ಗಾಳಿಪಟ 2ನಿಂದ ತೆಗೆದು ಹಾಕಿದ್ದ ವಿಡಿಯೋ ಸಾಂಗ್ ಬಿಡುಗಡೆ; ಯಪ್ಪಾ ಒಳ್ಳೆ ಕೆಲಸ ಮಾಡಿದ್ರಿ ಎಂದ ಪ್ರೇಕ್ಷಕರು!

ಗಾಳಿಪಟ 2 ಈ ವರ್ಷದ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾದ ಕನ್ನಡದ ಏಕೈಕ ದೊಡ್ಡ ಸಿನಿಮಾ ಎನ್ನಬಹುದು. ಹೀಗೆ ಕನ್ನಡದಲ್ಲಿ ಯಾವುದೇ ಪೈಪೋಟಿ ಇಲ್ಲದೇ ಬಿಡುಗಡೆಯಾದ ಆಗಾಗಲೇ ಭರ್ಜರಿ ಹಿಟ್ ಎನಿಸಿಕೊಂಡಿದ್ದ ತೆಲುಗು ಚಿತ್ರಗಳಾದ ಬಿಂಬಿಸಾರ ಹಾಗೂ ಕಾರ್ತಿಕೇಯ 2 ಸವಾಲಾಗಿದ್ದವು ಹಾಗೂ ಸೂಪರ್ ಹಿಟ್ ಗಾಳಿಪಟದ ಸೀಕ್ವೆಲ್ ಎಂಬುದೇ ಚಿತ್ರಕ್ಕೆ ಇದ್ದ ಎಲ್ಲಾ ಅಂಶಗಳಿಗಿಂತ ದೊಡ್ಡ ಸವಾಲು ಎಂದರೆ ತಪ್ಪಾಗಲಾರದು.

ಅಂತ ದೊಡ್ಡ ಚಿತ್ರದ ಸೀಕ್ವೆಲ್ ಆಗಿರುವ ಈ ಚಿತ್ರ ಗೆಲ್ಲುತ್ತಾ ಎಂಬ ಅನುಮಾನವೇ ಹೆಚ್ಚಿತ್ತಾದರೂ ಆ ಅನುಮಾನಕ್ಕೆ ಸೆಡ್ಡು ಹೊಡೆಯುವ ಪ್ರತಿಕ್ರಿಯೆಗಳನ್ನು ಚಿತ್ರ ಪಡೆದುಕೊಂಡಿತು. ಪ್ರೀಮಿಯರ್ ಶೋಗಳಿಂದಲೇ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾದವು. ಈ ಮೂಲಕ ಮತ್ತೊಮ್ಮೆ ಗಾಳಿಪಟ ಹಿಡಿದು ಭಟ್ರು ಬಾಯ್ಸ್ ಹಿಟ್ ಕೊಟ್ಟರು.

ಇನ್ನು ಈ ಚಿತ್ರದ ಹಾಡುಗಳು ಪ್ರೇಕ್ಷಕರಿಗೆ ಹಿಡಿಸಿತ್ತು. ಅದರಲ್ಲಿಯೂ ನೀನು ಬಗೆಹರಿಯದ ಹಾಡು ಹಾಗೂ ನಾನಾಡದ ಮಾತೆಲ್ಲವ ಹಾಡುಗಳಂತೂ ಹಿಟ್ ಹಾಡುಗಳ ಪಟ್ಟಿ ಸೇರಿವೆ. ಇನ್ನು ಈ ಪೈಕಿ ನೀನು ಬಗೆಹರಿಯದ ಹಾಡು ಭೂಷಣ್ ( ಪವನ್ ಕುಮಾರ್ ) ಹಾಗೂ 'ಶರ್ಮಿಳಾ ಮೇಡಂ'ಗಾಗಿ ಬರೆದಿದ್ದ ಹಾಡಾಗಿತ್ತು ಮತ್ತು ನಾನಾಡದ ಮಾತೆಲ್ಲವ ಹಾಡು ಗಣಿ ( ಗಣೇಶ್ ) ಹಾಗೂ ಶ್ವೇತಾ ( ವೈಭವಿ ಶಾಂಡಿಲ್ಯ ) ಈ ಜೋಡಿಗಾಗಿ ಬರೆದಿದ್ದ ಹಾಡಾಗಿತ್ತು. ಹೀಗೆ ಚಿತ್ರದ ಈ ಇಬ್ಬರೂ ನಾಯಕ ಹಾಗೂ ನಾಯಕಿಯರಿಗೆ ಈ ಎರಡು ಹಾಡುಗಳನ್ನು ಜಯಂತ್ ಕಾಯ್ಕಿಣಿ ಬಳಿ ಬರೆಸಿದ್ದ ನಿರ್ದೇಶಕ ಯೋಗ್‌ರಾಜ್ ಭಟ್ ಚಿತ್ರದ ಅತಿ ದೊಡ್ಡ ಎಂಟರ್‌ಟೈನರ್ ದಿಗಿ ( ದಿಗಂತ್ ) ಹಾಗೂ ಅನುಪಮಾ ( ಸಂಯುಕ್ತಾ ಮೆನನ್ ) ಜೋಡಿಗೆಂದು ತಾವೇ ಬರೆದಿದ್ದ ತತ್ತೇರಿಕೆ ಹಾಡನ್ನು ಚಿತ್ರದಿಂದ ತೆಗೆದು ಹಾಕಿದ್ದರು. ಇದೀಗ ಈ ಹಾಡಿನ ವಿಡಿಯೋ ಬಿಡುಗಡೆಯಾಗಿದ್ದು, ಹಾಡನ್ನು ವೀಕ್ಷಿಸಿದ ವೀಕ್ಷಕರು ಈ ಕೆಳಕಂಡಂತೆ ಪ್ರತಿಕ್ರಿಯಿಸುತ್ತಿದ್ದಾರೆ.

ಯುಟ್ಯೂಬ್‌ನಲ್ಲಿ ತತ್ತೇರಿಕೆ ಬಿಡುಗಡೆ

ಯುಟ್ಯೂಬ್‌ನಲ್ಲಿ ತತ್ತೇರಿಕೆ ಬಿಡುಗಡೆ

ಸಿನಿಮಾದಿಂದ ತೆಗೆದು ಹಾಕಲಾಗಿದ್ದ ತತ್ತೇರಿಕೆ ವಿಡಿಯೋ ಹಾಡನ್ನು ಇಂದು ( ಸೆಪ್ಟೆಂಬರ್ 19 ) ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಬ್ರೇಕಪ್ ಆದ ನಂತರ ಮತ್ತೆ ಶ್ವೇತಾ ಜತೆ ಸೇರಲು ದಿಗಿ ಮಾಡುವ ತುಂಟಾಟ ಹಾಗೂ ಕೀಟಲೆಯ ದೃಶ್ಯಗಳು ಈ ಹಾಡಿನಲ್ಲಿವೆ. ಈ ಹಾಡನ್ನು ಯೋಗರಾಜ್ ಭಟ್ ಗೀಚಿದ್ದರೆ, ನವೀನ್ ಸಜ್ಜು ಹಾಡಿಗೆ ದನಿ ನೀಡಿದ್ದಾರೆ.

ಈ ಹಾಡು ಇರಬೇಕಿತ್ತು

ಈ ಹಾಡು ಇರಬೇಕಿತ್ತು

ಇನ್ನು ಈ ವಿಡಿಯೋ ಹಾಡನ್ನು ವೀಕ್ಷಿಸಿದ ವೀಕ್ಷಕರು ಇಂಥ ಒಳ್ಳೆ ಹಾಡನ್ನು ಯಾಕೆ ಸಿನಿಮಾದಿಂದ ತೆಗೆದು ಹಾಕಿದ್ರಿ ಎಂದು ಬಹುತೇಕರು ಕಾಮೆಂಟ್ ಮಾಡಿದ್ದಾರೆ. ದಿಗಂತ್ ಅವರಿಗಾಗಿ ಒಂದು ಹಾಡು ಇರುತ್ತೆ ಎಂಬ ನಿರೀಕ್ಷೆ ಇತ್ತು, ಹಾಡಿನ ಛಾಯಾಗ್ರಹಣ ಅದ್ಭುತ ಎಂಬ ಕಾಮೆಂಟ್‌ಗಳನ್ನು ಕೆಲ ವೀಕ್ಷಕರು ಮಾಡಿದ್ದಾರೆ.

ಈ ಹಾಡು ಇದ್ದಿದ್ರೆ ಜನ ಥಿಯೇಟರ್‌ನಿಂದ ಆಚೆ ಹೋಗ್ತಿದ್ರು!

ಈ ಹಾಡು ಇದ್ದಿದ್ರೆ ಜನ ಥಿಯೇಟರ್‌ನಿಂದ ಆಚೆ ಹೋಗ್ತಿದ್ರು!

ಇನ್ನು ಈ ಹಾಡು ಸಿನಿಮಾದಲ್ಲಿ ಇರಬೇಕಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಹಾಡು ಸುಮಾರಾಗಿದೆ ಚಿತ್ರದಿಂದ ತೆಗೆದು ಹಾಕಿದ್ದು ಒಳ್ಳೆಯದೇ ಆಯಿತು, ಇಲ್ಲದಿದ್ದರೆ ಚಿತ್ರಕತೆ ಮೇಲೆ ಪ್ರಭಾವ ಬೀರುತ್ತಿತ್ತು ಹಾಗೂ ಈ ಹಾಡು ಚಿತ್ರದಲ್ಲಿದ್ದಿದ್ರೆ ಜನ ಚಿತ್ರಮಂದಿರದಿಂದ ಹೊರ ಹೋಗ್ತಿದ್ರು ಹಾಡಿಗೆ ಕತ್ತರಿ ಹಾಕಿ ಒಳ್ಳೆಯ ಕೆಲಸ ಮಾಡಿದ್ರಿ ಎಂಬ ಅಭಿಪ್ರಾಯಗಳೂ ಸಹ ವ್ಯಕ್ತವಾಗಿವೆ. ಹೀಗೆ ಈ ಹಾಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಇನ್ನೂ ನಿಂತಿಲ್ಲ ಗಾಳಿಪಟದ ಹಾರಾಟ

ಇನ್ನೂ ನಿಂತಿಲ್ಲ ಗಾಳಿಪಟದ ಹಾರಾಟ

ಇನ್ನು ಗಾಳಿಪಟ 2 ಇಂದಿಗೆ ( ಸೆಪ್ಟೆಂಬರ್ 19 ) 38 ದಿನಗಳನ್ನು ಪೂರೈಸಿದ್ದು ಬೆಂಗಳೂರಿನ ಐದಾರು ಮಲ್ಟಿಪ್ಲೆಕ್ಸ್‌ಗಳು, ಮೈಸೂರಿನ ಪ್ರಭಾ ಚಿತ್ರಮಂದಿರ, ಹುಬ್ಬಳ್ಳಿ ಹಾಗೂ ತುಮಕೂರಿನ ಮಲ್ಟಿಪ್ಲೆಕ್ಸ್, ಶಿವಮೊಗ್ಗದ ಮಂಜುನಾಥ ಹಾಗೂ ಭಾರತ್ ಸಿನಿಮಾಸ್ ಮತ್ತು ರಾಜ್ಯದ ಇನ್ನಿತರ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

More from Filmibeat

English summary
People would have walk out of theatre because of this song; Netizens trolled Gaalipata 2 Thatherike video song. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X