ಪವನ್ ಒಡೆಯರ್ 'ನಟರಾಜ ಸರ್ವೀಸ್' ಶೂಟಿಂಗ್ ದಿಢೀರ್ ನಿಂತಿದ್ಯಾಕೆ?
'ಜೆಸ್ಸಿ' ಚಿತ್ರದ ಬಳಿಕ ಹ್ಯಾಟ್ರಿಕ್ ಡೈರೆಕ್ಟರ್ ಪವನ್ ಒಡೆಯರ್ ಕೈಗೆತ್ತಿಕೊಂಡಿರುವ ಸಿನಿಮಾ 'ನಟರಾಜ ಸರ್ವೀಸ್'.
ಕಳೆದ ಅಕ್ಟೋಬರ್ ನಲ್ಲಿ 'ನಟರಾಜ ಸರ್ವೀಸ್' ಚಿತ್ರದ ಮುಹೂರ್ತ ಸಮಾರಂಭ ನಡೆದಿತ್ತು. ಅದಾದ ಬಳಿಕ, ಚಿತ್ರದ ಚಿತ್ರೀಕರಣಕ್ಕೂ ಚಾಲನೆ ನೀಡಲಾಗಿತ್ತು. [ಶರಣ್-ಪವನ್ 'ನಟರಾಜ ಸರ್ವೀಸ್' ಶುರುವಾಯ್ತು ಗುರು.!]

ಬಿರುಸಿನಿಂದ ಚಿತ್ರೀಕರಣ ಸಾಗುತ್ತಿರುವಾಗಲೇ, 'ನಟರಾಜ ಸರ್ವೀಸ್' ಚಿತ್ರಕ್ಕೆ ದಿಢೀರ್ ಬ್ರೇಕ್ ನೀಡಲಾಗಿದೆ. ಅದಕ್ಕೆ ಕಾರಣ ಸ್ವತಃ ನಿರ್ದೇಶಕ ಪವನ್ ಒಡೆಯರ್.

ಹೌದು, ನಿರ್ದೇಶಕ ಪವನ್ ಒಡೆಯರ್ ಗೆ ಮದ್ರಾಸ್ ಐ ಆಗಿದೆ. ಅತಿಯಾದ ಕಣ್ಣು ನೋವು ಇರುವ ಕಾರಣ 'ನಟರಾಜ ಸರ್ವೀಸ್' ಶೂಟಿಂಗ್ ಸದ್ಯಕ್ಕೆ ಸ್ಟಾಪ್ ಮಾಡಿದ್ದಾರೆ.
''ಮದ್ರಾಸ್ ಐ ನೀಡುವ ಬಾಧೆ ಶತ್ರುಗಳಿಗೂ ಬೇಡ'' ಎಂದು ನಿರ್ದೇಶಕ ಪವನ್ ಒಡೆಯರ್ ಟ್ವೀಟ್ ಮಾಡಿದ್ದಾರೆ. ['ನಟರಾಜ ಸರ್ವೀಸ್' ಸ್ಟೇಷನ್ ನಲ್ಲಿ ಶರಣ್ ಜೊತೆ ಮಯೂರಿ]

ಅಂದ್ಹಾಗೆ, ಶರಣ್ ಹಾಗೂ ಮಯೂರಿ 'ನಟರಾಜ ಸರ್ವೀಸ್' ಚಿತ್ರದ ನಾಯಕ-ನಾಯಕಿ. ಸದ್ಯಕ್ಕೆ ರೆಸ್ಟ್ ಮಾಡುತ್ತಿರುವ ಪವನ್ ಒಡೆಯರ್ ಮತ್ತೆ 'ನಟರಾಜ ಸರ್ವೀಸ್' ಸ್ಟೇಷನ್ ಓಪನ್ ಮಾಡಿದಾಗ ನಿಮಗೆ ತಿಳಿಸುತ್ತೇವೆ.


Click it and Unblock the Notifications











