ಈ ಫೋಟೊದಲ್ಲಿರೋ ಕನ್ನಡದ ಫೇಮಸ್ ನಟಿ ಯಾರು ಅಂತ ಗುರುತಿಸಬಲ್ಲಿರಾ?

By ಫಿಲ್ಮಿಬೀಟ್ ಡೆಸ್ಕ್

ಸಿನಿಮಾ ಜಗತ್ತೇ ಹಾಗೇ. ಇಲ್ಲಿಗೆ ಒಮ್ಮೆ ಕಾಲಿಟ್ಟರೆ ಸಾಕು ನಟ-ನಟಿಯರು ಗುರುತೇ ಸಿಗದಷ್ಟು ಬದಲಾಗಿಬಿಡುತ್ತಾರೆ. ಯಾವಾಗಲೋ ಅವರ ಹಳೆಯ ಫೋಟೊಗಳನ್ನು ನೋಡಿದಾಗ, ಅವರು ಇವರೇನಾ? ಅಂತಲೂ ಅನಿಸಿಬಿಡುತ್ತೆ. ಆಮಟ್ಟಿಗೆ ಬದಲಾಗಿಬಿಟ್ಟಿರುತ್ತಾರೆ.

ನಟರಿಗೆ ಹೋಲಿಸಿದರೆ, ಬಹುಪಾಲು ನಟಿಯರೇ ಹೆಚ್ಚು ಬದಲಾಗಿದ್ದಾರೆ. ಸಿನಿಮಾ ಮುಂಚೆ ಹೀಗಿದ್ರಾ? ಅಂತ ಅದೆಷ್ಟೊ ಮಂದಿ ಅವರ ಅಭಿಮಾನಿಗಳೇ ಕಂಗಾಲಾಗಿದ್ದ ಉದಾಹರಣೆಗಳು ಸಾಕಷ್ಟಿವೆ.

ಸದ್ಯ ಕನ್ನಡದ ಫೇಮಸ್ ನಟಿಯೊಬ್ಬರು ತಮ್ಮ ಟಿನೇಜ್ ಫೋಟೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊದಲ್ಲಿ ಆ ನಟಿಯನ್ನು ಗುರುತು ಹಿಡಿಯೋದು ಅಷ್ಟು ಸುಲಭ ಅಲ್ಲ. ಚಿತ್ರರಂಗಕ್ಕೆ ಕಾಲಿಟ್ಮೇಲೆ ಆ ಮಟ್ಟಿಗೆ ಈ ನಟಿ ಬದಲಾಗಿದ್ದಾರೆ.

ಈ ಪೋಟೊದಲ್ಲಿರೋ ನಟಿ ಯಾರು?

ಈ ಪೋಟೊದಲ್ಲಿರೋ ನಟಿ ಯಾರು?

ಈ ಫೋಟೊದಲ್ಲಿ ನಟಿಯನ್ನು ಅಷ್ಟು ಸುಲಭಕ್ಕಂತೂ ಗುರುತಿಸೋದು ಕಷ್ಟ. ಕನ್ನಡದ ಹಲವು ಸಿನಿಮಾಗಳಲ್ಲಿ ಈ ಹೀರೊಯಿನ್ ನಟಿಸಿದ್ದಾರೆ. ಹಾಗಂತ ಕೇವಲ ಕನ್ನಡ ಅಷ್ಟೇ ಅಲ್ಲ. ಹಿಂದಿ. ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೆ, ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಕಳೆದ ಒಂದು ದಶಕಗಳಿಂದ ಇವರು ಒಂದೇ ಒಂದು ಸಿನಿಮಾಗಳಲ್ಲಿ ನಟಿಸಿಲ್ಲ. ಹೀಗಾಗಿ ಈ ಫೋಟೊದಲ್ಲಿ ಆ ನಟಿಯನ್ನು ಗುರುತು ಹಿಡಿಯುವುದು ಅಷ್ಟು ಸುಲಭವಲ್ಲ.

ಇವರು ಯಾರು ಗೊತ್ತೇ?

ಇವರು ಯಾರು ಗೊತ್ತೇ?

ಅಂದ್ಹಾಗೆ, ಈ ನಟಿಯ ಮೂಲ ಕೊಡಗು. ಕನ್ನಡ ಸೂಪರ್‌ ಹಿಟ್‌ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿಂದ ಈಕೆಯ ಬ್ಯೂಟಿಗೆ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸೂಪರ್‌ ಹಿಟ್ ಸಿನಿಮಾದಲ್ಲಿ ಇವರು ನಟಿಸಿದ್ದರು. ಇಷ್ಟು ಹೇಳಿದ ಮೇಲೆ ಚಿಕ್ಕೊಂದು ಸುಳಿವಂತೂ ಸಿಕ್ಕಿರಬಹುದು. ಇವರು ಮತ್ಯಾರೂ ಅಲ್ಲ 'ಗಾಳಿಪಟ' ಸಿನಿಮಾದ ನಟಿ ಡೈಸಿ ಬೋಪಣ್ಣ. ಇದು ಅವರ ಟಿನೇಜ್ ಫೋಟೊ.

ಡೈಸಿ ಜೊತೆಯಲ್ಲಿ ಇರೋದು ಯಾರು?

ಡೈಸಿ ಜೊತೆಯಲ್ಲಿ ಇರೋದು ಯಾರು?

ಡೈಸಿ ಬೋಪಣ್ಣ ಸಿನಿಮಾದಿಂದ ದೂರ ಉಳಿದಿದ್ದರೂ, ಸೋಶಿಯಲ್ ಮೀಡಿಯಾದಿಂದ ದೂರ ಆಗಿಲ್ಲ. ಸದಾ ಒಂದಲ್ಲ ಒಂದು ಫೋಟೊ ಪೋಸ್ಟ್ ಮಾಡಿ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿದ್ದಾರೆ. ಹಾಗೇ ಇತ್ತೀಚೆಗೆ ತಮ್ಮ ಟಿನೇಜ್ ಫೋಟೊವನ್ನು ಶೇರ್ ಮಾಡಿದ್ದರು. ಅವರ ಅಕ್ಕನೊಂದಿಗೆ ನಿಂತು ತೆಗೆಸಿಕೊಂಡ ಫೋಟೊವನ್ನು ಶೇರ್ ಮಾಡಿದ್ದಾರೆ. "ನನ್ನ ಹದಿಹರೆಯಲ್ಲಿ ನನ್ನ ಔಟ್‌ಫಿಟ್ ಪಫ್ ಸ್ಲೀವ್ಸ್ ಮತ್ತು ಹೇರ್ ಕಟ್ ನೋಡಿ. ಟಿನೇಜ್‌ನಲ್ಲಿ ನೀವು ಮರೆಯಲಾರದ ನೆನಪುಗಳೇನು? ಯಾವುದಾದರೂ ಇದೆಯೇ." ಎಂದು ಬರೆದುಕೊಂಡಿದ್ದಾರೆ.

ಡೈಸಿ ಬೋಪಣ್ಣ ಸುಳಿವೇ ಇಲ್ಲ

ಡೈಸಿ ಬೋಪಣ್ಣ ಸುಳಿವೇ ಇಲ್ಲ

ಡೈಸಿ ಬೋಪಣ್ಣ 'ಗಾಳಿಪಟ','ಒಲವೇ ಜೀವನ ಲೆಕ್ಕಾಚಾರ','ರಂಗ ಎಸ್‌ಎಸ್‌ಎಲ್‌ಸಿ', 'ಬಿಂಬ', 'ಭಗವಾನ್', 'ರಾಮ ಶ್ಯಾಮ ಭಾಮ', 'ಜಾಕ್‌ಪಾಟ್‌','ಸತ್ಯವಾನ್ ಸಾವಿತ್ರಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. 2012ರಲ್ಲಿ ತೆರೆಕಂಡಿದ್ದ 'ಕ್ರೇಜಿ ಲೋಕ'ವೇ ಇವರ ಕೊನೆಯ ಸಿನಿಮಾ. ಅಮಿತ್ ಜಯು ಎಂಬುವವರನ್ನು ವಿವಾಹವಾದ ಬಳಿಕ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

More from Filmibeat

English summary
People Can't Recognising Gaalipata Actress Daisy Bopanna In Teenage, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X