"ನ್ಯೂಡ್ ಸಿನಿಮಾದಲ್ಲಿ ನಟಿಸ್ತೀರಾ ಅಂದ.. ಚಪ್ಪಲಿ ತಗೋಬೇಕಾ ಅಂತ ತಲೆ ಎತ್ತಿ ನೋಡಿದೆ"–'ಪೆಂಟಗನ್' ನಟಿ!

By ಫಿಲ್ಮಿಬೀಟ್ ಡೆಸ್ಕ್

ಐದು ನಿರ್ದೇಶಕರು ಸೇರಿ ಹೆಣೆದ ಕಥೆ ಕನ್ನಡ ಸಿನಿಮಾ 'ಪೆಂಟಗನ್' ಏಪ್ರಿಲ್ 7ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಒಂದು ಅಧ್ಯಾಯದಲ್ಲಿ ನಟಿ ತನಿಷಾ ಕುಪ್ಪಂಡ ಬೋಲ್ಡ್ ಸೀನ್ ಒಂದರಲ್ಲಿ ನಟಿಸಿದ್ದಾರೆ. ಇದೇ ದೃಶ್ಯದ ಬಗ್ಗೆ ಯೂಟ್ಯೂಬರ್ ಕೇಳಿದ ಪ್ರಶ್ನೆಯೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

'ಪೆಂಟಗನ್' ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ತನಿಷಾ ಕುಪ್ಪಂಡಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈ ಸಂದರ್ಭದಲ್ಲಿ ಯೂಟ್ಯೂಬರ್‌ ಒಬ್ಬರು ನ್ಯೂಡ್ ಸಿನಿಮಾಗಳಲ್ಲಿ ನಟಿಸುತ್ತೀರಾ? ಪ್ರಶ್ನೆ ಮಾಡಿದ್ದರು. ಇದೇ ಪ್ರಶ್ನೆ ವಿರುದ್ಧ ಇಡೀ ಚಿತ್ರತಂಡ ತಿರುಗಿಬಿದ್ದಿದೆ. ಅಲ್ಲದೆ ಕೆಲ ಜನರು ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ನಟಿ ತನಿಷಾ ಅಂದು ನಡೆದ ಘಟನೆಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ, ವಿಸ್ತಾರವಾಗಿ ವಿವರಿಸಿದ್ದಾರೆ.

Pentagon Movie Actress Thanish Kupanda reacted youtuber nude questions

"10 ನಿಮಿಷ ಸಂದರ್ಶನ ಕೊಡಿ ಅಂತ ಬೇಡಿಕೊಂಡ"

ಯೂಟ್ಯೂಬರ್ ಕೇಳಬಾರದ ಪ್ರಶ್ನೆ ಕೇಳಿದ್ದಕ್ಕೆ ಎಲ್ಲಾಕಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ನಟಿ ತನಿಷಾ ಕುಪ್ಪಂಡ ಕೂಡ ಗರಂ ಆಗಿದ್ದರು. ಅಂದು ಯೂಟ್ಯೂಬರ್ ಹೇಗೆ ನಡೆದುಕೊಂಡು? ಪ್ರಶ್ನೆ ಯಾವಾಗ ಕೇಳಿದ? ಅನ್ನೋದನ್ನು ವಿವರಿಸಿದ್ದಾರೆ.

"ಅವನು ಸಂದರ್ಶನ ಮಾಡುವುದಕ್ಕೂ ಮುನ್ನ ಬೇರೆಯವರೂ ಇಂಟರ್ವ್ಯೂ ಮಾಡಿದ್ದರು. ಅವರು ಬೋಲ್ಡ್ ಆಗಿ ಮಾಡಿದ್ದೀರಲ್ಲಾ ಏನು ಅನಿಸಿಲ್ವಾ ಅಂತ ಕೇಳಿದ್ರು. ಬ್ಯಾಕ್‌ಲೆಸ್ ಶೂಟಿಂಗ್ ಹೇಗಿರುತ್ತೆ ಅಂತೆಲ್ಲ ವಿವರಿಸಿದೆ. ಇನ್ನೇನು ಮುಗೀತು ಅನ್ನುವಾಗ ಇವನು 10 ನಿಮಿಷ ಅಂತ ಬೇಡಿಕೊಂಡ. ಆರಂಭದಲ್ಲಿ ಬೋಲ್ಡ್ ರೋಲ್ ಅಂತಾನೇ ಶುರು ಮಾಡಿದ್ದ, ಆಗಲೇ ಅವನು ಪ್ರಿಪೇರ್ ಆಗಿದ್ದ ಅನಿಸುತ್ತೆ. ನಾನೇನೋ ಕೇಳಬೇಕು. ಇದರಿಂದ ವೈರಲ್ ಆಗುತ್ತೀನಿ ಅಂತ." ಎಂದು ತನಿಷಾ ಹೇಳಿದ್ದಾರೆ.

"ನ್ಯೂಡ್ ಸಿನಿಮಾ ಮಾಡುತ್ತೀರಾ?"

ತನಿಷಾ ಕುಪ್ಪಂಡ ಸಂದರ್ಶನ ಮಾಡುವಾಗ ಯೂಟ್ಯೂಬರ್ ಇಂತಹದ್ದೊಂದು ಪ್ರಶ್ನೆ ಕೇಳುತ್ತಾನೆ ಅನ್ನೋ ಸಣ್ಣದೊಂದು ಸುಳಿವು ಕೂಡ ಇರಲಿಲ್ಲ. ಆ ಕೇಳಿದಾಗ ನಟಿಯರ ಪ್ರತಿಕ್ರಿಯೆ ಹೇಗಿತ್ತು? ಅನ್ನೋದನ್ನು ತನಿಷಾ ಕುಪ್ಪಂಡ ವಿವರಿಸಿದ್ದಾರೆ.

Pentagon Movie Actress Thanish Kupanda reacted youtuber nude questions

"ಇಷ್ಟು ಮಾಡಿದ್ದೀರಾ, ನೀವು ನ್ಯೂಡ್ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ರೆಡಿಯಿದ್ದೀರಾ ಅಂತ ಕೇಳುತ್ತಾನೆ. ನಾನು ನೆಲ ನೋಡುತ್ತಿದ್ದೆ. ಸಡನ್ ಆಗಿ ತಲೆ ಎತ್ತಿದೆ. ಏನಕ್ಕೆ ನೋಡಿದೆ ಅಂದ್ರೆ, ಚಪ್ಪಲಿ ತಗೋಬೇಕಾ ಬೇಡ್ವಾ ಅಂತ. ಯೂಟ್ಯೂಬರ್ ಅನ್ನೋ ಕಾರಣಕ್ಕೆ ನಾನು ಏನೂ ಮಾಡುವುದಕ್ಕೆ ಹೋಗಿಲ್ಲ. ಬೇರೆ ಯಾರೋ ಆಗಿದ್ದರೆ, ಮೊದಲು ಹೊಡೆದು ಆ ಮೇಲೆ ಉತ್ತರ ಕೊಡುತ್ತಿದೆ." ಎಂದು ಪೆಂಟಗನ್ ನಟಿ ಹೇಳಿದ್ದಾರೆ.

"ನಾನು ತಪ್ಪು ದಾರಿ ಹಿಡಿದು ಈ ಸಿನಿಮಾ ಮಾಡಿಲ್ಲ"

"ನಾನು ತಪ್ಪು ದಾರಿ ಹಿಡಿದು ಈ ಸಿನಿಮಾ ಮಾಡಿಲ್ಲ. ನಾನು ಕಂಪ್ರಮೈಸ್ ಆಗಿ ಯಾರೂ ಈ ಸಿನಿಮಾವನ್ನು ಕೊಡಿಸಿಲ್ಲ. ಕಷ್ಟ ಪಟ್ಟಿದ್ದೀನಿ. ನಾನು ಆಡಿಷನ್ ಕೊಟ್ಟಿದ್ದೀನಿ. ನಾನು ಈ ಕ್ಯಾರೆಕ್ಟರ್‌ಗೆ ಸೂಟ್ ಆಗುತ್ತೇನೆ ಅಂತ ಅನಿಸಿದ ಮೇಲೆ, ಗುರು ಅವರು ಹೇಳಿದ್ದರು. ಈ ತರ ಬೋಲ್ಡ್ ಆಗಿರುವಂತಹ ಸೀಕ್ವೆನ್ಸ್ ಇರುತ್ತೆ. ಇದನ್ನು ಎದುರಿಸಬೇಕಾದಂತಹ ಸನ್ನಿವೇಶಗಳು ಬರುತ್ತೆ ಇದಕ್ಕೆ ಓಕೆನಾ ಅಂತ ಕೇಳಿದ್ದರು." ಎಂದು ತನಿಷಾ ಆಕ್ರೋಶ ಹೊರ ಹಾಕಿದ್ದಾರೆ.

"ಇಷ್ಟೆಲ್ಲಾ ಆದ್ಮೇಲೂ, ಅವನು ಹೊಡೀಲಿ. ಹೊಡೆದ ಮೇಲಾದರೂ ನಾನು ಫೇಮಸ್ ಆಗುತ್ತೆ ಅನ್ನೋ ಮಾತನ್ನು ಹೇಳುತ್ತಾನೆ. ಇಷ್ಟೆಲ್ಲಾ ಆದರೂ, ಅವನಿಗೆ ಪಶ್ಚಾತಾಪ ಅನ್ನೋದು ಇಲ್ಲ ಅವನಿಗೆ. ಈ ಮ್ಯಾಟರ್ ಪೊಲೀಸ್‌ ಸ್ಟೇಷನ್‌ವರೆಗೂ ಹೋಯ್ತು." ಎಂದು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

"ಪ್ರಚಾರಕ್ಕಾಗಿ ವಿವಾದ ಆಗಿದ್ದಲ್ಲ"

ತನಿಷಾ ಕುಪ್ಪಂಡಾ ಬೆಂಬಲಕ್ಕೆ ಬಂದಿದ್ದ ನಿರ್ದೇಶಕ ರಘು ಶಿವಮೊಗ್ಗ ಕೂಡ ಯೂಟ್ಯೂಬರ್ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಹಾಗೇ ಪ್ರಚಾರಕ್ಕೋಸ್ಕರ ಇದು ನಡೆದಿದ್ದು ಅಲ್ಲ. ನೆಗೆಟಿವ್ ಪಬ್ಲಿಸಿಟಿಯಿಂದ ಸಿನಿಮಾ ಗೆದ್ದಿಲ್ಲ ಎಂದು ಹೇಳಿದ್ದಾರೆ.

"ಪೊಲೀಸ್ ಸ್ಟೇಷನ್‌ನಲ್ಲಿ ಹೇಳಿದ್ವಿ. ಇವರ ನಂಬರ್ ಅವನ ಬಳಿ ಇತ್ತು. ಅದನ್ನು ಡಿಲೀಟ್ ಮಾಡಿಸಿ, ವಿಡಿಯೋವನ್ನು ಡಿಲೀಟ್ ಮಾಡಿಸಿ ಅಂತ ಹೇಳಿದ್ದೆವು. ಆದರೂ ಅವರು ಯಾಕೆ ಮಾಡಿಸಲಿಲ್ಲವೋ ನಮಗೆ ಗೊತ್ತಿಲ್ಲ. ಅದನ್ನೂ ಈಗ ಪೊಲೀಸರ ಬಳಿ ಹೋಗಿ ಕೇಳ ಬೇಕು. ಇದು ನಮ್ಮ ಸಿನಿಮಾ ಪಬ್ಲಿಸಿಟಿಗೋಸ್ಕರ್ ಮಾಡಿದ್ದಲ್ಲ. ನೆಗೆಟಿವ್ ಪಬ್ಲಿಸಿಟಿಯಿಂದ ಸಿನಿಮಾ ಗೆದ್ದ ಉದಾಹರಣೆಗಳು ಇಲ್ಲ." ಎಂದು ಇದು ಪಬ್ಲಿಸಿಟಿ ಕಿಮಿಕ್ ಅಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ.

More from Filmibeat

English summary
Pentagon Movie Actress Thanish Kupanda reacted youtuber nude questions, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X