Pepe Trailer: ಅಬ್ಬಾ.. ಏನ್ ಟ್ರೈಲರ್ ಗುರೂ; 'ಪೆಪೆ' ಪ್ರತಿ ಫ್ರೇಮ್ ಚಿಂದಿ

ಕಥೆನ ಎಳ್ಕೊಂಡು ದೇಶ ಬಿಟ್ಟು ಬಾರ್ಡರ್ ದಾಟಿ ವಿದೇಶಕ್ಕೆಲ್ಲಾ ಹೋಗೋದು ಬೇಕಿಲ್ಲ. ನಮ್ಮ ನಾಡಿನ ಮೂಲೆ ಮೂಲೆಯಲ್ಲೇ ಕಥೆಗಳಿವೆ. ಅದನ್ನು ಸರಿಯಾಗಿ ಕಟ್ಟಿ ಸೊಗಸಾಗಿ ತೆರೆಮೇಲೆ ತಂದರೆ ಸಿನಿಮಾ ಗೆಲ್ಲುತ್ತದೆ. ಸದ್ಯ ರಿಲೀಸ್ ಆಗಿರುವ 'ಪೆಪೆ' ಸಿನಿಮಾ ಟ್ರೈಲರ್ ನೋಡಿದರೆ ಅದೇ ಅನುಭೂತಿ ಆಗುತ್ತದೆ.

ವಿನಯ್ ರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ 'ಪೆಪೆ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಪ್ರತಿಯೊಂದು ಫ್ರೇಮ್ ಕೂಡ ಕಣ್ಣಿಗೆ ಹಬ್ಬ ಎನ್ನುವಂತೆ ಸಿನಿಮಾ ಮೂಡಿ ಬಂದಿರುವುದು ಗೊತ್ತಾಗುತ್ತದೆ. ಟ್ರೈಲರ್ ನೋಡಿದ ಹಲವರು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಬೇಕು ಎಂದು ಫಿಕ್ಸ್ ಆಗಿಬಿಟ್ಟಿದ್ದಾರೆ. ಆಗಸ್ಟ್ 30ಕ್ಕೆ ಸಿನಿಮಾ ತೆರೆಗೆ ಬರಲಿದ್ದು ದೊಡ್ಡ ಮಟ್ಟದ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ.

Pepe Trailer Vinay Rajkumar starrer Pepe promises a raw and intense action drama

ಮೊದಲ ಬಾರಿಗೆ ಅಣ್ಣಾವ್ರ ಮೊಮ್ಮಗ ವಿನಯ್ ರಾಜ್‌ಕುಮಾರ್ ರಗಡ್ ಲುಕ್‌ನಲ್ಲಿ ಅಬ್ಬರಿಸಿ ಬೊಬ್ಬರಿದಿದ್ದಾರೆ. ಶ್ರೀಲೇಶ್ ನಾಯರ್ ನಿರ್ದೇಶನದ 'ಪೆಪೆ' ಸಿನಿಮಾ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಾಕ್ಕಿದೆ. ಮಲೆನಾಡಿನ ಭಾಗದ ಗ್ಯಾಂಗ್‌ಸ್ಟರ್ ಕಥೆಯೊಂದನ್ನು ಚಿತ್ರದಲ್ಲಿ ಹೇಳಿರುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ಗಡ್ಡ ಬಿಟ್ಟು, ಲುಂಗಿ ಉಟ್ಟು ಖಡಕ್ ಲುಕ್‌ನಲ್ಲಿ ವಿನಯ್ ರಕ್ತಸಿಕ್ತ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ.

ಮಯೂರ್ ಪಟೇಲ್, ಯಶ್ ಶೆಟ್ಟಿ, ಕಾಜಲ್ ಕುಂದರ್ ಹಾಗೂ ಬಾಲ ಬೆಳವಾಡಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಟೈಟಲ್ ರೋಲ್‌ನಲ್ಲೇ ವಿನಯ್ ನಟಿಸಿದ್ದಾರೆ. ನಗರದ ಮಾಲ್‌ವೊಂದರಲ್ಲಿ ನಟ ಕಿಚ್ಚ ಸುದೀಪ್ 'ಪೆಪೆ' ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ವಿನಯ್ ಹೊಸ ಅವತಾರವನ್ನು ಮೆಚ್ಚಿ ಕೊಂಡಾಡಿದರು.

ಮಲೆನಾಡ ಭಾಗದ ಹಳ್ಳಿಯೊಂದರಲ್ಲಿ 'ಪೆಪೆ' ಸಿನಿಮಾ ಕಥೆ ಸಾಗುತ್ತದೆ. ಜಾತಿ, ರಾಜಕೀಯ, ಸೇಡಿನ ಕಥೆಯನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಇನ್ನು ಸಿನಿಮಾದುದ್ದಕ್ಕೂ ರಕ್ತದ ಕೋಡಿಯನ್ನೇ ಹರಿಸಿರುವುದು ಗೊತ್ತಾಗುತ್ತಿದ್ದು ಈಗಾಗಲೇ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ಕೂಡ ಕೊಟ್ಟಿದೆ. ಅಭಿಷೇಕ್ ಕಾಸರಗೋಡ್ ಛಾಯಾಗ್ರಹಣದ ಕೂಡ ಹೈಲೆಟ್ ಆಗುವ ಎಲ್ಲಾ ಲಕ್ಷಣಗಳು ಗೊತ್ತಾಗುತ್ತಿದೆ.

Pepe Trailer Vinay Rajkumar starrer Pepe promises a raw and intense action drama

ಇನ್ನು ನಾಯಕನಾಗಿ ತಣ್ಣನೆಯ ಜ್ವಾಲಾಮುಖಿಯಂತೆ ವಿನಯ್ ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ಸಿಡಿದು ಅಬ್ಬರಿಸುವ ಪರಿ ತೆರೆಮೇಲೆ ನೋಡುಗರಿಗೆ ಮತ್ತಷ್ಟು ಥ್ರಿಲ್ ಕೊಡಲಿದೆ. ಕತ್ತಿ ಹಿಡಿದು ಕೊನೆ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಅಬ್ಬರಿಸಿರುವ ಪರಿ ಮೈ ಜುಮ್ ಎನಿಸುವಂತಿದೆ. 'ಅವ್ರಿಗೆ ಹೇಳ್ಬಿಡು ಜನರಿಗೆ ತೊಂದ್ರೆ ಕೊಡ್ಬೇಕು ಅಂತ ಬಂದ್ರೆ 'ಪೆಪೆ'ನ ದಾಟ್ಕೊಂಡ್ ಹೋಗ್ಬೇಕು' ಎನ್ನುವ ಡೈಲಾಗ್ ಹೇಳಿ ರಕ್ತದಲ್ಲಿ ಅದ್ದಿದ ಕಣ್ಣು ಗುಡ್ಡೆ ತಿರುಗಿಸುವ ಫ್ರೇಮ್ ಸೂಪರ್.

ಕೇರಳ ಮೂಲದ ನಿರ್ದೇಶಕ ಶ್ರೀಲೇಶ್ ನಾಯರ್ ಕಥೆ, ಚಿತ್ರಕಥೆ ಬರೆದು 'ಪೆಪೆ' ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಭರ್ಜರಿಯಾಗಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಅರ್ಚಕನೋರ್ವನ ಸಾವಿನಿಂದ ಊರಿನಲ್ಲಿ ಹುಟ್ಟುವ ದ್ವೇಷ ಯಾವ ಮಟ್ಟಕ್ಕೆ ಹೋಗುತ್ತದೆ, ಎಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತದೆ ಎನ್ನುವುದು ಸಿನಿಮಾ ಕಥೆ ಎಂದು ಮೆಲ್ನೋಟಕ್ಕೆ ಕಾಣುತ್ತದೆ. ವಿನಯ್‌ಗೆ ಸಿನಿಮಾ ದೊಡ್ಡ ಬ್ರೇಕ್ ಕೊಡುವ ಸುಳಿವು ಸಿಕ್ತಿದೆ.

90ರ ದಶಕದಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಕಥೆ ಇದು. ಹಾಗಾಗಿ ಅವತ್ತಿನ ಕಾಲಘಟ್ಟವನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಡಾ.ರವಿವರ್ಮಾ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಚಿತ್ರಕ್ಕೆ ಫೈಟ್ಸ್ ಕಂಪೋಸ್ ಮಾಡಿದ್ದಾರೆ. ಟ್ರೈಲರ್ ನೋಡಿದವರು ಇನ್ನು ಎರಡ್ಮೂರು ವರ್ಷ ಪ್ರೇಕ್ಷಕರು 'ಪೆಪೆ' ಸಿನಿಮಾ ಬಗ್ಗೆ ಮಾತನಾಡುತ್ತಾರೆ ಎಂದು ಹೇಳುತ್ತಿದ್ದಾರೆ. ಅಷ್ಟರಮಟ್ಟಿಗೆ ಟ್ರೈಲರ್ ಇಂಪ್ರೆಸ್ ಮಾಡಿದೆ.

More from Filmibeat

English summary
Pepe Trailer: Sure-shot elements, sure-footed entertainer;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X