ಹುಚ್ಚ ವೆಂಕಟ್‌ಗೆ ಹಿಗ್ಗಾ-ಮುಗ್ಗಾ ಥಳಿಸಿದ ಜನ

ಕೆಲವು ದಿನಗಳಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಹುಚ್ಚ ವೆಂಕಟ್ ಅಲ್ಲಿ ಭಾರಿ ರಂಪಾಟ ನಡೆಸಿದ್ದಾರೆ. ಮೊನ್ನೆಯಷ್ಟೆ ಹುಚ್ಚಾಟ ನಡೆಸಿ ಪೊಲೀಸರ ಕೈಯಿಂದ ಹೊರದಬ್ಬಿಸಿಕೊಂಡಿದ್ದ ಹುಚ್ಚ ವೆಂಕಟ್. ಈಗ ಮತ್ತೆ ಜನರಿಂದ ಹೊಡೆತ ತಿಂದಿದ್ದಾರೆ.

Recommended Video

ಕೊರೊನ ವಿರುದ್ಧ ಹೋರಾಡೋಕೆ ಹುಚ್ಚ ವೆಂಕಟ್ ಹುಡುಕಿದ ದಾರಿ ಇದು | Huccha venkat stay home stay safe

ಕೆಲವು ದಿನಗಳಿಂದ ಶ್ರೀರಂಗಪಟ್ಟಣದಲ್ಲಿರುವ ಹುಚ್ಚ ವೆಂಕಟ್ ಇಂದು ಮಿತಿ ಮೀರಿ ವರ್ತಿಸಿದ್ದು, ಜನರೇ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಎರಡು ದಿನಗಳ ಹಿಂದೆ ಜನರು ಹುಚ್ಚ ವೆಂಕಟ್‌ ಗೆ ಊಟ-ತಿಂಡಿ ಕೊಟ್ಟು ಸಹಾಯ ಮಾಡಿದ್ದರು. ಆದರೆ ಹುಚ್ಚ ವೆಂಕಟ್ ಮಿತಿ ಮೀರಿ ವರ್ತಿಸಿರುವ ಕಾರಣ ಆತನನ್ನು ಥಳಿಸಲಾಗಿದೆ.

ಜನರೇ ಊಟ ಕೊಡಿಸಿದ್ದರು

ಜನರೇ ಊಟ ಕೊಡಿಸಿದ್ದರು

ಮೊನ್ನೆ ರಂಗನಾಥ ಮೈದಾನ ಹಾಗೂ ದೇವಸ್ಥಾನದ ಬಳಿ ಅಲೆದಾಡುತ್ತಿದ್ದ ಹುಚ್ಚ ವೆಂಕಟ್‌ಗೆ ಜನರು ಊಟ ನೀರು ಕೊಟ್ಟಿದ್ದರು. ಹುಚ್ಚ ವೆಂಕಟ್ ಅತ್ತು ಕರೆದು ಹಣ ಕೇಳಿದ್ದಕ್ಕೆ ಕೆಲವರು ಹಣವನ್ನೂ ಕೊಟ್ಟಿದ್ದರು. ಜನರ ಉಪಕಾರ ಸ್ಮರಿಸಿ ಸುಮ್ಮನೆ ಹೋಗದೆ ರಂಪಾಟ ಮುಂದುವರೆಸಿದ್ದಾರೆ ಹುಚ್ಚ ವೆಂಕಟ್.

ನಡು ರಸ್ತೆಯಲ್ಲಿ ಕುಳಿತ ಹುಚ್ಚ ವೆಂಕಟ್

ನಡು ರಸ್ತೆಯಲ್ಲಿ ಕುಳಿತ ಹುಚ್ಚ ವೆಂಕಟ್

ಪಟ್ಟಣದ ಕಾವೇರಿ ಸಂಗಮದ ಬಳಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹಣವಿಲ್ಲ. ಪೆಟ್ರೋಲ್ ಹಾಕಿಸಿಕೊಡದಿದ್ದರೆ ಇಲ್ಲಿಂದ ಹೋಗುವುದಿಲ್ಲ ಎಂದು ರಸ್ತೆಯಲ್ಲೇ ಕುಳಿತು ರಾದ್ಧಾಂತ ಮಾಡಿದ್ದ ಹುಚ್ಚ ವೆಂಕಟ್​ ಕಾರಿಗೆ ಸ್ಥಳೀಯರೇ ಪೆಟ್ರೋಲ್ ಹಾಕಿಸಿಕೊಟ್ಟಿದ್ದರಂತೆ.

ಜ್ಯೂಸ್ ಅಂಗಡಿಯವನ ಮೇಲೆ ಹಲ್ಲೆ

ಜ್ಯೂಸ್ ಅಂಗಡಿಯವನ ಮೇಲೆ ಹಲ್ಲೆ

ಶ್ರೀರಂಗಪಟ್ಟಣದ ದಾಸರಗುಪ್ಪೆ ಬಳಿ ಕಬ್ಬಿನ ಹಾಲು ಕುಡಿದ ಹುಚ್ಚ ವೆಂಕಟ್ ಅಂಗಡಿಯವನಿಗೆ​ ದುಡ್ಡು ಕೊಡಲು ನಿರಾಕರಿಸಿದ್ದಾರೆ. ಕೊನೆಗೆ, ಜ್ಯೂಸ್​ ಅಂಗಡಿಯವನ ಮೇಲೆ ಹಲ್ಲೆ ಸಹ ಮಾಡಿದ್ದಾರೆ. ಇದನ್ನು ನೋಡಿದ ಅಲ್ಲಿನ ಜನರು ಹುಚ್ಚ ವೆಂಕಟ್​ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಇಬ್ಬರ ಮೇಲೆ ಹಲ್ಲೆ ಸಹ ಮಾಡಿದ್ದಾರೆ

ಇಬ್ಬರ ಮೇಲೆ ಹಲ್ಲೆ ಸಹ ಮಾಡಿದ್ದಾರೆ

ಅಷ್ಟೆ ಅಲ್ಲದೆ ನಿನ್ನೆ ರಾತ್ರಿ ಶ್ರೀರಂಗನಾಥ ಸ್ವಾಮಿ ದೇವಾಲಯದ ಬಳಿ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರಂತೆ ಹುಚ್ಚ ವೆಂಕಟ್‌. ಹುಚ್ಚ ವೆಂಕಟ್ ಈ ರೀತಿಯ ರಂಪಾಟ ಇದು ಮೊದಲಲ್ಲ, ಮಡಿಕೇರಿಯಲ್ಲಿ ಹೀಗೆಯೇ ರಗಳೆ ಮಾಡಿ ಜನರ ಕೈಯಲ್ಲಿ ಪೆಟ್ಟು ತಿಂದಿದ್ದರು.

More from Filmibeat

English summary
In Srirangapatna Huccha Venkat beaten by people. He miss behaved with a road side tender.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X