For Quick Alerts
  ALLOW NOTIFICATIONS  
  For Daily Alerts

  'ಪೆಂಟಗನ್' ಮೂರನೇ ಪೋಸ್ಟರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್

  |

  ಗುರುದೇಶಪಾಂಡೆ ನಿರ್ಮಾಣದಲ್ಲಿ ತಯಾರಾಗುತ್ತಿರುವ ಪೆಂಟಗನ್ ಸಿನಿಮಾ ಬಹಳ ಕುತೂಹಲ ಮೂಡಿಸಿದೆ. ಐದು ನಿರ್ದೇಶಕರು, ಐದು ಕಥೆಗಳು ಎಂಬ ವಿಶೇಷವಾದ ಕಾರಣಕ್ಕಾಗಿ ಈ ಚಿತ್ರ ಹೆಚ್ಚು ಸುದ್ದಿಯಾಗುತ್ತಿದೆ.

  ಮೊದಲೆರಡು ಕಥೆಗಳ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು, ಈಗ ಮೂರನೇ ಪೋಸ್ಟರ್ ಬಿಡುಗಡೆಯಾಗಿದೆ. ಡಾಲಿ ಧನಂಜಯ್ ಅವರು ಪೆಂಟಗನ್ ಚಿತ್ರದ ಮೂರನೇ ಪೋಸ್ಟರ್ ಅನಾವರಣಗೊಳಿಸಿದ್ದಾರೆ.

  ಪೆಂಟಗನ್ ಚಿತ್ರಕ್ಕೆ ಸಾಥ್ ನೀಡಿದ ಡಿಂಪಲ್ ಕ್ವೀನ್ ರಚಿತಾ ರಾಮ್ಪೆಂಟಗನ್ ಚಿತ್ರಕ್ಕೆ ಸಾಥ್ ನೀಡಿದ ಡಿಂಪಲ್ ಕ್ವೀನ್ ರಚಿತಾ ರಾಮ್

  ಮೈಸೂರು ಪಾಕಿಗೆ ರೆಕ್ಕೆಗಳು ಬಂದಂತಿರುವ ಮೂರನೇ ಪೋಸ್ಟರ್ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ''Get rid of your demons, Else you will lose your angle' ಎಂಬ ಶೀರ್ಷಿಕೆಯೂ ಅಷ್ಟೇ ಆಕರ್ಷಿಸುತ್ತಿದೆ.

  ಡಾರ್ಲಿಂಗ್ ಕೃಷ್ಣ ಪೆಂಟಗನ್ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದರು. ರಚಿತಾ ರಾಮ್ ಮೊದಲನೇ ಪೋಸ್ಟರ್ ರಿಲೀಸ್ ಮಾಡಿದರು. ಎರಡನೇ ಪೋಸ್ಟರ್ ನಟಿ ಹರಿಪ್ರಿಯಾ ಅನಾವರಣ ಮಾಡಿದ್ದರು. ಇನ್ನೆರಡು ದಿನ ಇನ್ನೆರಡು ಪೋಸ್ಟರ್ ಬಹಿರಂಗವಾಗಲಿದೆ. ಅಂತಿಮವಾಗಿ ಜನವರಿ 18ಕ್ಕೆ ಪೆಂಟಗನ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ.

  ಸದ್ಯಕ್ಕೆ ಐದು ಕಥೆಗಳು ಯಾವುದು? ಆ ಕಥೆಗಳಿಗೆ ನಿರ್ದೇಶಕರು ಯಾರು ಹಾಗೂ ಅದರಲ್ಲಿ ನಟಿಸುವ ಕಲಾವಿದರುಗಳು ಯಾರು ಎನ್ನುವುದು ಗೌಪ್ಯವಾಗಿದೆ. ಪೆಂಟಗನ್ ಸಿನಿಮಾಗೆ ಸಂಬಂಧಿಸಿದಂತೆ ಒಂದೊಂದು ವಿಚಾರಗಳನ್ನು ಗುರುದೇಶಪಾಂಡೆ ಬಿಚ್ಚಿಡಲಿದ್ದಾರೆ.

  ಮತ್ತೊಂದು ದೊಡ್ಡ ಪ್ರಾಜೆಕ್ಟ್ ಅನೌನ್ಸ್ ಮಾಡಿದ Santosh Anandram | Filmibeat Kannada
  English summary
  G cinemas, Guru Deshpande production Pentagon's third theme poster for the third story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X