»   » ಚಂದನವನದಲ್ಲಿ ಮಿನುಗುತ್ತಿದೆ ಪುನರ್ವಸು

ಚಂದನವನದಲ್ಲಿ ಮಿನುಗುತ್ತಿದೆ ಪುನರ್ವಸು

Posted By:
Subscribe to Filmibeat Kannada

ಕೆಂಡ ಸಂಪಿಗೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ಮಿಂಚಿದ್ದ ನಟಿ ಮಾನ್ವಿತಾ ಹರೀಶ್. ಅಭಿನಯಿಸಿದ ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕರನ್ನ ಮೋಡಿ ಮಾಡಿದ ಈಕೆ ಕನ್ನಡ ಸಿನಿಮಾರಂಗದಲ್ಲಿ ಕೆಂಡಸಂಪಿಗೆ ಅಂತಾನೆ ಫೇಮಸ್ ಆದವರು.

ಅಭಿನಯಿಸಿದರೇ ಒಳ್ಳೆ ಚಿತ್ರದಲ್ಲಿ ಮಾತ್ರ ಎನ್ನುವ ನಿರ್ಧಾರ ಮಾಡಿಕೊಂಡಿರುವ ಮಾನ್ವಿತಾ ಪ್ರಾಮುಖ್ಯತೆ ಇರುವ ಪಾತ್ರಗಳಿಗೆ ಮಾತ್ರ ಗ್ರೀನ್ ಸಿಗ್ನಲ್ ಕೊಡ್ತಿದ್ದಾರೆ. ಕೆಂಡಸಂಪಿಗೆ ನಂತರ ಮತ್ತೆ ಅದೇ ನಿರ್ದೇಶಕರ ಜೊತೆ ಕೆಲಸ ಮಾಡಿರೋ ಮಾನ್ವಿತಾ ಹೆಸರಿಗೆ ಹೊಸ ಬಿರುದು ಸೇರಿಕೊಂಡಿದೆ.

ಜೋಗಿ, ಭೈರತಿ ರಣಗಲ್ಲು ರೆಕಾರ್ಡ್ ಬ್ರೇಕ್ ಮಾಡಿದ 'ಟಗರು ಶಿವ'

ಇಷ್ಟು ದಿನಗಳ ಕಾಲ ಕೆಂಡಸಂಪಿಗೆ ಮಾನ್ವಿತ ಅಂತ ಕರೆಯುತ್ತಿದ್ದ ಅಭಿಮಾನಿಗಳು ಟಗರು ಚಿತ್ರ ಆರಂಭ ಆದ ನಂತರ ಟಗರು ಪುಟ್ಟಿ ಎಂದು ಕರೆಯೋದಕ್ಕೆ ಪ್ರಾರಂಭ ಮಾಡಿದ್ದರು. ಟಗರು ಚಿತ್ರ ಬಿಡುಗಡೆ ಆಗಿದ ನಂತ್ರ ಮಾನ್ವಿತಾ ಪುನರ್ವಸು ಆಗಿ ಬದಲಾಗಿದ್ದಾರೆ. ಹೇಗೆ ಅಂತೀರಾ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಮಿನುಗುತ್ತಿರುವ ಪುನರ್ವಸು

ಮಾನ್ವಿತಾ ಹರೀಶ್ ಈಗ ಚಂದನವನದಲ್ಲಿ ಮಿನುಗುತ್ತಿರುವ ಪುನರ್ವಸು. ಹೌದು ಟಗರು ಚಿತ್ರ ಬಿಡುಗಡೆ ಆದ ನಂತರ ಕೆಂಡಸಂಪಿಗೆ, ಟಗರು ಪುಟ್ಟಿ ಇವೆಲ್ಲವೂ ಬದಲಾಗಿ ಅಭಿಮಾನಿಗಳು ಪುನರ್ವಸು ಅಂತಾನೇ ಕರೆಯೋದಕ್ಕೆ ಶುರು ಮಾಡಿದ್ದಾರೆ.

ಮೋಡಿ ಮಾಡುತ್ತಿದೆ ಮಾನ್ವಿತಾ ಅಭಿನಯ

ಕೆಲ ಪಾತ್ರಗಳು ತೆರೆ ಮೇಲೆ ನೋಡಿದ ತಕ್ಷಣ ಇಷ್ಟವಾಗುತ್ತೆ. ಇನ್ನು ಕೆಲ ಪಾತ್ರ ಸ್ವಲ್ಪ ಸಮಯದ ನಂತರ ಮನಸ್ಸಿನಲ್ಲಿ ಉಳಿದು ಬಿಡುತ್ತೆ ಅದೇ ರೀತಿಯಲ್ಲಿ ಟಗರು ಚಿತ್ರದ ಪುನರ್ವಸು ಪಾತ್ರ ಚಿತ್ರ ನೋಡಿ ಬಂದ ನಂತರ ಕಾಡುವುದಕ್ಕೆ ಶುರು ಮಾಡಿದೆ.

ಅಭಿನಯಕ್ಕೆ ಬೋಲ್ಡ್ ಆದ ಪ್ರೇಕ್ಷಕ

ಮಾನ್ವಿತಾ ಈ ಹಿಂದೆ ಅಭಿನಯಿಸಿದ ಚಿತ್ರಗಳ ಪಾತ್ರಕ್ಕೂ ಟಗರು ಪುನರ್ವಸು ಪಾತ್ರಕ್ಕೂ ಸಾಕಷ್ಟು ಬದಲಾವಣೆ ಇದೆ. ಔಟ್ ಲುಕ್, ಮ್ಯಾನರಿಸಂ ಎಲ್ಲವೂ ಬದಲಾಗಿದೆ. ತೆರೆ ಮೇಲೆ ಮೂಡಿ ಬಂದಿರುವ ಸಹಜ ನಟನೆಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಮೇಕಪ್ ಇಲ್ಲದೆ ಅಭಿನಯಿಸಿದ ನಟಿ

ಮಾನ್ವಿತಾ ಟಗರು ಸಿನಿಮಾದಲ್ಲಿ ಮೇಕಪ್ ಇಲ್ಲದೆ ಅಭಿನಯಿಸಿದ್ದಾರೆ. ಪಾತ್ರ ನೈಜವಾಗಿರಲಿ ಎನ್ನುವ ಉದ್ದೇಶದಿಂದ ನಿರ್ದೇಶಕರು ವಿತ್ ಔಟ್ ಮೇಕಪ್ ನಲ್ಲಿ ಪುನರ್ವಸುವನ್ನ ಪರಿಚಯಿಸಿದ್ದಾರೆ.

ವಿಭಿನ್ನ ಪಾತ್ರಗಳತ್ತ ಮಾನ್ವಿತಾ

ಮಾನ್ವಿತಾ ಒಂದೇ ಪಾತ್ರಕ್ಕೆ ಸೀಮಿತವಾಗಿ ನಿಲ್ಲಬಾರದು ಎನ್ನುವ ಕಾರಣದಿಂದ ಪ್ರತಿ ಚಿತ್ರದಲ್ಲಿ ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಉದ್ದೇಶದಿಂದ ಟಗರು ಪುನರ್ವಸುವಾಗಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಭಿಮಾನಿಗಳು ಕೂಡ ಪಾತ್ರವನ್ನ ಮೆಚ್ಚಿಕೊಂಡಿದ್ದಾರೆ.

ಚಿತ್ರಮಂದಿರದಿಂದ ಹೊರ ಬಂದ ಮೇಲೆಯೂ ಕಾಡುತ್ತಿರುವ 'ಟಗರು' ಪಾತ್ರಗಳು

English summary
The people are appreciated Kannada actress Manvitha Harish's role in the film Tagaru. Tagaru duniya suri directed movie, Shivarajkumar, Dhananjaya and bhavna acting in the movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada