twitter
    For Quick Alerts
    ALLOW NOTIFICATIONS  
    For Daily Alerts

    ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಎಂದು ಹೇಳಲಾರೆ: ಶಿವರಾಜ್ ಕುಮಾರ್

    |

    ಚಿತ್ರಮಂದಿರಗಳು ಪುನರ್‌ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುವುದಕ್ಕೆ ನಟ ಶಿವರಾಜ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

    ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದ ಶಿವರಾಜ್‌ ಕುಮಾರ್, ಮಾಧ್ಯಮಗಳೊಟ್ಟಿಗೆ ಮಾತನಾಡಿ, 'ಚಿತ್ರಮಂದಿರಗಳು ರೀ-ಓಪನ್ ಆಗುತ್ತಿರುವುದು ತುಂಬಾ ಖುಷಿ ವಿಚಾರ. ಆದರೆ ಎಷ್ಟು ಜನ ಬರಬೇಕು ಅಂತ ನಟನಾಗಿ ನಾನು ಹೇಳೋಕಾಗೋಲ್ಲ' ಎಂದಿದ್ದಾರೆ.

    'ಪಾರ್ವತಿ' ನೋಡಲು ಮೃಗಾಲಯಕ್ಕೆ ಕುಟುಂಬ ಸಮೇತ ಶಿವಣ್ಣ ಭೇಟಿ'ಪಾರ್ವತಿ' ನೋಡಲು ಮೃಗಾಲಯಕ್ಕೆ ಕುಟುಂಬ ಸಮೇತ ಶಿವಣ್ಣ ಭೇಟಿ

    ಚಿತ್ರಗಳ ಬಿಡುಗಡೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, 'ನಟನಾಗಿ ನಾನು ಶೂಟಿಂಗ್ ಮಾಡಬಹುದು ಆಕ್ಟಿಂಗ್ ಮಾಡಬಹುದು. ಚಿತ್ರ ಪ್ರದರ್ಶನ ಹಾಗೂ ಬಿಡುಗಡೆ ಬಗ್ಗೆ ನಾನೇನು ಹೇಳುವುದಿಲ್ಲ. ಅದಕ್ಕೆ ಅಂತ ನಿರ್ಮಾಪಕರಿದ್ದಾರೆ ಅವರೇ ತೀರ್ಮಾನ ಮಾಡುತ್ತಾರೆ' ಎಂದರು.

    ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಎನ್ನಲಾರೆ: ಶಿವಣ್ಣ

    ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಎನ್ನಲಾರೆ: ಶಿವಣ್ಣ

    'ಸಿನಿಮಾ ನೋಡಲು ಬನ್ನಿ ಎಂದು ನಾನು ಪ್ರೇಕ್ಷಕರನ್ನು ಕರೆಯಬಹುದು, ಆದರೆ ರಿಸ್ಕ್ ತೆಗೆದುಕೊಂಡು ಬಂದು ಸಿನಿಮಾ ನೋಡಿ ಎನ್ನಲಾಗುವುದಿಲ್ಲ, ಆರೋಗ್ಯ ಬಹಳ ಮುಖ್ಯ, ಜನರು ತಮ್ಮ ಸುರಕ್ಷತೆ ನೋಡಿಕೊಂಡು ಚಿತ್ರಮಂದಿರಗಳಿಗೆ ಬರಲಿ' ಎಂದರು ಶಿವರಾಜ್ ಕುಮಾರ್.

    ನನಗೆ ಎಲ್ಲಾ ಸಿನಿಮಾಗಳು ಸಹ ಒಂದೆ: ಶಿವರಾಜ್ ಕುಮಾರ್

    ನನಗೆ ಎಲ್ಲಾ ಸಿನಿಮಾಗಳು ಸಹ ಒಂದೆ: ಶಿವರಾಜ್ ಕುಮಾರ್

    'ಸಿನಿಮಾ ಸಹ ಒಂದು ಉದ್ಯಮ. ಎಲ್ಲ ಉದ್ಯಮದಂತೆ ಇದು ಸಹ ನಿಧಾನವಾಗಿ ಮೇಲೇಳಬೇಕು. ಯಾವ ಸಿನಿಮಾ ಮೊದಲು ಬರಬೇಕು ಎಂದು ಸಹ ನಾನು ಹೇಳಲಾರೆ. ಎಲ್ಲ ಸಿನಿಮಾಗಳು ಒಂದೆ. ಅದೊಂದು ಮ್ಯಾಜಿಕ್ ರೀತಿ ಇರುತ್ತೆ ಯಾವ ಸಿನಿಮಾ ಬೇಕಾದರೂ ಗೆಲ್ಲಬಹುದು' ಎಂದರು ಶಿವರಾಜ್ ಕುಮಾರ್.

    ಚಿತ್ರಮಂದಿರ ತೆರೆದರೂ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಆಗಲ್ಲ, ಕಾರಣ ಇಲ್ಲಿದೆ!ಚಿತ್ರಮಂದಿರ ತೆರೆದರೂ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಆಗಲ್ಲ, ಕಾರಣ ಇಲ್ಲಿದೆ!

    'ಜನರು ತಮ್ಮ ಸುರಕ್ಷತೆ ನೋಡಿಕೊಂಡು ಥಿಯೇಟರ್‌ಗೆ ಬರಲಿ'

    'ಜನರು ತಮ್ಮ ಸುರಕ್ಷತೆ ನೋಡಿಕೊಂಡು ಥಿಯೇಟರ್‌ಗೆ ಬರಲಿ'

    ಜನರು ತಮ್ಮ ಸುರಕ್ಷತೆ ನೋಡಿಕೊಂಡು ಥಿಯೇಟರ್ ಗೆ ಬರಲಿ. ಚಿತ್ರಮಂದಿರದಲ್ಲಿ ಏನೇ ಸಮಸ್ಯೆ ಇದ್ದರೂ ನೇರವಾಗಿ ಹೇಳಲಿ. ಪ್ರೇಕ್ಷಕರ ಸುರಕ್ಷತೆ ನಮಗೆ ಬಹಳಾ ಮುಖ್ಯ. ಮಾರ್ಗಸೂಚಿ ನೋಡಿಕೊಂಡು ನಿರ್ಮಾಪಕರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ ಎಂದರು ಶಿವರಾಜ್ ಕುಮಾರ್.

    Recommended Video

    ಇವರೇನಾ ಗಟ್ಟಿಮೇಳದ ಆದ್ಯ! | Gattimela | Adya | Filmibeat Kannada
    ಮೈಸೂರಿನ ಮೃಗಾಲಯಕ್ಕೆ ಬಂದಿದ್ದ ಶಿವಣ್ಣ

    ಮೈಸೂರಿನ ಮೃಗಾಲಯಕ್ಕೆ ಬಂದಿದ್ದ ಶಿವಣ್ಣ

    ಶಿವರಾಜ್ ಕುಮಾರ್ ತಮ್ಮ ಕುಟುಂಬ ಸಮೇತರಾಗಿ ಮೈಸೂರಿನ ಮೃಗಾಲಯಕ್ಕೆ ಬಂದಿದ್ದರು. ತಾವು ದತ್ತು ಪಡೆದಿರುವ ಆನೆ ಪಾರ್ವತಿಗೆ ಆಹಾರ ತಿನ್ನಿಸಿ ಖುಷಿಪಟ್ಟರು. ನೆಚ್ಚಿನ ನಟ ಶಿವರಾಜ್ ಕುಮಾರ್ ಅನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.

    ಅಕ್ಟೋಬರ್ 15ಕ್ಕೆ ಥಿಯೇಟರ್ ಓಪನ್: ಯಾವ ಸ್ಟಾರ್ಸ್ ಚಿತ್ರಗಳು ರೆಡಿಯಿದೆ?ಅಕ್ಟೋಬರ್ 15ಕ್ಕೆ ಥಿಯೇಟರ್ ಓಪನ್: ಯಾವ ಸ್ಟಾರ್ಸ್ ಚಿತ್ರಗಳು ರೆಡಿಯಿದೆ?

    English summary
    Actor Shiva Rajkumar said peoples safety is more important than movie. I can not ask them to take risk to watch movie.
    Thursday, October 1, 2020, 20:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X