For Quick Alerts
  ALLOW NOTIFICATIONS  
  For Daily Alerts

  ಹೊಸ ಪ್ರಯೋಗ ಮಾಡಿ ಸಕ್ಸಸ್ ಕಂಡ ಸ್ಟಾರ್ ನಿರ್ದೇಶಕ ಪಿಸಿ ಶೇಖರ್

  |

  ಸಾಕ್ಷ್ಯಚಿತ್ರ, ಜಾಹೀರಾತುಗಳನ್ನು ಮಾಡಿ, ಅದರಿಂದ ಸಿಕ್ಕ ಅನುಭವದೊಂದಿಗೆ ಚಿತ್ರರಂಗ ಪ್ರವೇಶಿಸುವುದು ಸಾಮಾನ್ಯ. ಹಲವು ನಿರ್ದೇಶಕ, ಬರಹಗಾರರು, ತಂತ್ರಜ್ಞರು ಇದೇ ಮಾರ್ಗದಲ್ಲಿ ಬಂದಿರುವ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬರು ನಿರ್ದೇಶಕ ಸ್ಟಾರ್ ನಟರ ಚಿತ್ರಗಳನ್ನು ನಿರ್ದೇಶಿಸಿ ಸಾಕಷ್ಟು ಹೆಸರು ಮಾಡಿದ ಮೇಲೆ ಮೊಟ್ಟ ಮೊದಲ ಸಲ ಜಾಹೀರಾತು ಡೈರೆಕ್ಟ್ ಮಾಡಿದ್ದಾರೆ.

  ಇಂತಹದೊಂದು ಪ್ರಯೋಗ ಮಾಡಿ ಯಶಸ್ಸು ಕಂಡಿರುವುದು ನಿರ್ದೇಶಕ ಪಿಸಿ ಶೇಖರ್. ರೊಮಿಯೋ, ಅರ್ಜುನ, ಸ್ಟೈಲ್‌ಕಿಂಗ್, ರಾಗ ಹಾಗೂ ದಿ ಟೆರರಿಸ್ಟ್ ಅಂತಹ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಪಿಸಿ ಶೇಖರ್ ದುಬಾರಿ ಜಾಹೀರಾತು ತಯಾರಿಸಿ ಸುದ್ದಿಯಾಗಿದ್ದಾರೆ. ಪ್ರತಿಭಾನ್ವಿತ ನಟಿ ಸಂಯುಕ್ತಾ ಹೊರನಾಡು ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ದೊಡ್ಡ ಬಜೆಜ್‌ನಲ್ಲಿ ತಯಾರಿಸಲಾಗಿದೆಯಂತೆ. ಮುಂದೆ ಓದಿ...

  ಇದೊಂದು ಸವಾಲಿನ ಕೆಲಸ

  ಇದೊಂದು ಸವಾಲಿನ ಕೆಲಸ

  ''ಸಿನಿಮಾ ಮತ್ತು ಜಾಹೀರಾತಿಗೆ ಬಹಳ ದೊಡ್ಡ ವ್ಯತ್ಯಾಸ ಇದೆ. ನಾವು ಏನು ಹೇಳಬೇಕು ಅದನ್ನು ಹೇಳಲು ಸಿನಿಮಾದಲ್ಲಿ ಕಾಲಾವಕಾಶ ಇರುತ್ತೆ. ಆದರೆ ಜಾಹೀರಾತಿನಲ್ಲಿ ಅದು ಕಷ್ಟ. ಕೇವಲ 10 ಸೆಕೆಂಡ್‌ನಲ್ಲಿ ವಸ್ತು ಯಾವುದು, ಅದು ಹೇಗೆ ಕೆಲಸ ಮಾಡುತ್ತೆ, ಅದರ ತಾಂತ್ರಿಕ ಅಂಶಗಳೇನು, ಅದರಿಂದ ಉಪಯೋಗ ಏನು ಹಾಗೂ ಅದು ಎಲ್ಲಿ ಸಿಗುತ್ತೆ ಎನ್ನುವ ಅಷ್ಟು ವಿಚಾರಗಳನ್ನು ತೋರಿಸಬೇಕು. ಇದು ನಿಜವಾಗಲೂ ಸವಾಲಿನ ಕೆಲಸ. ಮೊದಲ ಸಲ ಜಾಹೀರಾತು ಮಾಡಿ ಮುಗಿಸಿದ್ದು ನಿಜಕ್ಕೂ ಒಳ್ಳೆಯ ಅನುಭವ'' ಎಂದು ಪಿಸಿ ಶೇಖರ್ ಹೇಳಿದರು.

  ಮತ್ತೆ ಒಂದಾದ ಪ್ರಜ್ವಲ್ ದೇವರಾಜ್-ಪಿಸಿ ಶೇಖರ್ ಜೋಡಿಮತ್ತೆ ಒಂದಾದ ಪ್ರಜ್ವಲ್ ದೇವರಾಜ್-ಪಿಸಿ ಶೇಖರ್ ಜೋಡಿ

  ಸಿನಿಮಾಗೆ ಅನುಕೂಲ ಆಗ್ತಿದೆ

  ಸಿನಿಮಾಗೆ ಅನುಕೂಲ ಆಗ್ತಿದೆ

  ''ಜಾಹೀರಾತು ಮಾಡಿದ್ಮೇಲೆ ಸಿನಿಮಾ ಮೇಕಿಂಗ್‌ನಲ್ಲಿ ಈ ವಿಧಾನ ಅನುಕೂಲ ಆಗ್ತಿದೆ. ಇದಕ್ಕೂ ಮುಂಚಿತವಾಗಿದ್ದ ವೇಗಕ್ಕಿಂತ ಈಗ ವೇಗವಾಗಿ ಸಿನಿಮಾ ಸ್ಕ್ರಿಪ್ಟ್ ಬರೆಯುತ್ತಿದ್ದೇನೆ. ಅರ್ಜುನ್ ಜನ್ಯ ಅವರಿಗೂ ಒಂದು ರೀತಿ ಸವಾಲಾಗಿತ್ತು. ಸಿನಿಮಾ ಸ್ಟೈಲ್ ಬಿಟ್ಟು ಮ್ಯೂಸಿಕ್ ಮಾಡಬೇಕಿತ್ತು. ಆಕರ್ಷಣೆಯಾಗಿ ಮತ್ತು ಸ್ಟೈಲ್ ಆಗಿ ಬರಬೇಕಿತ್ತು. ಜನ್ಯ ಸಹ ಸಮಯ ತಗೊಂಡು ಮಾಡಿದ್ರು. ಬಹಳ ಚೆನ್ನಾಗಿ ಬಂದಿದೆ'' ಎಂದರು.

  ಜಾಹೀರಾತಿನಲ್ಲೂ ಸಂಯುಕ್ತಾ ಪ್ರಾಣಿಪ್ರೀತಿ

  ಜಾಹೀರಾತಿನಲ್ಲೂ ಸಂಯುಕ್ತಾ ಪ್ರಾಣಿಪ್ರೀತಿ

  ''ಈ ಜಾಹೀರಾತು ಆನ್‌ಲೈನ್ ಶಾಪಿಂಗ್ ಕುರಿತಾಗಿದೆ. ನಟಿ ಸಂಯುಕ್ತಾ ಹೊರನಾಡು ಪ್ರಾಣಿಪ್ರಿಯರು. ವಿಶೇಷವಾಗಿ ಶ್ವಾನಗಳನ್ನು ಹೆಚ್ಚು ಇಷ್ಟ ಪಡ್ತಾರೆ. ಅವರ ಆ ಸ್ವಭಾವ ಈ ಜಾಹೀರಾತಿನ ಪಾತ್ರಕ್ಕೂ ಸೂಕ್ತವಾಗಿದೆ. ವಿಶ್ಯೂಲ್ ಆಗಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ'' ಎಂದು ನಿರ್ದೇಶಕರು ಸಂತಸ ವ್ಯಕ್ತಪಡಿಸಿದರು.

  ಪ್ರಜ್ವಲ್ ಜೊತೆ ಸಿನಿಮಾ

  ಪ್ರಜ್ವಲ್ ಜೊತೆ ಸಿನಿಮಾ

  'ದಿ ಟೆರರಿಸ್ಟ್' ಆದ್ಮೇಲೆ ಪಿಸಿ ಶೇಖರ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಅದರ ಜೊತೆಗೆ ವೆಬ್ ಸಿರೀಸ್‌ವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ 'ಅರ್ಜುನ' ಸಿನಿಮಾದಲ್ಲಿ ಪ್ರಜ್ವಲ್ ಜೊತೆ ಕೆಲಸ ಮಾಡಿದ್ದರು.

  English summary
  Raaga, Style King, Arjun fame director PC Shekar has direct Advertisement for the first time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X