ಜನ್ಮ ದಿನಕ್ಕೆ ಅದ್ಭುತ ಉಡುಗೊರೆ; ತಂದೆಯಾದ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್

ಸ್ಯಾಂಡಲ್ ವುಡ್ ನ ನಿರ್ದೇಶಕ ಪವನ್ ಒಡೆಯರ್ ತಂದೆಯಾದ ಸಂಭ್ರಮದಲ್ಲಿದ್ದಾರೆ. ಪವನ್ ಒಡೆಯರ್ ಪತ್ನಿ ನಟಿ ಅಪೇಕ್ಷಾ ಪುರೋಹಿತ್ ಇಂದು(ಡಿಸೆಂಬರ್ 10) ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಗಂಡು ಮಗುವಿನ ತಂದೆಯಾದ ಪವನ್ ಒಡೆಯರ್ ಈ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತ್ನಿ ಮತ್ತು ಮಗು ಆಸ್ಪತ್ರೆಯಲ್ಲಿರುವ ಫೋಟೋವನ್ನು ಶೇರ್ ಮಾಡಿ, 'ನನ್ನ ಜನ್ಮ ದಿನಕ್ಕೆ ವಿಶ್ವದ ಅತ್ಯಂತ ಅದ್ಭುತ ಉಡುಗೊರೆ ದೊರೆತಿದೆ. ಗಂಡು ಮಗುವಿನ ತಂದೆಯಾಗಿದ್ದೇನೆ. ಜೈ ಚಾಮುಂಡೇಶ್ವರಿ' ಎಂದು ಬರೆದುಕೊಂಡಿದ್ದಾರೆ.

ಪವನ್ ದಂಪತಿಗೆ ಅಭಿಮಾನಿಗಳು ಮತ್ತು ಸಿನಿತಾರೆಯ ಅಭಿನಂದನೆ

ಪವನ್ ದಂಪತಿಗೆ ಅಭಿಮಾನಿಗಳು ಮತ್ತು ಸಿನಿತಾರೆಯ ಅಭಿನಂದನೆ

ಪವನ್ ಒಡೆಯರ್ ದಂಪತಿಗೆ ಅಭಿಮಾನಿಗಳು ಮತ್ತು ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ, ನಟಿ ಶಾನ್ವಿ ಶ್ರೀವಾಸ್ತವ್, ಕಾರ್ತಿಕ್ ಗೊಡ ಸೇರಿದಂತೆ ಅನೇಕ ಸಿನಿ ತಾರೆಯರು, ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.

ಹುಟ್ಟುಹಬ್ಬದ ದಿನವೇ ಮಗನ ಆಗಮನ

ಹುಟ್ಟುಹಬ್ಬದ ದಿನವೇ ಮಗನ ಆಗಮನ

ವಿಶೇಷ ಎಂದರೆ ಇಂದು ಪವನ್ ಒಡೆಯರ್ ಗೆ ಹುಟ್ಟುಹಬ್ಬದ ಸಂಭ್ರಮ. ತನ್ನ ಹುಟ್ಟುಹಬ್ಬದ ದಿನವೇ ಮಗ ಜನಿಸಿರುವುದು ಮತ್ತಷ್ಟು ಸಂತಸ ಹೆಚ್ಚಿಸಿದೆ. ಈ ಅದ್ಭುತ ಉಡುಗೊರೆಯನ್ನು ಪವನ್ ದಂಪತಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೀಮಂತ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್

2018ರಲ್ಲಿ ಮದುವೆಯಾಗಿದ್ದ ಜೋಡಿ

2018ರಲ್ಲಿ ಮದುವೆಯಾಗಿದ್ದ ಜೋಡಿ

ಪವನ್ ಒಡೆಯರ್ ಮತ್ತು ಅಪೇೆಕ್ಷ ಪುರೋಹಿತ್ ಇಬ್ಬರು 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿ ಇಬ್ಬರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಅಪೇಕ್ಷ ಪುರೋಹಿತ್ ಕನ್ನಡ ಕಿರುತೆರೆ ನಟಿಯಾಗಿ ಖ್ಯಾತಿಗಳಿಸಿದ್ದರು. ತ್ರಿವೇಣಿ ಸಂಗಮ, ಸೊಸೆ ತಂದ ಸೌಭಾಗ್ಯ, ಸಾಗುತಾ ದೂರ ದೂರ, ಮರಳಿ ಬಂದಳು ಸೀತೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಮಾತ್ರವಲ್ಲದೆ ಕಾಫಿ ತೋಟ ಸಿನಿಮಾದಲ್ಲೂ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆ ಮೇಲು ಮಿಂಚಿದ್ದಾರೆ.

Recommended Video

ನಟನೆ ಜೊತೆಗೆ ಮತ್ತೊಂದು ಕೆಲಸಕ್ಕೆ ಕೈ ಹಾಕಿದ ಲೂಸ್ ಮಾದ ಯೋಗಿ | Filmibeat Kannada
ಸೀಮಂತ ಸಂಭ್ರಮದ ಫೋಟೋಗಳು ವೈರಲ್ ಆಗಿತ್ತು

ಸೀಮಂತ ಸಂಭ್ರಮದ ಫೋಟೋಗಳು ವೈರಲ್ ಆಗಿತ್ತು

ಕೆಲವು ದಿನಗಳ ಅಪೇಕ್ಷ ಸೀಮಂತ ಸಂಭ್ರಮದ ಫೋಟೋಗಳನ್ನು ಪವನ್ ಒಡೆಯರ್ ಹಂಚಿಕೊಂಡಿದ್ದರು. ಜೊತೆಗೆ ಸುಂದರ ಫೋಟೋಶೂಟ್ ಕೂಡ ಮಾಡಿಸಿದ್ದರು. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಸೀಮಂತ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

More from Filmibeat

English summary
Sandalwood Director Pawan Wadeyar wife Apeksha purohit gives birth baby boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X