twitter
    For Quick Alerts
    ALLOW NOTIFICATIONS  
    For Daily Alerts

    'KGF 2' 8 ತಿಂಗಳು ಮುಂದೂಡಿದ್ದಕ್ಕೆ ಪ್ರಶ್ನೆ ಮಾಡಿದ್ದರು: ಈ ಸ್ಥಿತಿ ಬಗ್ಗೆ ಅರಿವಿತ್ತು ಎಂದ ಯಶ್

    |

    ಕೊರೊನಾದಿಂದ ಇಡೀ ಭಾರತದ ಚಿತ್ರರಂಗ ನಲುಗಿ ಹೋಗಿದೆ. ಕಳೆದ ಎರಡು ವರ್ಷಗಳಿ ಚಿತ್ರರಂಗ ಎಲ್ಲಿ ನಶಿಸಿ ಹೋಗುತ್ತದೋ ಎಂಬ ಆತಂಕ ಎದುರಾಗಿದೆ. ಒಂದೊಂದಾಗೇ ಚಿತ್ರಮಂದಿರಗಳು ಮುಚ್ಚುತ್ತಿವೆ. ಚಿತ್ರರಂಗದ ಕಾರ್ಮಿಕರ ಬದುಕು ಮತ್ತೆ ಅತಂತ್ರಕ್ಕೆ ಸಿಲುಕುವ ಭಯ ಎದುರಾಗಿದೆ. ಕನ್ನಡ ಚಿತ್ರರಂಗ ಮತ್ತೆ ನಷ್ಟ ಅನುಭವಿಸುವ ಭೀತಿಯಲ್ಲಿದೆ. ಇವೆಲ್ಲದರಿಂದ ಪಾರಾಗಲು ಇಡೀ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಲು ದೊಡ್ಡ ಸಿನಿಮಾ ಬಿಡುಗಡೆಯಾಗಲೇ ಬೇಕು. ಇಂತಹ ಸಿನಿಮಾಗಳಲ್ಲಿ 'ಕೆಜಿಎಫ್ 2' ಪ್ರಮುಖ ಸ್ಥಾನದಲ್ಲಿದೆ.

    'ಕೆಜಿಎಫ್ 2' ಕೇವಲ ಸ್ಯಾಂಡಲ್‌ವುಡ್ ಗತಿಯನ್ನಷ್ಟೇ ಬದಲಾಯಿಸಬಲ್ಲ ಸಿನಿಮಾ ಅಷ್ಟೇ ಅಲ್ಲ. ಇದು ಇಡೀ ಭಾರತೀಯ ಚಿತ್ರರಂಗಕ್ಕೆ ಹೊಸ ಹುರುಷು ನೀಡಬಹುದು ಎಂದು ನೀರಿಕ್ಷೆ ಮಾಡಲಾಗಿದೆ. ಈಗಿರುವ ಪರಿಸ್ಥಿತಿಗೆ ಕ್ರೇಜ್ ಇರುವ ಸಿನಿಮಾಗಳು ಬಿಡುಗಡೆಯಾಗಬೇಕು. ಆದರೆ, ಕೊರೊನಾ ಕಾಟಕ್ಕೆ ಬಿಗ್ ಬಜೆಟ್ ಸಿನಿಮಾಗಳು ಪೋಸ್ಟ್‌ಪೋನ್ ಆಗಿವೆ. ಅದರಲ್ಲಿ 'ಕೆಜಿಎಫ್ 2' ಕೂಡ ಒಂದು. ಎರಡನೇ ಅಲೆ ವೇಳೆ 8 ತಿಂಗಳು ಈ ಸಿನಿಮಾ ಮುಂದೂಡಲಾಗಿತ್ತು ಈ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

    8 ತಿಂಗಳು ಕೆಜಿಎಫ್ 2 ಮುಂದೂಡಿದ್ದೇಕೆ?

    8 ತಿಂಗಳು ಕೆಜಿಎಫ್ 2 ಮುಂದೂಡಿದ್ದೇಕೆ?

    'ಕೆಜಿಎಫ್ 2' ಅಂದುಕೊಂಡಂತೆ ಬಿಡುಗಡೆಯಾಗಿದ್ದರೆ 2021 ಜುಲೈ ತಿಂಗಳಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಎರಡನೇ ಅಲೆ ಆ ಸಂಭ್ರಮಕ್ಕೆ ಅನುವು ಮಾಡಿಕೊಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಸಿನಿಮಾವನ್ನು ಮುಂದೂಡಲೇಬೇಕಾಗಿತ್ತು. ಆದರೆ, ಒಂದು ಸಿನಿಮಾ ಒಂದೆರಡು ತಿಂಗಳು ಮುಂದೂಡುವುದು ಸಹಜ. ಆದರೆ, ಯಶ್ ಕೆಜಿಎಫ್ 2 ಬಿಡುಗಡೆಯನ್ನು 8 ತಿಂಗಳು ಮುಂದೂಡಿದ್ದರು. ಇಷ್ಟು ದಿನ ಮುಂದೂಡಿದ್ದಕ್ಕೆ ಸಹಜವಾಗಿಯೇ ಚಿತ್ರರಂಗದಲ್ಲಿ ಗೊಂದಲ ಮೂಡಿತ್ತು. ಆ ಬಗ್ಗೆ ಯಶ್ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.

    ಮೂರನೇ ಅಲೆ ನಿರೀಕ್ಷೆ ಮಾಡಿದ್ದ ಯಶ್

    ಮೂರನೇ ಅಲೆ ನಿರೀಕ್ಷೆ ಮಾಡಿದ್ದ ಯಶ್

    ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕೆಜಿಎಫ್ 2 ಸಿನಿಮಾವನ್ನು 8 ತಿಂಗಳು ಮುಂದೂಡಿದ್ದಕ್ಕೆ ಯಶ್ ಪ್ರತಿಕ್ರಿಯಿಸಿದ್ದಾರೆ. " ಕೆಜಿಎಫ್ 2 ಸಿನಿಮಾವನ್ನು ಎಂಟು ತಿಂಗಳು ಮುಂದೂಡಿದ್ದರ ಬಗ್ಗೆ ಜನರು ಯಾವಾಗಲೂ ನನ್ನನ್ನು ಕೇಳುತ್ತಿದ್ದರು. ನಾವು ಈ ಸನ್ನಿವೇಶವನ್ನು ನಿರೀಕ್ಷೆ ಮಾಡಿದ್ದೆವು. ಹೀಗಾಗಿ ನಾವು ಸುರಕ್ಷತೆಯ ದೃಷ್ಟಿಯಿಂದ ಸಿನಿಮಾವನ್ನು ಮುಂದೂಡಿದ್ದೆವು. ನನಗೆ ಮೂರನೇ ಬೇಗನೇ ಕಡಿಮೆ ಆಗುತ್ತೆ ಎಂಬುವ ಬಗ್ಗೆ ನಂಬಿಕೆಯಿದೆ. ವಿಶ್ವದೆಲ್ಲೆಡೆಯಿಂದ ಬಂದಿರುವ ವರದಿಯನ್ನು ಆಧರಿಸಿ ಈ ಮಾತನ್ನು ಹೇಳುತ್ತಿದ್ದೇನೆ." ಎಂದಿರುವ ಯಶ್ ಹೇಳಿಕೆಯನ್ನು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

    'ಕೆಜಿಎಫ್ 2'ಗೆ ಶೇ.100 ಚಿತ್ರಮಂದಿರ ಬೇಕು

    'ಕೆಜಿಎಫ್ 2'ಗೆ ಶೇ.100 ಚಿತ್ರಮಂದಿರ ಬೇಕು

    'ಕೆಜಿಎಫ್ 2' ಬಿಡುಗಡೆ ಯಾವಾಗ ಅನ್ನುವ ಅಭಿಮಾನಿಗಳ ಆತಂಕಕ್ಕೆ ಯಶ್ ಕೊಟ್ಟಿದ್ದಾರೆ. ಈಗಾಗಲೇ ಘೋಷಣೆ ಮಾಡಿದಂತೆ ಏಪ್ರಿಲ್ 14ರಂದೇ ಸಿನಿಮಾ ರಿಲೀಸ್ ಆಗುತ್ತೆ. ಆದರೆ, ಚಿತ್ರಮಂದಿರ ಶೇ.100ರಷ್ಟು ಓಪನ್ ಆಗಬೇಕು ಎಂದು ಹೇಳಿದ್ದಾರೆ. " ನಮಗೆ ಕೆಜಿಎಫ್ 2 ಸಿನಿಮಾ ಬಗ್ಗೆ ನಂಬಿಕೆ ಇದೆ. ನಾವು ಏನು ಮಾಡಿದ್ದೇವೆ ಅನ್ನುವುದನ್ನು ನೋಡಿದ ಬಳಿಕ ಈ ಮಾತನ್ನು ಹೇಳುತ್ತಿದ್ದೇನೆ. ಜನರು ಖುಷಿಯಾಗುತ್ತಾರೆ ಎನ್ನುವ ನಂಬಿಕೆ ನನಗಿದೆ. ಕೆಜಿಎಫ್ 2 ಸಿನಿಮಾ ಬಿಡುಗಡೆ ಮಾಡುವುದಕ್ಕೆ ನಮಗೆ ಶೇ.100 ರಷ್ಟು ಚಿತ್ರಮಂದಿರಗಳು ಬೇಕಿವೆ. ಇದನ್ನೇ ನಾವು ಮತ್ತು ನಮ್ಮ ತಂಡ ಎದುರು ನೋಡುತ್ತಿದ್ದೇವೆ." ಎಂದು ಯಶ್ ಹೇಳಿದ್ದಾರೆ.

    'ಕೆಜಿಎಫ್ 2' ಬಿಗ್ ಸಿನಿಮಾ ಫೈಟ್

    'ಕೆಜಿಎಫ್ 2' ಬಿಗ್ ಸಿನಿಮಾ ಫೈಟ್

    'ಕೆಜಿಎಫ್ 2' ರಿಲೀಸ್ ಡೇಟ್ ಅನ್ನು ಎಂಟು ತಿಂಗಳ ಹಿಂದನೇ ಘೋಷಣೆ ಮಾಡಲಾಗಿದೆ. ಆದರೂ, ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ತಮ್ಮ ಸಿನಿಮಾ 'ಲಾಲ್ ಸಿಂಗ್ ಚಡ್ಡ'ವನ್ನು ಏಪ್ರಿಲ್ 14ರಂದೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇನ್ನೊಂದು ಕಡೆ ದಳಪತಿ ವಿಜಯ್ ಸಿನಿಮಾ 'ಬೀಸ್ಟ್' ಕೂಡ ಇದೇ ದಿನ ರಿಲೀಸ್ ಆಗುತ್ತೆ ಎನ್ನಲಾಗಿದೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಯಶ್ ಸಿನಿಮಾದಲ್ಲಷ್ಟೇ ಅಲ್ಲ. ಚಿತ್ರಮಂದಿರದಲ್ಲೂ ಹೋರಾಟ ಮಾಡಬೇಕಾಗಿದೆ.

    English summary
    People always asked Yash why he was postponed KGF 2 eight months. We expected this situation, and that is why we pushed it to be on the safer side said in an interview.
    Tuesday, January 11, 2022, 12:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X