ಈ ನಟಿಯನ್ನ 'ಪೋರ್ನ್ ಸ್ಟಾರ್' ಎಂದು ಟ್ರೋಲ್ ಮಾಡ್ತಿದ್ದಾರಂತೆ
'ಆರ್ ಎಕ್ಸ್ 100' ಬಳಿಕ ನಟಿ ಪಾಯಲ್ ರಜಪೂತ್ ನಟಿಸಿರುವ ಸಿನಿಮಾ ಆರ್.ಡಿ.ಎಕ್ಸ್ ಲವ್. ಮೊದಲ ಸಿನಿಮಾದಲ್ಲಿ ಬೋಲ್ಡ್ ನಟನೆ, ಬೋಲ್ಡ್ ಡೈಲಾಗ್ ಮೂಲಕ ಸಖತ್ ಸದ್ದು ಮಾಡಿದ್ದ ಪಾಯಲ್ ಎರಡನೇ ಚಿತ್ರದಲ್ಲೂ ಅಂತಹದ್ದೇ ಅಬ್ಬರ ಮಾಡುತ್ತಿದ್ದಾರೆ.
ಅದಕ್ಕೆ ಕಾರಣ ಆರ್.ಡಿ.ಎಕ್ಸ್ ಲವ್ ಚಿತ್ರದ ಟೀಸರ್. ಈ ಸಿನಿಮಾದಲ್ಲೂ ಪಾಯಲ್ ಸಖತ್ ಹಾಟ್ ಆಗಿ ನಟಿಸಿದ್ದು, ಇದನ್ನ ನೋಡಿದ ನೆಟ್ಟಿಗರು ''ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ'' ಎಂದು ಕಾಮೆಂಟ್ ಮಾಡುತ್ತಿದ್ದಾರಂತೆ.

ಈ ಬಗ್ಗೆ ಮಾತನಾಡಿರುವ ನಟಿ ಪಾಯಲ್ ''ನಾನು ಮಾಡಿದ ತಪ್ಪು ಏನು, ಹಾಟ್ ಆಗಿ ನಟಿಸಿದ್ದು ತಪ್ಪಾ. ಸಿನಿಮಾ ಕಥೆ ಚೆನ್ನಾಗಿದೆ, ಅದಕ್ಕೆ ಬೇಕಾದ ರೀತಿ ಅಭಿನಯ ಮಾಡಿದ್ದೀನಿ. ಅದಕ್ಕೆ ಪೋರ್ನ್ ಸ್ಟಾರ್ ಅಂದ್ರೆ ಏನು ಅರ್ಥ. ಇದು ನನಗೆ ಬೇಸರ ತರಿಸಿದೆ. ರಾತ್ರಿಯಲ್ಲ ಈ ಬಗ್ಗೆ ಯೋಚನೆ ಮಾಡಿದ್ದೀನಿ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಂಜಾಬಿಯಲ್ಲಿ ಚೊಚ್ಚಲ ಸಿನಿಮಾ ಮಾಡಿದ್ದ ಪಾಯಲ್ ರಜಪೂತ್, ವೀರೇ ಕಿ ವೆಡ್ಡಿಂಗ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಬಳಿಕ ಆರ್ ಎಕ್ಸ್ 100 ಸಿನಿಮಾ ಮಾಡಿ ಸ್ಟಾರ್ ನಟಿ ಎನಿಸಿಕೊಂಡರು.

ಈಗ, ತಮಿಳು, ತೆಲುಗಿನಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಬರ್ತಿದ್ದು, ಆರ್ ಡಿ ಎಕ್ಸ್ ಲವ್ ಸಿನಿಮಾದ ಮೇಲೆ ಭರವಸೆ ಹೆಚ್ಚಿದೆ. ಶಂಕರ್ ಬಾನು ಈ ಚಿತ್ರ ನಿರ್ದೇಶನ ಮಾಡಿದ್ದು, ಸಿ ಕಲ್ಯಾಣ್ ನಿರ್ಮಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.


Click it and Unblock the Notifications











