twitter
    For Quick Alerts
    ALLOW NOTIFICATIONS  
    For Daily Alerts

    ಹಣ ಕೊಡುತ್ತೇವೆ ಎಂದ ಪ್ರೇಕ್ಷಕರಿಗೆ ದಿಯಾ, ಲವ್‌ಮಾಕ್‌ಟೈಲ್ ನಿರ್ಮಾಪಕರು ಹೇಳಿದ್ದೇನು?

    |

    ಚಿತ್ರಮಂದಿರದಿಂದ ಮರೆಯಾದ ಬಳಿಕವೂ ಸದ್ದು ಮಾಡುವ ಸಿನಿಮಾಗಳ ಸಾಲಿಗೆ ಸೇರಿಕೊಂಡಿರುವ 'ದಿಯಾ' ಮತ್ತು 'ಲವ್ ಮಾಕ್‌ಟೈಲ್' ಚಿತ್ರಗಳ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಈ ಸಿನಿಮಾಗಳನ್ನು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ, ಅಲ್ಲಿಯೇ ಪುನಃ ನೋಡಬೇಕು ಎಂಬ ಒತ್ತಾಯ ಮಾಡಲಾಗುತ್ತಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾಗಳ ಮರುಬಿಡುಗಡೆ ಸಾಧ್ಯವಿಲ್ಲ.

    ಕೊರೊನಾ ವೈರಸ್ ಭೀತಿಯಿಂದ ಈಗಾಗಲೇ ಚಿತ್ರಮಂದಿರಗಳು ಸ್ಥಗಿತಗೊಂಡಿವೆ. ಪ್ರದರ್ಶನಗೊಳ್ಳುತ್ತಿದ್ದ ಸಿನಿಮಾಗಳನ್ನು ರದ್ದುಗೊಳಿಸಲಾಗಿದೆ. ಬಿಡುಗಡೆಯಾಗಬೇಕಿದ್ದ ಹೊಸ ಸಿನಿಮಾಗಳು ಮುಂದಕ್ಕೆ ಹೋಗಿವೆ. ಇನ್ನೂ ಅನೇಕ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಹೀಗಿರುವಾಗ ಚಿತ್ರಮಂದಿರಗಳಲ್ಲಿ ಈ ಎರಡೂ ಸಿನಿಮಾಗಳನ್ನು ಮತ್ತೆ ತರುವುದು ಸುಲಭದ ಮಾತಲ್ಲ. ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಸಿನಿಮಾ ಬಿಡುಗಡೆ ಮಾಡಿದರೂ ಅದರಿಂದ ಲಾಭವಾಗಲಿದೆ ಎನ್ನುವಂತಿಲ್ಲ. ಅನೇಕರು ಚಿತ್ರಮಂದಿರದಲ್ಲಿ ನೋಡದೆ ಅಮೆಜಾನ್ ಪ್ರೈಮ್‌ನಲ್ಲಿ ನೋಡಿದ ತಪ್ಪಿನ ಪಶ್ಚಾತ್ತಾಪದ ಪರಿಹಾರಕ್ಕಾಗಿ ನಿರ್ಮಾಪಕರಿಗೆ ಹಣ ನೀಡಲು ಮುಂದೆ ಬಂದಿದ್ದಾರೆ. ಮುಂದೆ ಓದಿ...

    ದಿಯಾಗೂ ಆದಿಗೂ ಮದುವೆ ಮಾಡಿಸಿ: ಪ್ರೇಕ್ಷಕರ ಹೊಸ ಡಿಮ್ಯಾಂಡ್ದಿಯಾಗೂ ಆದಿಗೂ ಮದುವೆ ಮಾಡಿಸಿ: ಪ್ರೇಕ್ಷಕರ ಹೊಸ ಡಿಮ್ಯಾಂಡ್

    ಚಿತ್ರಮಂದಿರಕ್ಕೆ ಬಾರದ ಜನ

    ಚಿತ್ರಮಂದಿರಕ್ಕೆ ಬಾರದ ಜನ

    'ದಿಯಾ' ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೂ ಚಿತ್ರಮಂದಿರಗಳಲ್ಲಿ ಜನರು ಭರ್ತಿಯಾಗಲಿಲ್ಲ. 'ಲವ್ ಮಾಕ್‌ಟೈಲ್' ಸಿನಿಮಾ ಪರಿಸ್ಥಿತಿ ಕೂಡ ವಿಭಿನ್ನವಲ್ಲ. ಆದರೆ ಕೆಲವು ಚಿತ್ರಮಂದಿರಗಳನ್ನು ಉಳಿಸಿಕೊಂಡಿದ್ದರಿಂದ ಹೆಚ್ಚಿನ ಜನರು ಸಿನಿಮಾವನ್ನು ಅಲ್ಲಿಯೇ ವೀಕ್ಷಿಸಿದ್ದರು.

    ಅಮೆಜಾನ್ ಪ್ರೈಮ್‌ನಲ್ಲಿ ಹೆಚ್ಚು ವೀಕ್ಷಣೆ

    ಅಮೆಜಾನ್ ಪ್ರೈಮ್‌ನಲ್ಲಿ ಹೆಚ್ಚು ವೀಕ್ಷಣೆ

    ಆದರೆ ಈ ಎರಡೂ ಸಿನಿಮಾಗಳು ಜನರಿಗೆ ಹತ್ತಿರವಾಗಿದ್ದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದಾಗ. ಲವ್ ಮಾಕ್‌ಟೈಲ್ ಇನ್ನೂ ಚಿತ್ರಮಂದಿರದಲ್ಲಿ ಇರುವಾಗಲೇ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಯಿತು. ಜನರು ಮುಗಿಬಿದ್ದು ವೀಕ್ಷಿಸಿದರು.

    'ದಿಯಾ' ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ: ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ'ದಿಯಾ' ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ: ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ

    ಜನಮೆಚ್ಚುಗೆ ಪಡೆದ ಸಿನಿಮಾಗಳು

    ಜನಮೆಚ್ಚುಗೆ ಪಡೆದ ಸಿನಿಮಾಗಳು

    ಮೊಬೈಲ್‌ನಲ್ಲಿಯೇ ಸಿನಿಮಾ ವೀಕ್ಷಿಸುವ ಅವಕಾಶ ಪಡೆದ ಬಳಿಕ ಈ ಎರಡೂ ಸಿನಿಮಾಗಳಿಗೆ ವ್ಯಾಪಕ ಪ್ರಚಾರ ದೊರಕಿತು. ಈಗ ಎಲ್ಲರ ಸ್ಟೇಟಸ್‌ಗಳಲ್ಲಿಯೂ ಈ ಸಿನಿಮಾಗಳ ನೆಚ್ಚಿನ ದೃಶ್ಯಗಳನ್ನು ನೋಡಬಹುದು. ದುರಂತದ ಅಂತ್ಯವಾದರೂ ಸಿನಿಮಾಗಳು ಜನರಿಗೆ ಇಷ್ಟವಾಗಿದೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮೆಚ್ಚುಗೆಯ ಮಾತುಗಳೇ ಸಾಕ್ಷಿ.

    ಜನಮೆಚ್ಚುಗೆ ಪಡೆದ ಸಿನಿಮಾಗಳು

    ಜನಮೆಚ್ಚುಗೆ ಪಡೆದ ಸಿನಿಮಾಗಳು

    ಮೊಬೈಲ್‌ನಲ್ಲಿಯೇ ಸಿನಿಮಾ ವೀಕ್ಷಿಸುವ ಅವಕಾಶ ಪಡೆದ ಬಳಿಕ ಈ ಎರಡೂ ಸಿನಿಮಾಗಳಿಗೆ ವ್ಯಾಪಕ ಪ್ರಚಾರ ದೊರಕಿತು. ಈಗ ಎಲ್ಲರ ಸ್ಟೇಟಸ್‌ಗಳಲ್ಲಿಯೂ ಈ ಸಿನಿಮಾಗಳ ನೆಚ್ಚಿನ ದೃಶ್ಯಗಳನ್ನು ನೋಡಬಹುದು. ದುರಂತದ ಅಂತ್ಯವಾದರೂ ಸಿನಿಮಾಗಳು ಜನರಿಗೆ ಇಷ್ಟವಾಗಿದೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮೆಚ್ಚುಗೆಯ ಮಾತುಗಳೇ ಸಾಕ್ಷಿ.

    ಜನರಲ್ಲಿ ಪಶ್ಚಾತ್ತಾಪ

    ಜನರಲ್ಲಿ ಪಶ್ಚಾತ್ತಾಪ

    ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡ ಜನರು ಅವುಗಳನ್ನು ಚಿತ್ರಮಂದಿರದಲ್ಲಿ ವೀಕ್ಷಿಸದೆ ಇರುವುದಕ್ಕೆ ಪಶ್ಚಾತ್ತಾಪ ಪಟ್ಟುಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ಟಿಕೆಟ್‌ಗೆ ಕೊಡಬೇಕಿದ್ದ ಹಣವನ್ನು ನೀಡುತ್ತೇವೆ ಎಂದು ನಿರ್ಮಾಪಕರಿಗೆ ಹೇಳುತ್ತಿದ್ದಾರೆ. ಇದಕ್ಕೆ ಎರಡೂ ಚಿತ್ರತಂಡಗಳು ವಿಭಿನ್ನ ಪ್ರತಿಕ್ರಿಯೆ ನೀಡಿವೆ.

    ವದಂತಿ ನಂಬಬೇಡಿ ಎಂದ ದಿಯಾ ನಿರ್ಮಾಪಕರು

    ವದಂತಿ ನಂಬಬೇಡಿ ಎಂದ ದಿಯಾ ನಿರ್ಮಾಪಕರು

    'ದಿಯಾ ಚಿತ್ರದ ನಿರ್ಮಾಪಕರಾದ ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್ ಮತ್ತು ಕೃಷ್ಣ ಚೈತನ್ಯ ನಾವು, ಜನರು ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ನೋಡಿ ಅನೇಕ ಜನರು ಹೊಗಳುತ್ತಿರುವುದನ್ನು ಕಂಡು ಖುಷಿಯಾಗಿದ್ದೇವೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಸಾಧ್ಯವಾಗದ ಕಾರಣ ಅದರ ಟಿಕೆಟ್ ಹಣವನ್ನು ನೀಡಲು ಸಿದ್ಧರಿರುವುದಾಗಿ ಅನೇಕರು ಮುಂದೆ ಬಂದಿದ್ದಾರೆ. ನಿಮ್ಮ ಪ್ರೀತಿಗೆ ಬಹಳ ಧನ್ಯವಾದಗಳು. ಆದರೆ ನಾವು ಗೂಗಲ್ ಪೇ ಅಥವಾ ಇತರೆ ಯಾವುದೇ ಯುಪಿಐ ಸೌಲಭ್ಯದ ಮೂಲಕ ಯಾವುದೇ ಹಣವನ್ನು ಸ್ವೀಕರಿಸುತ್ತಿಲ್ಲ. ನಮ್ಮ ಅಧಿಕೃತ ಖಾತೆಯ ಮೂಲಕ ಹೇಳಿ ಬಾರದೆ ಅಂತಹ ಯಾವದೇ ವದಂತಿಯನ್ನು ನಂಬಬೇಡಿ ಎಂದು ಚಿತ್ರತಂಡ ತಿಳಿಸಿದೆ.

    ತಪ್ಪಿತಸ್ಥ ಭಾವನೆ ಕಾಡುತ್ತಿದೆ

    ತಪ್ಪಿತಸ್ಥ ಭಾವನೆ ಕಾಡುತ್ತಿದೆ

    ಇದೇ ರೀತಿಯ ಮನವಿಗಳು 'ಲವ್ ಮಾಕ್‌ಟೈಲ್' ನಿರ್ಮಾಪಕ ಕಂ ನಿರ್ದೇಶಕರೂ ಆಗಿರುವ ನಟ ಡಾರ್ಲಿಂಗ್ ಕೃಷ್ಣ ಅವರಿಗೂ ಬಂದಿವೆ. 'ಲವ್ ಮಾಕ್‌ಟೈಲ್' ಚಿತ್ರವನ್ನು ಸಿನಿಮಾ ಮಂದಿರದಲ್ಲಿ ನೋಡದೆ ಇರುವುದಕ್ಕೆ ತಪ್ಪಿತಸ್ಥ ಭಾವನೆ ಕಾಡುತ್ತಿದೆ. ಹೀಗಾಗಿ ತಾವು ಟಿಕೆಟ್ ದರವನ್ನು ಪಾವತಿ ಮಾಡಲು ಸಿದ್ಧರಿರುವುದಾಗಿ ನನಗೆ ಸಾವಿರಾರು ಸಂದೇಶಗಳು ಬರುತ್ತಿವೆ. ಅದಕ್ಕೆ ಕೇಳಿದವರಿಗಾಗಿ ಹಣ ಕಳಿಸಬಹುದಾದ ಯುಪಿಐ ಐಡಿ ಇಲ್ಲಿದೆ ಎಂದು ಕೃಷ್ಣ ಹೇಳಿದ್ದಾರೆ.

    English summary
    Many people who watched Dia and Love Mocktail movies in Amazon Prime wanted to pay the ticket price to producers for not watching in theatre.
    Wednesday, March 18, 2020, 11:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X