಿ 'ಡೊಳ್ಳು' ಸಿನಿಮಾ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

    Pawan Wadeyar Produced Kannada film Dollu wins National Awards

    ಸಾಗರ್ ಪುರಾಣಿಕ್ ನಿರ್ದೇಶನ

    'ಡೊಳ್ಳು' ಕುಣಿತದ ಸುತ್ತ ಸಾಗುವ ಕತೆಯನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ ಸುರೇಶ್ ಸೇರಿದಂತೆ ಹಲವು ಮಂದಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್ ಇದೇ ಮೊದ ಬಾರಿಗೆ ತಮ್ಮದೇ ಹೋಂ ಬ್ಯಾನರ್‌ ಒಡೆಯರ್ ಮೂವೀಸ್‌ನಲ್ಲಿ ಪತ್ನಿ ಅಪೇಕ್ಷಾ ಜೊತೆಗೂಡಿ ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

    Pawan Wadeyar Produced Kannada film Dollu wins National Awards

    ಚಲನ ಚಿತ್ರೋತ್ಸವದಲ್ಲಿ ಭಾಗಿ

    'ಡೊಳ್ಳು' ಈಗಾಗಲೇ ಪ್ರಪಂಚ ಪರ್ಯಟನೆ ಮಾಡಿ ಬಂದಿದೆ. ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಡೊಳ್ಳು ಸಿನಿಮಾ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಗಿಟ್ಟಿಸಿಕೊಂಡಿದೆ.

    ರಾಷ್ಟ್ರ ಪ್ರಶಸ್ತಿ ಬಿಡುಗಡೆಗೂ ಮುನ್ನವೇ ಪವನ್ ಒಡೆಯರ್ ಹಾಗೂ ನಿರ್ದೇಶಕ ಸಾಗರ್ ಪುರಾಣಿಕ್ ಇಬ್ಬರೂ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದರು. ಈಗ ಈ ತಂಡಕ್ಕೆ ಮತ್ತಷ್ಟು ಹುರುಷು ಬಂದಿದೆ. 'ಡೊಳ್ಳು' ಕುಣಿತದ ಹಿನ್ನೆಲೆಯುಳ್ಳ ಈ ಸಿನಿಮಾ ಮುಂಬರುವ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ.

    ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿಲ್ಲ

    ಈ ಸಿನಿಮಾದ ಆಡಿಯೋಗ್ರಫಿಗೂ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಅದಕ್ಕೆ ಕಾರಣವೂ ಇದೆ. ಈ ಸಿನಿಮಾದ ಆಡಿಯೋವನ್ನು ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿಲ್ಲ. ಸ್ಟುಡಿಯೋದಲ್ಲಿ ಡ್ರಮ್ ಬೀಟ್ ಅನ್ನು ರೆಕಾರ್ಡ್ ಮಾಡುವುದು ತುಂಬಾನೇ ಕಷ್ಟಸಾಧ್ಯವೆನಿಸಿತ್ತು.

    ಅಲ್ಲದೆ ಸಿಕ್ಕಪಟ್ಟೆ ಸೌಂಡ್ ಇರುತ್ತಿದ್ದರಿಂದ ಹೊರಗಡೆಯೇ ರೆಕಾರ್ಡ್ ಮಾಡುವುದು ಸೂಕ್ತ ಎಂದು ಎನಿಸಿತ್ತು. ಹೀಗಾಗಿ ಸೌಂಡ್ ರೆಕಾರ್ಡಿಸ್ಟ್ ಜುಬಿನ್ ಜಯನ್ ನ್ಯಾಚುರಲ್ ಆಗಿ ಧ್ವನಿಯನ್ನು ಸೆರೆ ಹಿಡಿದಿದ್ದರು.

    English summary
    Pawan Wadeyar Produced Kannada film Dollu wins National Awards, Know More.
    Saturday, July 23, 2022, 9:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X