For Quick Alerts
  ALLOW NOTIFICATIONS  
  For Daily Alerts

  'ಬಾಳಿಗೊಂದು ಅರ್ಥ ಕೊಟ್ಟ ಮಹಾಲಕ್ಷ್ಮಿ': ಪತ್ನಿ ಹುಟ್ಟುಹಬ್ಬಕ್ಕೆ ಪವನ್ ಶುಭಾಶಯ

  |

  ಕನ್ನಡದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ತಮ್ಮ ಪತ್ನಿ ಹುಟ್ಟುಹಬ್ಬಕ್ಕೆ ಶುಭಕೋರಿದರು. ಟ್ವಿಟ್ಟರ್ ಮೂಲಕ ಮಡದಿ ಜನುಮದಿನ ಕೊಂಡಾಡಿದ ಒಡೆಯರ್ ''ಬಾಳಿಗೊಂದು ಅರ್ಥ ಕೊಟ್ಟ ಮಹಾಲಕ್ಷ್ಮಿಗೆ ಹುಟ್ಟುಹಬ್ಬದ ಶುಭಾಶಯಗಳು'' ಎಂದು ಸಂತಸ ಹಂಚಿಕೊಂಡಿದ್ದಾರೆ.

  ''ಬಾಳಿಗೊಂದು ಅರ್ಥ ಕೊಟ್ಟು, ಜೋತಯಲ್ಲಿರುವೆ ಅಂತ ಮಾತು ಕೊಟ್ಟು, ನನ್ನ ತಿಕ್ಕಲು ಐಡಿಯಾಗಳನ್ನು ಸಹಿಸಿ ಕೊಂಡು, ಯಾವಾಗಲು ನನ್ನನ್ನು ಹುರುದುಂಬಿಸಿಕೊಂಡು, ಸದಾ ನಗು ನಗುತ್ತಾ ಎಲ್ಲರನ್ನು ನಗಿಸುತ್ತಾ ಇರುವ ನಮ್ಮ ಮನೆ "ಮಹಾಲಕ್ಷ್ಮಿ" ಅಪೇಕ್ಷಾ ಪುರೋಹಿತ್ ಹುಟ್ಟುಹಬ್ಬದ ಹಬ್ಬದ ಶುಭಾಶಯಗಳು ಚಿನ್ನಿ. ಎಲ್ಲಾ ಕನಸುಗಳು ಈಡೇರಲಿ. ಜೈ ಚಾಮುಂಡೇಶ್ವರಿ'' ಎಂದು ಟ್ವೀಟ್ ಮಾಡಿದ್ದಾರೆ.

  ಪುತ್ರನ ನಾಮಕರಣ ಸಂಭ್ರಮದಲ್ಲಿ ಪವನ್ ಒಡೆಯರ್ ದಂಪತಿ: ಏನೆಂದು ಹೆಸರಿಟ್ಟಿದ್ದಾರೆ?ಪುತ್ರನ ನಾಮಕರಣ ಸಂಭ್ರಮದಲ್ಲಿ ಪವನ್ ಒಡೆಯರ್ ದಂಪತಿ: ಏನೆಂದು ಹೆಸರಿಟ್ಟಿದ್ದಾರೆ?

  2017ರಲ್ಲಿ ಪವನ್ ಒಡೆಯರ್ ಮತ್ತು ಆಪೇಕ್ಷಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ 2018ರಲ್ಲಿ ವಿವಾಹವಾದರು. ಕಳೆದ ವರ್ಷ ಡಿಸೆಂಬರ್ 10 ರಂದು ಆಪೇಕ್ಷಾ ಗಂಡು ಮಗುವಿಗೆ ಜನ್ಮ ನೀಡಿದರು. ಆ ಮಗುವಿಗೆ ಶೌರ್ಯ ಎಂದು ನಾಮಕರಣ ಸಹ ಮಾಡಲಾಗಿದೆ. ವಿಶೇಷ ಅಂದ್ರೆ ಡಿಸೆಂಬರ್ 10 ರಂದು ಪವನ್ ಒಡೆಯರ್ ಹುಟ್ಟುಹಬ್ಬವೂ ಆಗಿತ್ತು.

  ಸಿನಿಮಾ ವಿಚಾರಕ್ಕೆ ಬರುವುದಾದರೇ ಸದ್ಯ ಒಡೆಯರ್ ರೇಮೊ ಎಂಬ ಸಿನಿಮಾ ಮಾಡ್ತಿದ್ದಾರೆ. ಇಶಾನ್ ಹಾಗೂ ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದು, ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ.

  ಮಕ್ಕಳ ಜವಾಬ್ದಾರಿ ಏನು ಅನ್ನೋದನ್ನ ತೋರಿಸಿಕೊಟ್ರು Duniya Vijay | Filmibeat Kannada

  ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಸದ್ಯ, ಕೋವಿಡ್ ಬಿಕ್ಕಟ್ಟಿನಿಂದ ಚಿತ್ರದ ಕೆಲಸಗಳು ಸ್ಥಗಿತಗೊಂಡಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದ ಬಳಿಕ ಚಿತ್ರದ ಬಿಡುಗಡೆಗೆ ತಯಾರಿ ನಡೆಸಲಾಗುವುದು.

  English summary
  Director Pawan Wadeyar Wishes his wife Apeksha Purohit on her birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X