ಕ್ಯಾಬ್ ಡ್ರೈವರ್ ಆದ ನಟ ಪ್ರಜ್ವಲ್ ದೇವರಾಜ್
ಸ್ಯಾಂಡಲ್ ವುಡ್ ನಟ ಪ್ರಜ್ವಲ್ ದೇವರಾಜ್ ಜಂಟಲ್ ಮ್ಯಾನ್ ಸಿನಿಮಾ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬಂದಿಲ್ಲ. ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಇದೀಗ ಕ್ಯಾಬ್ ಡ್ರೈವರ್ ಆಗಿದ್ದಾರೆ. ಲಾಕ್ ಡೌನ್ ಬಳಿಕ ಪ್ರಜ್ವಲ್ ಕ್ಯಾಬ್ ಡ್ರೈವರ್ ಆದ್ರಾ ಅಂತ ಯೋಚಿಸುತ್ತಿದ್ದೀರಾ? ಪ್ರಜ್ವಲ್ ಕ್ಯಾಬ್ ಡ್ರೈವರ್ ಆಗಿದ್ದು ನಿಜ ಆದರೆ ಸಿನಿಮಾದಲ್ಲಿ.
ಹೌದು, ಪ್ರಜ್ವಲ್ ಮುಂದಿನ ಸಿನಿಮಾದಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾಗೆ ನಿರ್ದೇಶಕ ಪಿಸಿ ಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ನಿರ್ದೇಶ ಪಿಸಿ ಶೇಖರ್ ಮತ್ತು ಪ್ರಜ್ವಲ್ ಅರ್ಜುನ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಸಿನಿಮಾ ಬಳಿಕ ಮತ್ತೆ ಇಬ್ಬರು ಒಂದಾಗುತ್ತಿದ್ದಾರೆ.
ಸದ್ಯ ಸಿನಿಮಾತಂಡ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಸ್ಕ್ರಿಪ್ಟ್ ಕೆಲಸವನ್ನು ಮುಗಿಸಿದೆ. ಡಿಸೆಂಬರ್ ಕೊನೆಯಲ್ಲಿ ಅಥವಾ ಜನವರಿಯಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿಕೊಂಡಿದೆ.

ಈ ಸಿನಿಮಾ ನೈಜ ಘಟನೆ ಆಧಾರಿತ ಚಿತ್ರವಾಗಿದೆಯಂತೆ. ನಾಲ್ಕು ಗಂಟೆಗಳಲ್ಲಿ ನಡೆದ ಒಂದು ಘಟನೆಯ ಸುತ್ತ ಈ ಸಿನಿಮಾವಿರಲಿದೆ ಎಂದು ಹೇಳಲಾಗುತ್ತಿದೆ. ವಾಸ್ತವಕ್ಕೆ ಹತ್ತಿರವಾಗಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ಕ್ಯಾಬ್ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇನ್ನೂ ಉಳಿದಂತೆ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ. ಪ್ರಜ್ವಲ್ ಗೆ ನಾಯಕಿಯಾರು ಎನ್ನುವ ವಿಚಾರ ಬಹಿರಂಗವಾಗಬೇಕಿದೆ.


Click it and Unblock the Notifications











