ಶಿವಣ್ಣ ಚಿತ್ರಕ್ಕಾಗಿ ಬಂದ ಸಾಹಸ ನಿರ್ದೇಶಕ ಪೀಟರ್ ಹೇನ್
Recommended Video

ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೇನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. 'ಬಾಹುಬಲಿ', 'ಮಗಧೀರ' ಅಂತಹ ಚಿತ್ರಗಳಿಗೆ ಸ್ಟಂಟ್ ಡೈರೆಕ್ಟ್ ಮಾಡಿರುವ ಪೀಟರ್ ಹೇನ್ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಸಾಹಸ ನಿರ್ದೇಶನ ಮಾಡಲಿದ್ದಾರೆ.
ತೆಲುಗು, ಹಿಂದಿ, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಪೀಟರ್ ಹೇನ್ ದಕ್ಷಿಣ ಭಾರತದ ಬಹುಬೇಡಿಕೆ ಮತ್ತು ಕಾಸ್ಟ್ಲಿ ಡೈರೆಕ್ಟರ್. ಇಂತಹ ನಿರ್ದೇಶಕ ಕನ್ನಡ ಕೆಲವು ಚಿತ್ರಗಳಿಗೂ ಸಾಹಸ ನಿರ್ದೇಶನ ಮಾಡಿದ್ದಾರೆ.
ಅಷ್ಟಕ್ಕೂ, ಪೀಟರ್ ಹೇನ್ ಎಂಟ್ರಿ ಕೊಡ್ತಿರುವ ಶಿವರಾಜ್ ಕುಮಾರ್ ಸಿನಿಮಾ ಯಾವುದು.? ಈ ಹಿಂದೆ ಪೀಟರ್ ಹೇನ್ ಯಾವ ಕನ್ನಡ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದರು ಎಂದು ತಿಳಿಯಲು ಮುಂದೆ....

'ಎಸ್ ಆರ್ ಕೆ' ಚಿತ್ರಕ್ಕಾಗಿ ಪೀಟರ್ ಹೇನ್
ಡಾ ರಾಜಕುಮಾರ್ ಕುಟುಂಬದಿಂದ ಕುಡಿ ಲಕ್ಕಿ ಗೋಪಾಲ್ ಪ್ರಥಮ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಎಸ್ ಆರ್ ಕೆ' ಚಿತ್ರಕ್ಕಾಗಿ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೇನ್ ಕೆಲಸ ಮಾಡಲಿದ್ದಾರೆ. ನಿರ್ದೇಶಕ ಲಕ್ಕಿ ಗೋಪಾಲ್ ಅವರು ಹೇಳಿದ ಕಥೆ ಕೇಳಿ ಖುಷಿಯಿಂದ ಸಾಹಸ ನಿರ್ದೇಶನ ಮಾಡಲು ಪೀಟರ್ ಹೇನ್ ಒಪ್ಪಿಕೊಂಡಿದ್ದಾರೆ.

ಶಿವಣ್ಣ ಜೊತೆ ಎರಡನೇ ಸಿನಿಮಾ
ವಿಶೇಷ ಅಂದ್ರೆ, ಶಿವರಾಜ್ ಕುಮಾರ್ ಜೊತೆ ಪೀಟರ್ ಹೇನ್ ಅವರದ್ದು ಎರಡನೇ ಸಿನಿಮಾ. ಈ ಹಿಂದೆ ಹ್ಯಾಟ್ರಿಕ್ ಹೀರೋ ಅಭಿನಯಿಸಿದ್ದ 'ಸತ್ಯ ಇನ್ ಲವ್' ಚಿತ್ರಕ್ಕೆ ಪೀಟರ್ ಹೇನ್ ಸ್ಟಂಟ್ ಡೈರೆಕ್ಟ್ ಮಾಡಿದ್ದರು.

ಕಿಚ್ಚನ ರನ್ನ ಚಿತ್ರಕ್ಕೂ ಆಕ್ಷನ್ ಕಟ್
'ಸತ್ಯ ಇನ್ ಲವ್' ನಂತರ ನಂತರ ಸುದೀಪ್ ಅಭಿನಯಿಸಿದ್ದ 'ರನ್ನ' ಚಿತ್ರಕ್ಕೆ ಪೀಟರ್ ಹೇನ್ ಸಾಹಸ ನಿರ್ದೇಶನ ಮಾಡಿದ್ದರು. ಇದೀಗ, ಮತ್ತೊಮ್ಮೆ ಕನ್ನಡ ಸಿನಿಮಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಪ್ಪು ಚಿತ್ರಕ್ಕೂ ಫೈಟ್ ಮಾಸ್ಟರ್
ಇನ್ನು ಲೇಟೆಸ್ಟ್ ಆಗಿ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ನಟಸಾರ್ವಭೌಮ' ಚಿತ್ರದಲ್ಲೂ ಪೀಟರ್ ಹೇನ್ ಫೈಟ್ ನೋಡಬಹುದು. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರ ಈಗಾಗಲೇ ಶೂಟಿಂಗ್ ನಡೆಯುತ್ತಿದೆ.

ಎಸ್ ಆರ್ ಕೆ ಚಿತ್ರತಂಡ
ಅಂದ್ಹಾಗೆ, ಎಸ್ ಆರ್ ಕೆ ಸಿನಿಮಾದ ಶೀರ್ಷಿಕೆ ಈಗಾಗಲೇ ಬಿಡುಗಡೆಯಾಗಿದೆ. ಕಿರಣ್ ಕುಮಾರ್ ಪ್ರೊಡಕ್ಷನ್ ಅಡಿಯಲ್ಲಿ ಕಿರಣ್ ಕುಮಾರ್ ಸಿ ಗೌಡ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. 'ಮಫ್ತಿ' ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ನವೀನ್ ಕುಮಾರ್ ಕ್ಯಾಮರಾ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಇನ್ನಿತರ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ನಡೆಸಲಾಗುತ್ತಿದೆ ಎಂದು ನಿರ್ದೇಶಕ ಲಕ್ಕಿ ಗೋಪಾಲ್ ತಿಳಿಸಿದ್ದಾರೆ.


Click it and Unblock the Notifications











