For Quick Alerts
  ALLOW NOTIFICATIONS  
  For Daily Alerts

  ಈ ಇಬ್ಬರು ನಟರೊಂದಿಗೆ ಸಿನಿಮಾ ಮಾಡುವಂತೆ ಪವನ್ ಒಡೆಯರ್‌ ಗೆ ಒತ್ತಾಯ

  |

  ನಿರ್ದೇಶಕ ಪವನ್ ಒಡೆಯರ್ ಅವರು 'ಕನ್ನಡ ಫಿಲ್ಮೀಬೀಟ್' ಫೇಸ್‌ಬುಕ್ ಮೂಲಕ ಲೈವ್ ಬಂದು, ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

  ಕೊರೊನಾ ಬಗ್ಗೆ ಜವಬ್ದಾರಿಯುತ ಮಾತನಾಡಿದ ನಿರ್ದೇಶಕ ಪವನ್ ಒಡೆಯರ್ | Pavan wodeyar | Beatcorona | Awareness

  ಅಭಿಮಾನಿಗಳು, ಆಸಕ್ತರು ಕೇಳಿದ ಪ್ರಶ್ನೆಗಳಿಗೆ ನಗು-ನಗುತ್ತಾ ಸಾವಧಾನದಿಂದ ಉತ್ತರಿಸಿದ ಅವರು, ತಮ್ಮ ಮುಂದಿನ ಸಿನಿಮಾ, ಲಾಕ್‌ಡೌನ್ ಸಮಯದಲ್ಲಿ ಮಾಡುತ್ತಿರುವ ಕಾರ್ಯ ಎಲ್ಲವನ್ನೂ ವಿವರಿಸಿದರು.

  ನಿರ್ದೇಶಕ ಪವನ್ ಒಡೆಯರ್ ಅವರು ಲೈವ್‌ನಲ್ಲಿದ್ದಾಗಲೇ ಕೆಲವು ಅಭಿಮಾನಿಗಳು ತಮ್ಮ ಮೆಚ್ಚಿನ ಹೀರೋಗಳನ್ನು ಹೆಸರಿಸಿ ಅವರೊಟ್ಟಿಗೆ ಸಿನಿಮಾ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು ಪವನ್ ಒಡೆಯರ್.

  ಯಾವ ನಟರೊಂದಿಗೆ ಸಿನಿಮಾ ಮಾಡಲು ಬೇಡಿಕೆ ಹೆಚ್ಚಿತ್ತು, ತಿಳಿಯಲು ಮುಂದೆ ಓದಿ...

  ಈಗಾಗಲೇ ಯಶ್, ಪುನೀತ್ ಅವರೊಟ್ಟಿಗೆ ಕೆಲಸ ಮಾಡಿದ್ದಾರೆ

  ಈಗಾಗಲೇ ಯಶ್, ಪುನೀತ್ ಅವರೊಟ್ಟಿಗೆ ಕೆಲಸ ಮಾಡಿದ್ದಾರೆ

  ಪವನ್ ಒಡೆಯರ್ ಅವರು ಈಗಾಗಲೇ ಯಶ್, ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡಿದ್ದಾರೆ. ಯಶ್ ಅವರೊಂದಿಗೆ 'ಗೂಗ್ಲಿ' ಮಾಡಿದ್ದರೆ, ಪುನೀತ್ ಅವರೊಟ್ಟಿಗೆ ರಣವಿಕ್ರಮ ಮತ್ತು ನಟಸಾರ್ವಭೌಮ ಸಿನಿಮಾ ಮಾಡಿದ್ದಾರೆ.

  ಪುನೀತ್ ಮತ್ತು ದರ್ಶನ್ ಜೊತೆ ಸಿನಿಮಾ ಮಾಡಲು ಒತ್ತಾಯ

  ಪುನೀತ್ ಮತ್ತು ದರ್ಶನ್ ಜೊತೆ ಸಿನಿಮಾ ಮಾಡಲು ಒತ್ತಾಯ

  ಪವನ್ ಅವರು ಮತ್ತೆ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡಬೇಕು ಎಂಬ ಒತ್ತಾಯ ಲೈವ್ ಸಮಯದಲ್ಲಿ ಕೇಳಿಬಂದಿತು. ಅಷ್ಟೆ ಅಲ್ಲದೆ, ದರ್ಶನ್ ಜೊತೆಗೂ ಸಿನಿಮಾ ಮಾಡುವಂತೆ ಅಭಿಮಾನಿಗಳು ಪವನ್ ಒಡೆಯರ್ ಅವರನ್ನು ಒತ್ತಾಯಿಸಿದರು.

  ''ಸ್ಟಾರ್ ಗಳೊಂದಿಗೆ ಕೆಲಸ ಮಾಡಲು ಹೆಚ್ಚಿನ ತಯಾರಿ ಬೇಕು''

  ''ಸ್ಟಾರ್ ಗಳೊಂದಿಗೆ ಕೆಲಸ ಮಾಡಲು ಹೆಚ್ಚಿನ ತಯಾರಿ ಬೇಕು''

  ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ ಪವನ್ ಒಡೆಯರ್, ಖಂಡಿತ ಇಬ್ಬರೂ ನಟರೊಂದಿಗೆ ಸಿನಿಮಾ ಮಾಡುವುದಾಗಿ ಹೇಳಿದರು. ಸ್ಟಾರ್ ನಟರೊಂದಿಗೆ ಸಿನಿಮಾ ಮಾಡುವುದು ಜವಾಬ್ದಾರಿಯುತ ಕೆಲಸ ಅದಕ್ಕೆ ಹೆಚ್ಚಿನ ತಯಾರಿ ಬೇಕೆಂದು ಅವರು ಹೇಳಿದರು.

  ಪವನ್ ಮುಂದಿನ ಸಿನಿಮಾ ರೆಮೊ

  ಪವನ್ ಮುಂದಿನ ಸಿನಿಮಾ ರೆಮೊ

  ಪವನ್ ಒಡೆಯರ್ ಅವರ ಮುಂದಿನ ಸಿನಿಮಾ ರೆಮೊ ಆಗಿದ್ದು, ಎರಡು ಹಾಡು ಮತ್ತು ಒಂದು ಫೈಟ್ ಚಿತ್ರೀಕರಣವಷ್ಟೆ ಬಾಕಿ ಉಳಿದಿದೆಯಂತೆ. ಲಾಕ್‌ಡೌನ್ ಮುಗಿದ ನಂತರ ಚಿತ್ರೀಕರಣ ಪ್ರಾರಂಭವಾಗುತ್ತದೆ. ಕೆಲವೇ ದಿನಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದರು ಪವನ್.

  English summary
  Director Pawan Wadeyar says he will make movie with star Puneeth Rajkumar and actor Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X