twitter
    For Quick Alerts
    ALLOW NOTIFICATIONS  
    For Daily Alerts

    ದಿಯಾಗೂ ಆದಿಗೂ ಮದುವೆ ಮಾಡಿಸಿ: ಪ್ರೇಕ್ಷಕರ ಹೊಸ ಡಿಮ್ಯಾಂಡ್

    |

    ಒಂದು ವಾರದಿಂದ ಕನ್ನಡದ ಎರಡು ಸಿನಿಮಾಗಳು ಬಹು ಚರ್ಚೆಯಲ್ಲಿವೆ. ಬಹುಶಃ ಸಿನಿಮಾ ಪ್ರೇಕ್ಷಕರು ಈ ರೀತಿ ಕನ್ನಡ ಸಿನಿಮಾಗಳ ಬಗ್ಗೆ ತೀವ್ರವಾಗಿ ಚರ್ಚೆ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ಅಪರೂಪ. ದೊಡ್ಡ ಸ್ಟಾರ್ ನಟರ ಚಿತ್ರಗಳೂ ಹಾಗೆ ಬಂದು ಹೀಗೆ ಹೋಗುತ್ತಿರುವ ಪರಿಸ್ಥಿತಿಯಲ್ಲಿ ಸ್ಟಾರ್ ಕಲಾವಿದರೇ ಇಲ್ಲದ ಮತ್ತು ಹೊಸಬರ ಎರಡು ಚಿತ್ರಗಳು ಮನೆ ಮಾತಾಗುತ್ತಿರುವುದು ವಿಸ್ಮಯವೇ ಸರಿ.

    Recommended Video

    ಮದುವೆ ಮೂಡ್ ನಲ್ಲಿದ್ದರೂ ನಿಖಿಲ್ ಬ್ಯುಸಿ | Nikhil weds Revathi | Kumarswamy | AP Arjun

    ಈ ಎರಡು ಸಿನಿಮಾಗಳು ಯಾವುವು ಎಂಬುದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಹೌದು. ಈ ವರ್ಷ ಅತಿ ಹೆಚ್ಚು ಜನರಿಂದ ಮೆಚ್ಚುಗೆಗೆ ಒಳಗಾದ ಚಿತ್ರಗಳೆಂದರೆ 'ದಿಯಾ' ಮತ್ತು 'ಲವ್ ಮಾಕ್‌ಟೈಲ್'. 'ದಿಯಾ' ಆರಂಭದಿಂದಲೂ ಒಳ್ಳೆಯ ಅಭಿಪ್ರಾಯ ಪಡೆದರೂ ಚಿತ್ರಮಂದಿರಗಳ ಕಾರಣದಿಂದ ಶೋಗಳನ್ನು ಕಳೆದುಕೊಂಡಿತು. ಪ್ರೇಕ್ಷಕರೂ ಆರಂಭದಲ್ಲಿ ಅದರತ್ತ ಮುಖಮಾಡಲು ಮುಂದಾಗಿರಲಿಲ್ಲ. ಇನ್ನೊಂದೆಡೆ 'ಲವ್ ಮಾಕ್‌ಟೈಲ್' ನಿಧಾನವಾಗಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾ ಚಿತ್ರಮಂದಿರದಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಂಡಿತ್ತು. ಮುಂದೆ ಓದಿ.

    'ದಿಯಾ' ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ: ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ'ದಿಯಾ' ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ: ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ

    ಜನರನ್ನು ಕಾಡುತ್ತಿರುವ ಎರಡು ಸಿನಿಮಾಗಳು

    ಜನರನ್ನು ಕಾಡುತ್ತಿರುವ ಎರಡು ಸಿನಿಮಾಗಳು

    ಈ ಸಿನಿಮಾಗಳು ಜನರನ್ನು ಎಷ್ಟು ಕಾಡುತ್ತಿವೆ ಎಂದರೆ, ಎರಡೂ ಸಿನಿಮಾಗಳ ಬಗ್ಗೆ ನೂರಾರು ಬಗೆಯ ಮೀಮ್‌ಗಳನ್ನು ಮಾಡುತ್ತಿದ್ದಾರೆ. ಮುಖ್ಯವಾಗಿ ಗಂಭೀರವಾಗಿ ಸಿನಿಮಾದ ಬಗ್ಗೆ ವಿಮರ್ಶೆ ಮಾಡುತ್ತಿದ್ದಾರೆ. ನಾಯಕ, ನಾಯಕಿಯರ ಬಗ್ಗೆ ಚರ್ಚಿಸುತ್ತಿದ್ದಾರೆ.

    ಇಬ್ಬರನ್ನೂ ಸೇರಿಸಿ 'ಆದಿಯಾ' ಮಾಡಿ

    ಇಬ್ಬರನ್ನೂ ಸೇರಿಸಿ 'ಆದಿಯಾ' ಮಾಡಿ

    ಎರಡೂ ಸಿನಿಮಾಗಳ ಕಥೆಗಳು ಪ್ರೇಕ್ಷಕರನ್ನು ಕಾಡುತ್ತಿದೆ ಎನ್ನುವುದಕ್ಕೆ ಅವುಗಳ ಮೇಲೆ ತಯಾರಾಗುತ್ತಿರುವ ಮೀಮ್‌ಗಳೇ ಸಾಕ್ಷಿ. ಲವ್ ಮಾಕ್‌ಟೈಲ್‌ನಲ್ಲಿ ನಾಯಕ ನಾಯಕಿಯನ್ನು ಕಳೆದುಕೊಂಡಿದ್ದರೆ. ದಿಯಾ ಚಿತ್ರದಲ್ಲಿ ನಾಯಕಿ, ನಾಯಕನನ್ನು ಕಳೆದುಕೊಂಡು ಒಂಟಿಯಾಗುತ್ತಾಳೆ. ಈ ಎರಡೂ ಸಿನಿಮಾಗಳ 'ಆದಿ' ಮತ್ತು 'ದಿಯಾ'ರನ್ನು ಒಂದು ಮಾಡಿ 'ಆದಿಯಾ' ಅನ್ನೋ ಸಿನಿಮಾ ಮಾಡಿ ಎಂಬ ಹೊಸ ಕೋರಿಕೆ ಮುಂದಿಡುತ್ತಿದ್ದಾರೆ.

    ಜನರು ಮೆಚ್ಚಿದ ಪಾತ್ರಗಳು

    ಜನರು ಮೆಚ್ಚಿದ ಪಾತ್ರಗಳು

    ಮತ್ತೊಂದು ವಿಶೇಷವೆಂದರೆ ಜನರ ಬಾಯಲ್ಲಿ ಹರಿದಾಡುತ್ತಿರುವುದು ಈ ಸಿನಿಮಾಗಳ ಪಾತ್ರಗಳ ಹೆಸರು. 'ಲವ್ ಮಾಕ್‌ಟೈಲ್‌'ನಲ್ಲಿ ಆದಿ, ನಿಧಿಮಾ, ಜೋ, ಅದಿತಿ, ಸುಷ್ಮಾ, ಪಾತ್ರಗಳು ಜನರ ಮನಸಿನಲ್ಲಿ ಉಳಿದಿವೆ. ಹಾಗೆಯೇ 'ದಿಯಾ' ಚಿತ್ರದ ನಾಯಕಿ ದಿಯಾ, ಆದಿ, ರೋಹಿತ್, ಲಕ್ಕಿ ಪಾತ್ರಗಳು ಸಾಕಷ್ಟು ಕಾಡಿವೆ.

    'ಜೋಹಿತ್' ಮತ್ತು ನಿಧಿ-ಆದಿ

    'ಜೋಹಿತ್' ಮತ್ತು ನಿಧಿ-ಆದಿ

    ಹೀಗೆ ತಮಾಷೆಯ ಮತ್ತು ಗಂಭೀರ ಚರ್ಚೆಗಳು ಸಿನಿಮಾ ಬಗ್ಗೆ ನಡೆಯುತ್ತಿವೆ. ಕೆಲವು ಟ್ರೋಲ್ ಪೇಜ್‌ಗಳು ಇನ್ನೂ ಒಂದು ಹಂತಕ್ಕೆ ಹೋಗಿ, ಎರಡೂ ಸಿನಿಮಾಗಳಲ್ಲಿ ಪ್ರೇಮ ವೈಫಲ್ಯ ಅನುಭವಿಸಿದ 'ಜೋ' ಮತ್ತು 'ರೋಹಿತ್' ಪಾತ್ರಗಳಿಗೂ ಮದುವೆ ಮಾಡಿಸಲು ಮುಂದಾಗಿದ್ದಾರೆ. ಇಷ್ಟರ ಬಳಿಕ ಮೃತಪಟ್ಟ ಪಾತ್ರಗಳನ್ನು ಏಕೆ ಬಿಡುವುದು? 'ಲವ್ ಮಾಕ್‌ಟೈಲ್‌'ನ ನಿಧಿ ಮತ್ತು 'ದಿಯಾ'ದ ಆದಿಗೂ ಸ್ವರ್ಗದಲ್ಲಿ ಮದುವೆಯನ್ನೂ ಮಾಡಿಸಿಬಿಟ್ಟಿದ್ದಾರೆ!

    ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾಗಳು

    ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾಗಳು

    ಒಂದು ವಾರದಿಂದ ಈ ಎರಡೂ ಸಿನಿಮಾಗಳ ಬಗ್ಗೆ ಎಲ್ಲರೂ ಮಾತಾಡುತ್ತಿದ್ದಾರೆ. ಚಿತ್ರಮಂದಿರಕ್ಕೆ ಹೋಗದ ಪ್ರೇಕ್ಷಕರು ತಮ್ಮ ಮೊಬೈಲ್ ಪರದೆಯ ಮೇಲೆಯೇ 'ಅಮೇಜಾನ್ ಪ್ರೈಮ್' ಮೂಲಕ ಈ ಸಿನಿಮಾಗಳನ್ನು ಒಂದರ ಹಿಂದೊಂದರಂತೆ ವೀಕ್ಷಿಸಲು ಅವಕಾಶ ಸಿಕ್ಕಿದೆ. 'ಟೆಲಿಗ್ರಾಮ್‌'ನಂತಹ ಆಪ್‌ನಲ್ಲಿಯೂ ಸಿನಿಮಾಗಳು ಲಭ್ಯವಾಗುತ್ತಿರುವುದರಿಂದ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.

    ಸರಳ-ದುರಂತ ಲವ್ ಸ್ಟೋರಿಗಳು

    ಸರಳ-ದುರಂತ ಲವ್ ಸ್ಟೋರಿಗಳು

    ಎರಡೂ ಸಿನಿಮಾಗಳಲ್ಲಿ ತಾರಾ ಕಲಾವಿದರಿಲ್ಲ. ಖ್ಯಾತನಾಮ ನಿರ್ದೇಶಕರೂ ಇಲ್ಲ. ಅಬ್ಬರ, ಅದ್ಧೂರಿತನ, ಫೈಟಿಂಗ್‌ಗಳಿಲ್ಲ. ಎರಡರಲ್ಲಿಯೂ ಇರುವುದು ಸರಳ ಲವ್ ಸ್ಟೋರಿ. ಎರಡೂ ಪ್ರೇಮ ವೈಫಲ್ಯದ ಕಥನವೇ. ಎರಡರಲ್ಲಿಯೂ ಅಂತ್ಯದಲ್ಲಿ ದುರಂತವಿದೆ. ಹೀಗಿದ್ದೂ ಪ್ರೇಕ್ಷಕರಿಗೆ ಈ ಚಿತ್ರಗಳು ಇಷ್ಟವಾಗುತ್ತಿವೆ.

    ಆಪ್ತವಾಗುವ ಕಥೆಗಳು

    ಆಪ್ತವಾಗುವ ಕಥೆಗಳು

    ಈ ಸಿನಿಮಾಗಳು ಜನರಿಗೆ ಇಷ್ಟವಾಗಲು ಕಾರಣವೇ ಸಿನಿಮಾಗಳಲ್ಲಿನ ಸರಳ ಹಾಗೂ ಆಪ್ತವಾದ ಕಥೆಗಳು ಮತ್ತು ಮನಮುಟ್ಟುವ ನಿರೂಪಣೆ. ಸಿನಿಮಾಗಳ ತಂತ್ರಜ್ಞರು ಮತ್ತು ಕಲಾವಿದರ ಬಗ್ಗೆ ಕೂಡ ಜನರು ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ.

    ಲವ್ ಮಾಕ್‌ಟೈಲ್ ಚಿತ್ರತಂಡ

    ಲವ್ ಮಾಕ್‌ಟೈಲ್ ಚಿತ್ರತಂಡ

    'ಲವ್ ಮಾಕ್‌ಟೈಲ್' ಚಿತ್ರವನ್ನು ನಿರ್ದೇಶಿಸಿರುವುದು 'ಮದರಂಗಿ' ಮೂಲಕ ನಾಯಕರಾಗಿ ಪರಿಚಿತರಾದ 'ಡಾರ್ಲಿಂಗ್' ಕೃಷ್ಣ. ಕೃಷ್ಣ 'ನಮ್ ದುನಿಯಾ ನಮ್ ಸ್ಟೈಲ್', 'ಚಾರ್ಲಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಕೃಷ್ಣ ಜತೆಗೂಡಿ ಸಿನಿಮಾಕ್ಕೆ ಬಂಡವಾಳ ಹೂಡಿರುವ ನಟಿ ಮಿಲನಾ ನಾಗರಾಜ್ 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದ ಮೂಲಕ ನಾಯಕಿಯಾದವರು. ದರ್ಶನ್ ಜತೆಗೆ 'ಬೃಂದಾವನ'ದಲ್ಲಿ ನಟಿಸಿದ್ದ ಅವರು, 'ಚಾರ್ಲಿ' 'ಜಾನಿ' ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್, ರಚನಾ, ಖುಷಿ, ಅಭಿಲಾಷ್ ನಟಿಸಿದ್ದಾರೆ.

    ದಿಯಾ ಚಿತ್ರತಂಡ

    ದಿಯಾ ಚಿತ್ರತಂಡ

    '6-5=2' ಎಂಬ ಹಾರರ್ ಚಿತ್ರ ನಿರ್ದೇಶಿಸುವ ಮೂಲಕ ಪರಿಚಿತರಾಗಿದ್ದ ಕೆಎಸ್ ಅಶೋಕ್, ಎರಡನೆಯ ಚಿತ್ರವನ್ನು ವಿಭಿನ್ನವಾಗಿ ನೀಡಿದ್ದಾರೆ. ಈ ಚಿತ್ರದಲ್ಲಿ 'ದಿಯಾ' ಪಾತ್ರದಲ್ಲಿ ಖುಷಿ ರವಿ ನಟಿಸಿದ್ದಾರೆ. 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಎಂಬ ಚಿತ್ರದಲ್ಲಿ ಅವರು ನಟಿಸಿದ್ದರು. ಅವರೊಂದಿಗೆ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ, ಪವಿತ್ರಾ ಲೋಕೇಶ್ ನಟಿಸಿದ್ದಾರೆ. ಧಾರಾವಾಹಿಗಳಲ್ಲಿ ನಟಿಸಿರುವ ಪೃಥ್ವಿ ಅಂಬರ್ ತುಳು ಚಿತ್ರರಂಗದಲ್ಲಿ ಪರಿಚಿತರು.

    ಮತ್ತೆ ಬಿಡುಗಡೆಗೆ ಒತ್ತಾಯ

    ಮತ್ತೆ ಬಿಡುಗಡೆಗೆ ಒತ್ತಾಯ

    ಚಿತ್ರಮಂದಿರಗಳಿಂದ ದೂರಾಗಲಿ ಅಮೆಜಾನ್ ಪ್ರೈಂನಲ್ಲಿ ಲಭ್ಯವಿರುವ 'ದಿಯಾ' ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವಂತೆ ಆಗ್ರಹ ಕೇಳಿಬಂದಿದೆ. ಮೊಬೈಲ್‌ ಹಾಗೂ ಟಿವಿಯಲ್ಲಿ ಅಮೆಜಾನ್ ಪ್ರೈಂ ಮೂಲಕ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಜನರು, ಅದನ್ನು ಬೆಳ್ಳಿ ಪರದೆ ಮೇಲೆ ನೋಡಿದರೇ ಚೆನ್ನ ಎಂದು ಮತ್ತೊಮ್ಮೆ ಸಿನಿಮಾ ಮಂದಿರದಲ್ಲಿ ನೋಡಲು ಅವಕಾಶ ಮಾಡಿಕೊಡುವಂತೆ ಕೇಳುತ್ತಿದ್ದಾರೆ.

    English summary
    People created memes on Dia and Love Mocktail Kannada movies and demands marriage between both movie's hero and heroine!
    Monday, March 16, 2020, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X