ಆಸ್ಕರ್ ಅಂತಿಮ ಪಟ್ಟಿಗೆ ಆಯ್ಕೆಯಾದ 'ಪಿರಿಯಡ್. ಎಂಡ್ ಆಫ್ ಸೆಂಟೆನ್ಸ್'

ಅಕ್ಷಯ್ ಕುಮಾರ್ ಅಭಿನಯಿಸಿದ್ದ 'ಪ್ಯಾಡ್ ಮ್ಯಾನ್' ಸಿನಿಮಾ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು. ಈಗ ಅದೇ ಕಥೆಯನ್ನಾಧರಿತ ಸಾಕ್ಷ್ಯಚಿತ್ರವೊಂದು ಆಸ್ಕರ್ ಅಂಗಳದಲ್ಲಿ ಸದ್ದು ಮಾಡಿದೆ.

ಹೌದು, 91ನೇ ಅಕಾಡೆಮಿ ಪ್ರಶಸ್ತಿಗಳ ಸಾಕ್ಷ್ಯಚಿತ್ರ ವಿಭಾಗದಲ್ಲಿ ಒಟ್ಟು ಹತ್ತು ಚಿತ್ರಗಳು ಆಯ್ಕೆಯಾಗಿದ್ದು, ಈ ಚಿತ್ರಗಳ ಪೈಕಿ 'ಪಿರಿಯಡ್. ಎಂಡ್ ಆಫ್ ಸೆಂಟೆನ್ಸ್' ಸಿನಿಮಾನೂ ಆಯ್ಕೆಯಾಗಿದೆ. ಒಟ್ಟು 104 ಸಾಕ್ಷ್ಯಚಿತ್ರಗಳು ಪ್ರವೇಶ ಪಡೆದುಕೊಂಡಿತ್ತು.

ಅಂದ್ಹಾಗೆ, ಈ ಡಾಕ್ಯೂಮೆಂಟರಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ಯಂತ್ರಗಳನ್ನು ರೂಪಿಸಿದ ಮುರುಗನಂಥಮ್ ಅವರ ಕಥೆಯನ್ನ ಆಧರಿಸಿ ಮಾಡಲಾಗಿದೆಯಂತೆ, ಹಾಗಾಗಿ, ಇದು ಭಾರತೀಯರಿಗೆ ವಿಶೇಷವೆನಿಸಿದೆ.

Period. End of Sentence makes it to Oscar shortlist

ಈ ಚಿತ್ರವನ್ನ ಅಮೆರಿಕನ್ ನಿರ್ದೇಶಕ ರಾಯಕಾ ಖೆತಾಬ್ಚಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಲಂಚ್ ಬಾಕ್ಸ್ ಮತ್ತು ಮಸಾನ್ ಅಂತಹ ಸಿನಿಮಾಗಳನ್ನ ನಿರ್ಮಿಸಿದ ಸಿಖ್ಯಾ ಎಂಟರ್ ಟೈನ್ಮೆಂಟ್ ಈ ಚಿತ್ರದ ಸಹ ನಿರ್ಮಾಣದ ವಹಿಸಿದೆ. ಹಾಗೂ ಗುನೀತ್ ಮೋಂಗಾ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಇನ್ನುಳಿದಂತೆ ಬ್ಲಾಕ್ ಶಿಪ್, ಎಂಡ್ ಗೇಮ್, ಲೈಫ್ ಬೋಟ್, ಲಾಸ್ ಕಾಮಾಂಡಸ್, ಎ ನೈಟ್ ಅಟ್ ದಿ ಗಾರ್ಡನ್, 63 ಬಾಯ್ ಕಟ್, ವುಮೇನ್ ಆಪ್ ದಿ ಗುಲಾಗ್, ಜೈನ್ ಸಿನಿಮಾಗಳು ಅಂತಿಮ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಇನ್ನು ವಿದೇಶಿ ಸಿನಿಮಾ ವಿಭಾಗದಲ್ಲಿ ಭಾರತದ 'ವಿಲೇಜ್ ರಾಕ್ ಸ್ಟಾರ್' ಸಿನಿಮಾ ಮುಂದಿನ ಹಂತಕ್ಕೆ ತಲುಪಲಿಲ್ಲ. ಜನವರಿ ತಿಂಗಳಲ್ಲಿ ಆಸ್ಕರ್ ಗೆ ನಾಮನಿರ್ದೇಶನಗೊಳ್ಳುವ ಪಟ್ಟಿಯನ್ನ ಪ್ರಕಟಿಸಲಾಗುತ್ತದೆ. ಫೆಬ್ರವರಿಯಲ್ಲಿ ಪ್ರಶಸ್ತಿ ನೀಡಲಾಗುತ್ತೆ.

More from Filmibeat

English summary
‘Period. End of Sentence,’ the short documentary film on the stigma surrounding women during menstruation in rural India has made it to the 91st Oscar’s shortlist in the Documentary Short Subject category.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X