For Quick Alerts
  ALLOW NOTIFICATIONS  
  For Daily Alerts

  ಅಪ್ಪು ಚಿತ್ರಕ್ಕೆ ಫೈಟ್ ಹೇಳಿಕೊಡುತ್ತಾರೆ 'ಬಾಹುಬಲಿ' ಖ್ಯಾತಿಯ ಸಾಹಸ ನಿರ್ದೇಶಕ

  By Naveen
  |
  ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾ ಸ್ಟಂಟ್ ಮಾಸ್ಟರ್ ಯಾರು ಗೊತ್ತಾ? | Filmibeat Kannada

  ಪುನೀತ್ ರಾಜ್ ಕುಮಾರ್ ಈಗ ದಿನಕ್ಕೊಂದು ಸುದ್ದಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಹೊಸ ಸಿನಿಮಾ. ಎರಡು ದಿನದ ಹಿಂದೆ ತಾನೇ ಅಪ್ಪು ಅವರ ಹೊಸ ಹೇರ್ ಸ್ಟೈಲ್ ನೋಡಿ ಎಲ್ಲರೂ ಮಾತನಾಡಿದ್ದರು. ಈಗ ಈ ಸಿನಿಮಾದ ಮತ್ತೊಂದು ಕುತೂಹಲಕಾರಿ ವಿಷಯ ಬಹಿರಂಗವಾಗಿದೆ. ಈ ಸಿನಿಮಾದ ಸಾಹಸ ನಿರ್ದೇಶಕರ ಆಯ್ಕೆ ಇದೀಗ ಆಗಿದೆ.

  ಸದ್ಯ ಪುನೀತ್ ಗೆ ಫೈಟ್ ಹೇಳಿಕೊಡುವುದಕ್ಕೆ ಬಂದಿರುವುದು ಸಾಹಸ ನಿರ್ದೇಶಕ ಪೀಟರ್ ಹೈನ್ಸ್. ಪೀಟರ್ ಹೈನ್ಸ್ ಪ್ರತಿಭೆಯ ಬಗ್ಗೆ ಹೆಚ್ಚು ಹೇಳುವ ಅಗತ್ಯವೇ ಇಲ್ಲ. ಕಾರಣ ಅವರು ಇಡೀ ಸೌತ್ ಇಂಡಿಯಾದ ಬಹುಬೇಡಿಕೆಯ ಸಾಹಸ ನಿರ್ದೇಶಕರಾಗಿದ್ದಾರೆ. 'ಬಾಹುಬಲಿ' ಸೇರಿದಂತೆ ಟಾಲಿವುಡ್ ನಲ್ಲಿ ಅದೆಷ್ಟೋ ಸೂಪರ್ ಹಿಟ್ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಭಾರತದ ದೊಡ್ಡ ದೊಡ್ಡ ನಟರ ಜೊತೆಗೆ ಪೀಟರ್ ಹೈನ್ಸ್ ಕೆಲಸ ಮಾಡಿದ್ದಾರೆ.

  ಹೊಸ ಸಿನಿಮಾಗಾಗಿ ಬದಲಾಯಿತು ಪುನೀತ್ ಹೇರ್ ಸ್ಟೈಲ್ ಹೊಸ ಸಿನಿಮಾಗಾಗಿ ಬದಲಾಯಿತು ಪುನೀತ್ ಹೇರ್ ಸ್ಟೈಲ್

  ಪೀಟರ್ ಹೈನ್ಸ್ ಈ ಹಿಂದೆಯೇ ಕನ್ನಡಕ್ಕೆ ಬಂದಿದ್ದರು. ಶಿವರಾಜ್ ಕುಮಾರ್ ಅವರ 'ಸತ್ಯ ಇನ್ ಲವ್' ಸಿನಿಮಾದ ಮೂಲಕ ಪೀಟರ್ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಖಾತೆ ಶುರು ಮಾಡಿದರು. ಆ ನಂತರ ಸುದೀಪ್ ಅವರ 'ರನ್ನ' ಚಿತ್ರದ ಫೈಟ್ ಮಾಡಿಸಿದ್ದು ಕೂಡ ಇದೇ ಪೀಟರ್ ಹೈನ್ಸ್. ಸೋ, ಇದೀಗ ಮತ್ತೆ ಕನ್ನಡಕ್ಕೆ ಬಂದಿರುವ ಪೀಟರ್ ಈ ಬಾರಿ ಪುನೀತ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.

  ವಿಶೇಷ ಅಂದರೆ ದಕ್ಷಿಣ ಭಾರತದ ನಟರ ಪೈಕಿ ಅಪ್ಪು ಒನ್ ಆಫ್ ದಿ ಬೆಸ್ಟ್ ಫೈಟ್ ಗಳನ್ನು ಮಾಡುವ ನಟ. ಸಿನಿಮಾದ ದೃಶ್ಯಕ್ಕೆ ಏನು ಬೇಕಾದರೂ ಮಾಡಲು ಅಪ್ಪು ರೆಡಿ ಇರುತ್ತಾರೆ. ಈಗ ಪುನೀತ್ ಗೆ ಪೀಟರ್ ಹೈನ್ಸ್ ಜೊತೆಯಾಗಿದ್ದು, ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ಅಂದಹಾಗೆ, ಪುನೀತ್ ರಾಜ್ ಕುಮಾರ್ ಅವರ ಈ ಹೊಸ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಈ ಚಿತ್ರವನ್ನು ಪವನ್ ಓಡೆಯರ್ ನಿರ್ದೇಶನ ಮತ್ತು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿಯಾಗಿ ಪ್ರಿಯಾಂಕ ಜ್ವಾಲಕರ್ ಮತ್ತು ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಬಿ ಸರೋಜ ದೇವಿ ಸಹ ನಟಿಸುತ್ತಿದ್ದಾರೆ.

  ಪುನೀತ್ ಸಿನಿಮಾಗಾಗಿ ಮತ್ತೆ ಕ್ಯಾಮರಾ ಮುಂದೆ ಬಂದ ಬಿ.ಸರೋಜಾದೇವಿಪುನೀತ್ ಸಿನಿಮಾಗಾಗಿ ಮತ್ತೆ ಕ್ಯಾಮರಾ ಮುಂದೆ ಬಂದ ಬಿ.ಸರೋಜಾದೇವಿ

  English summary
  Fight master Peter Hein will compose stunts for Kannada actor Puneeth Rajkumar's new movie. The movie directed by pawan wodeyar and produced by rockline venkatesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X