ಥೈಲ್ಯಾಂಡ್ ಫೋಟೋಗೆ ಅಪಸ್ವರ ; ಪಾಯಲ್ ಚೆಂಗಪ್ಪ ಖಡಕ್ ಉತ್ತರ
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಸಾಮಾಜಿಕ ಜಾಲತಾಣದಲ್ಲಿ ದಿನಾ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು.

ಸೆಲೆಬ್ರೆಟಿಗಳೆಂದ ಮೇಲೆ ನಾವು ಅಷ್ಟೂ ಮಾಡದೇ ಇದ್ದರೆ ಹೇಗೆ ಎನ್ನುವುದು ಬಹುತೇಕರ ಆಲೋಚನೆ ? ಆದರೆ ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಮತ್ತೂ ಕೆಲವರು ನಿರ್ಲಕ್ಷ್ಯಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬಿತ್ತಲಾಗುವ ನಕಾರಾತ್ಮಕತೆಯಿಂದ ದೂರ ಇರುವ ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ಪಾಯಲ್ ಚೆಂಗಪ್ಪ.
ಹೌದು.ಪಾಯಲ್ ಚೆಂಗಪ್ಪ.. ಯೂಟ್ಯೂಬ್ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಇವರ "ಅಮೃತಾಂಜನ್" ಯಾರು ತಾನೇ ಮರೆಯಲು ಸಾಧ್ಯ. ಕಿರುಚಿತ್ರದ ರೂಪದಲ್ಲಿ ಬಂದು ಆ ನಂತರ ಸಿನಿಮಾ ರೂಪವನ್ನು ಪಡೆದ ಈ "ಅಮೃತಾಂಜನ್ " ಜನಪ್ರಿಯತೆ ಹೇಗಿದೆ ಅಂದರೆ ಜನ ಇವರನ್ನು ಪ್ರೀತಿಯಿಂದ "ಟೊಮೆಟೊ ಮುಂಡೆ" ಎಂದೇ ಕರೆಯುತ್ತಾರೆ. ಸದ್ಯ ಇವರ "ಜೆರಾಕ್ಸ್" ವೆಬ್ ಸರಣಿ ಪ್ರಸಾರವಾಗುತ್ತಿದೆ.
ಇಂಥಾ ಪಾಯಲ್ ಮೊನ್ನೆ ಮೊನ್ನೆ ಥಾಯ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ಬ್ಯಾಕ್ ಲೆಸ್ ಉಡುಪಿನಲ್ಲಿ ಫೋಟೊ ಹಂಚಿಕೊಂಡಿದ್ದರು. ಇಷ್ಟಕ್ಕೆ ರೊಚ್ಚಿಗೆದ್ದ ಕೆಲವರು ಪಾಯಲ್ ಅವರ ಮೇಲೆ ಸೈಬರ್ ದಾಳಿ ಮಾಡಿದರು. ಕೆಟ್ಟಾ ಕೊಳಕು ಕಾಮೆಂಟ್‌ಗಳನ್ನು ಕೂಡ ಮಾಡಿದರು.
ಸದ್ಯ ಪಾಯಲ್ ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ''ವಿಜಯ್ ಕರ್ನಾಟಕ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪಾಯಲ್, ಅದೊಂದು ನಾರ್ಮಲ್ ಬ್ಯಾಕ್‌ಲೆಸ್ ಫೋಟೊ ಆಗಿತ್ತಷ್ಟೇ ಎಂದು ಹೇಳಿದ್ದಾರೆ. ನಾನು ಹಾಕಿದ್ದು ಬಿಕಿನಿಯೂ ಅಲ್ಲ, ಸ್ವಿಮ್ ಸೂಟ್ ಕೂಡ ಅಲ್ಲ ಎಂದು ಹೇಳಿರುವ ಪಾಯಲ್ ಅದು ಬೀಚ್ ವೇರ್ ಎಂದು ಹೇಳಿದ್ದಾರೆ.
ಮುಂದುವರೆದು ಪ್ರವಾಸಕ್ಕೆ ಹೋದಾಗ ಮಾಡರ್ನ್ ಡ್ರೆಸ್ ಹಾಕಿದರೆ ಸಂಪ್ರದಾಯ ಅದು ಇದು ಎಂದು ಮಾತಾಡೋ ಈ ಜನ, ನಾನು ಮೂಲತಃ ಕೂರ್ಗಿ ನನ್ನ ಮೊದಲ ಸಿನಿಮಾದ ಸಮಯದಲ್ಲಿ ನಾನು ಸಾಂಪ್ರದಾಯಿಕ ಶೈಲಿಯಲ್ಲೇ ಬಂದಿದ್ದೆ ಅದಕ್ಕೆ ಯಾರು ಮೆಚ್ಚಿ ಒಂದು ನಾಲ್ಕು ಒಳ್ಳೆಯ ಮಾತುಗಳನ್ನಾಡಿಲ್ಲ ಎಂದಿದ್ದಾರೆ. ಮಾಡರ್ನ್ ಡ್ರೆಸ್ ಹಾಕಿದಾಗ ಮಾತ್ರ ಇವರೆಲ್ಲಾ ಬಂದು ಕಾಮೆಂಟ್ ಮಾಡ್ತಾರೆ ಎಂದು ಹೇಳಿದ್ದಾರೆ.
ಹೀಗೆ ಕಾಮೆಂಟ್ ಮಾಡೋರು ಎಲ್ಲರೂ ಯಾರು ತಮ್ಮ ಅಕೌಂಟಿಂದ ಮಾಡಲ್ಲ ಬದಲಿಗೆ ಫೇಕ್ ಅಕೌಂಟಿಂದ್ ಮಾಡ್ತಾರೆ ಎಂದು ಹೇಳಿರುವ ಪಾಯಲ್ ನನ್ನ ಕಾಲ್ ಎಳೀಬೇಕು, ನನ್ನ ಡೌನ್ ಮಾಡ್ಬೇಕು ಎಂಬ ಉದ್ದೇಶದಿಂದಲೇ ಈ ತರಹದ ಕಾಮೆಂಟ್ ಮಾಡ್ತಾರೆ ಎಂದಿದ್ದಾರೆ. ನಾನು ಇದಕ್ಕೆಲ್ಲಾ ಜಾಸ್ತಿ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಟ್ರೋಲಿಗರಿಗೆ, ಕಾಲೆಳೆಯುವರಿಗೆ ಖಡಕ್ ಉತ್ತರವನ್ನು ಕೂಡ ನೀಡಿದ್ದಾರೆ.
ಸದ್ಯ ಪಾಯಲ್ ಚೆಂಗಪ್ಪಾ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಚರ್ಚೆಗೆ ಗ್ರಾಸವಾಗಿದೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಕಿರುಕುಳ ನೀಡುವ ದುರುಳರ ವಿರುದ್ಧ ಪಾಯಲ್ ಕಾನೂನು ಸಮರ ಸಾರಬೇಕು ಎಂಬ ಆಶಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಟ್ರೋಲ್‌ಗಳಿಗೆಲ್ಲಾ ತಲೆ ಕೆಡಿಸಿಕೊಳ್ಳಬೇಡಿ ಎಂದು ಪಾಯಲ್‌ಗೆ ಹೇಳುತ್ತಿದ್ದಾರೆ.


Click it and Unblock the Notifications