For Quick Alerts
  ALLOW NOTIFICATIONS  
  For Daily Alerts

  ವಿಜಯ್ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ ಸಿಬ್ಬಂದಿ

  |

  ನಟ ವಿಜಯ್ ರಾಘವೇಂದ್ರ ಅವರನ್ನು ನೋಡಿದ ಖುಷಿಯಲ್ಲಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

  ಶಿವಮೊಗ್ಗದ ಪ್ರತಿಷ್ಠಿತ ಪೆಟ್ರೋಲ್ ಬಂಕ್ ಒಂದರಲ್ಲಿ ಮಂಗಳವಾರ ಈ ಘಟನೆ ವರದಿಯಾಗಿದೆ. ಪ್ರವಾಸಕ್ಕೆಂದು ಕುಟುಂಬದೊಂದಿಗೆ ಬಂದಿದ್ದ ವಿಜಯ್ ರಾಘವೇಂದ್ರ ಜೋಗ ನೋಡಿಕೊಂಡು ಬೆಂಗಳೂರಿಗೆ ವಾಪಸ್ ಆಗುವ ಸಂದರ್ಭದಲ್ಲಿ ಪೆಟ್ರೋಲ್ ಹಾಕಿಸಲು ಹತ್ತಿರದ ಪೆಟ್ರೋಲ್ ಬಂಕ್‌ಗೆ ಹೋಗಿದ್ದಾರೆ.

  ವಿಜಯ್ ರಾಘವೇಂದ್ರ ಹಾಡು ಹಾಡಲು ಆ ವಿಶೇಷ ವ್ಯಕ್ತಿಯೇ ಸ್ಪೂರ್ತಿವಿಜಯ್ ರಾಘವೇಂದ್ರ ಹಾಡು ಹಾಡಲು ಆ ವಿಶೇಷ ವ್ಯಕ್ತಿಯೇ ಸ್ಪೂರ್ತಿ

  ಈ ವೇಳೆ ಪೆಟ್ರೋಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ನೆಚ್ಚಿನ ಸಿನಿಮಾ ನಟನನ್ನು ನೋಡಿ ಖುಷಿಯಾಗಿ ಮೈ ಮರೆತು ಪೆಟ್ರೋಲ್ ಬದಲು ಡೀಸೆಲ್ ಹಾಕಿಬಿಟ್ಟಿದ್ದಾನೆ.

  ಬಳಿಕ ನಟ ವಿಜಯ್ ರಾಘವೇಂದ್ರ ಅವರ ಬಳಿ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಮಾಲೀಕರು ಕ್ಷಮೆ ಯಾಚಿಸಿದ್ದಾರೆ. ನಂತರ ತಮ್ಮ ಲಾರಿಯಲ್ಲಿ ಹತ್ತಿಸಿ ಸರ್ವೀಸ್ ಗೆ ಕಳುಹಿಸಲಾಯಿತು.

  Petrol Bunk staff has put diesel instead of petrol to Vijay Raghavendra car.

  ಮತ್ತೊಂದೆಡೆ ವಿಜಯ್ ರಾಘವೇಂದ್ರ‌ ಹಾಗೂ ಕುಟುಂಬದವರು ಬೇರೆ ಕಾರಿನ ವ್ಯವಸ್ಥೆ ಮಾಡಿಕೊಂಡು ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

  English summary
  Petrol Bunk staff has put diesel instead of petrol to Vijay Raghavendra car at shivamogga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X