twitter
    For Quick Alerts
    ALLOW NOTIFICATIONS  
    For Daily Alerts

    ಮಹಾರಾಷ್ಟ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಹೊಸ ಕಾನೂನು: ಅದು ಕರ್ನಾಟಕಕ್ಕೂ ಬರಬಾರದೇ.?

    By Harshitha
    |

    Recommended Video

    ಸೂಪರ್..!ಈ ರೂಲ್ಸ್ ನಮ್ಮ ಮಲ್ಟಿಪ್ಲೆಕ್ಸ್‌ಗಳಿಗೆ ಬಂದ್ರೆ ಫುಲ್ ಉಳಿತಾಯ...! | Filmibeat Kannada

    ಮಹಾರಾಷ್ಟ್ರ ಸರ್ಕಾರ ಇಂದು ಹೊಸ ಆದೇಶ ಜಾರಿ ಮಾಡಿದೆ. ಮಹಾರಾಷ್ಟ್ರದಲ್ಲಿ ಇರುವ ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ಮುಂದೆ ಮನೆ ಆಹಾರಕ್ಕೆ ಪ್ರವೇಶ ಇದೆ.

    ನಿಮಗೆಲ್ಲ ಗೊತ್ತಿರುವ ಹಾಗೆ, ಮಲ್ಟಿಪ್ಲೆಕ್ಸ್ ಒಳಗೆ ಹೊರಗಿನ ಆಹಾರ ತೆಗೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ಹಾಗೆ ತೆಗೆದುಕೊಂಡು ಹೋದರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ಸೇಲ್ ಮಾಡುವ ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್ ಸೇರಿದಂತೆ ಕುರುಕು ತಿಂಡಿಗಳನ್ನ ಖರೀದಿ ಮಾಡುವವರು ಯಾರು.?

    People can carry Home food in Maharashtra Multiplexes

    ಹೋಗ್ಲಿ, ಮಲ್ಟಿಪ್ಲೆಕ್ಸ್ ಗಳಲ್ಲಿ ಮಾರುವ ಆಹಾರ ಪದಾರ್ಥಗಳ ಬೆಲೆ ಕಮ್ಮಿ ಇದ್ಯಾ.? ಅದೂ ಇಲ್ಲ. ಒಂದು ಪಾಪ್ ಕಾರ್ನ್ ಗೆ ಏನಿಲ್ಲ ಅಂದರೂ ನೂರು ರೂಪಾಯಿ ಕೊಡಬೇಕು. ಮನೆ ಮಂದಿಯೆಲ್ಲಾ ಹೋದರೆ, ಸಿನಿಮಾ ಟಿಕೆಟ್ ಬೆಲೆಗಿಂತ ಅಲ್ಲಿ ಸಿಗುವ ತಿಂಡಿಗಳಿಗೆ ಹೆಚ್ಚು ಬೆಲೆ ತೆರಬೇಕಾದೀತು.

    ಮಹಾರಾಷ್ಟ್ರದಲ್ಲಿನ್ನು ಮಲ್ಟಿಪ್ಲೆಕ್ಸ್ ಗಳಿಗೆ ಹೊರಗಿನ ಆಹಾರ ಪ್ರವೇಶ, ಕರ್ನಾಟಕದಲ್ಲಿ?

    ಇದೇ ವಿಚಾರವಾಗಿ... ಅಂದ್ರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿಗುವ ಪಾನೀಯ ಹಾಗೂ ಆಹಾರ ಪದಾರ್ಥಗಳ ಬೆಲೆ ದುಬಾರಿ ಎಂದು ಬಾಂಬೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಸೂಚಿಸಿತ್ತು. ಇದಕ್ಕೆ ಅನುಗುಣವಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಮನೆ ಆಹಾರಕ್ಕೆ ಪ್ರವೇಶ ನೀಡುವಂತೆ ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ.

    ಒಂದು ವೇಳೆ ಮಲ್ಟಿಪ್ಲೆಕ್ಸ್ ಗಳಲ್ಲಿ ಮನೆ ಆಹಾರ ಪ್ರವೇಶಕ್ಕೆ ನಿರಾಕರಿಸಿದರೆ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ. ಅಂತೂ, ಮಹಾರಾಷ್ಟ್ರ ಸರ್ಕಾರ ಒಂದೊಳ್ಳೆ ಕೆಲಸ ಮಾಡಿದೆ. ಸಾಮಾನ್ಯ ಜನರ ಮೇಲೆ ಮಲ್ಟಿಪ್ಲೆಕ್ಸ್ ಗಳ ದಬ್ಬಾಳಿಕೆಗೆ ಕಡಿವಾಣ ಹಾಕಿದ ಹಾಗಾಗಿದೆ.

    ಇಂತಹ ಕಾನೂನು ಕರ್ನಾಟಕಕ್ಕೂ ಬರಬಾರದೇ.? ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ಬೆಲೆಗಳಿಗೂ ಕಡಿವಾಣ ಇಲ್ಲ, ತಿಂಡಿ-ತಿನಿಸುಗಳಿಗೆ ಮೊದಲೇ ಇಲ್ಲ. ಇದೆಲ್ಲ ಯಾವಾಗ ಸರಿ ಹೋಗುತ್ತೋ.?!

    English summary
    Now People can carry Home food in Maharashtra Multiplexes.
    Friday, July 13, 2018, 19:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X