For Quick Alerts
  ALLOW NOTIFICATIONS  
  For Daily Alerts

  ದಾವಣಗೆರೆಯಲ್ಲಿ 'ಯುವರತ್ನ' ನೋಡಲು ನೂಕುನುಗ್ಗಲು, ಪೊಲೀಸರಿಂದ ಲಾಠಿಚಾರ್ಜ್

  By ದಾವಣೆಗೆರೆ ಪ್ರತಿನಿಧಿ
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ವೀಕ್ಷಣೆ ವೇಳೆ ಚಿತ್ರಮಂದಿರದ ಬಳಿ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದಿದೆ.

  ದಾವಣಗೆರೆಯಲ್ಲಿ ಯುವರತ್ನ ನೋಡಲು ನೂಕುನುಗ್ಗಲು:ಪೊಲೀಸರಿಂದ ಲಾಠಿ ಚಾರ್ಜ್ | Filmibeat Kannada

  ದಾವಣಗೆರೆಯ ಮೂರು ಚಿತ್ರಮಂದಿರಗಳಲ್ಲಿ 'ಯುವರತ್ನ' ಸಿನಿಮಾ ರಿಲೀಸ್ ಆಗಿದೆ. ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ನೂಕುನುಗ್ಗಲು ಉಂಟಾದ ಹಿನ್ನೆಲೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ರುಚಿ ತೋರಿಸಿದರು.

  'ಯವರತ್ನ' ಟ್ವಿಟ್ಟರ್ ವಿಮರ್ಶೆ; ಫಸ್ಟ್ ಶೋ ನೋಡಿ ಅಭಿಮಾನಿಗಳು ಹೇಳಿದ್ದೇನು?'ಯವರತ್ನ' ಟ್ವಿಟ್ಟರ್ ವಿಮರ್ಶೆ; ಫಸ್ಟ್ ಶೋ ನೋಡಿ ಅಭಿಮಾನಿಗಳು ಹೇಳಿದ್ದೇನು?

  ದಾವಣಗೆರೆಯಲ್ಲಿ ಗೀತಾಂಜಲಿ, ಪುಷ್ಪಾಂಜಲಿ, ಹಾಗೂ ವಸಂತ ಚಿತ್ರಮಂದಿರಗಳಲ್ಲಿ ಯುವರತ್ನ ಸಿನಿಮಾ ಬಿಡುಗಡೆಗೊಂಡಿದ್ದು, ಬೆಳಿಗ್ಗೆ ಆರು ಗಂಟೆಯಿಂದ ಮೊದಲ ಶೋ ಶುರುವಾಗಿದೆ. ಚಿತ್ರಮಂದಿರದ ಮುಂಭಾಗ ಮುಂಜಾನೆ 4 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಅಭಿಮಾನಿಗಳು ಕಾಯುತ್ತಿರುವುದು ಕಂಡುಬಂತು.

  ಚಿತ್ರಮಂದಿರದ ಮುಂಭಾಗ ಅಭಿಮಾನಿಗಳು ಜಮಾಯಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಿತ್ರಮಂದಿರದ ಒಳಗೆ ಹೋಗಲು ಅಭಿಮಾನಿಗಳ ನೂಕುನುಗ್ಗಲು ಉಂಟಾದ ಹಿನ್ನೆಲೆ ಪೊಲೀಸರು ಹರ ಸಾಹಸ ಪಟ್ಟರು. ಕೊನೆಗೆ ಲಾಠಿ ರುಚಿ ತೋರಿಸಿ ಅಭಿಮಾನಿಗಳನ್ನು ಪೊಲೀಸರು ನಿಯಂತ್ರಿಸಬೇಕಾಯಿತು.

  ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್, ಧನಂಜಯ್, ಸೋನು ಗೌಡ, ಪ್ರಕಾಶ್ ರಾಜ್ ಸೇರಿದಂತೆ ಹಲವು ಕಾಣಿಸಿಕೊಂಡಿದ್ದಾರೆ. ಎಸ್ ತಮನ್ ಸಂಗೀತವಿದ್ದು, ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ.

  English summary
  People Rushed to Theatre to Watch Puneeth Rajkumar Starrer Yuvarathnaa Movie in Davanagere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X