'ಪೆಟ್ರೋಮ್ಯಾಕ್ಸ್' ಚಿತ್ರೀಕರಣಕ್ಕೆ ದಿನಾಂಕ ನಿಗದಿ: ಸತೀಶ್ ನೀನಾಸಂಗೆ 'ನೀರ್ ದೋಸೆ' ವಿಜಯ್ ಪ್ರಸಾದ್ ನಿರ್ದೇಶನ
'ನೀರ್ ದೋಸೆ' ಖ್ಯಾತಿಯ ವಿಜಯ್ ಪ್ರಸಾದ್ ಮತ್ತು ನಟ ಸತೀಶ್ ನೀನಾಸಂ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಮೂಡಿ ಬರುತ್ತಿರುವ ವಿಷಯ ಹಳೆದು. ಚಿತ್ರಕ್ಕೆ ಪೆಟ್ರೋಮ್ಯಾಕ್ಸ್ ಎಂದು ಟೈಟಲ್ ಇಡಲಾಗಿದೆ. ಸ್ಯಾಂಡಲ್ ವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಪೆಟ್ರೋಮ್ಯಾಕ್ಸ್ ಈಗ ಚಿತ್ರೀಕರಣದ ಅಂಗಳಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ.
ಹೌದು, ಪೆಟ್ರೋಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಇದೆ ತಿಂಗಳು 19 ರಿಂದ ಚಿತ್ರದ ಚಿತ್ರೀಕರಣ ಶುರು ಮಾಡಲಿದೆ. ಈಗಾಗಲೇ ಎಲ್ಲ ತಯಾರಿಗಳನ್ನು ಮಾಡಿಕೊಂಡಿರುವ ಸಿನಿಮಾತಂಡ ಲಾಕ್ ಡೌನ್ ಬಳಿಕ ಮೊದಲೆ ಬಾರಿಗೆ ಚಿತ್ರೀಕರಣಕ್ಕೆ ಹೊರಡುತ್ತಿದೆ.
ಅಂದ್ಹಾಗೆ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಬರುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾ ಈ ಹಿಂದೆಯೆ ಅನೌನ್ಸ್ ಆಗಿತ್ತು. ಸಿದ್ಲಿಂಗು ಸಿನಿಮಾ ರಿಲೀಸ್ ಆದ ಬಳಿಕ ಈ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಅಲ್ಲಿಗೆ ನಿಂತುಹೋಗಿತ್ತು. ಬಳಿಕ ವಿಜಯ್ ಪ್ರಸಾದ್ ಪರಿಮಳ ಲಾಡ್ಜ್ ಸಿನಿಮಾ ಅನೌನ್ಸ್ ಮಾಡಿದ್ರು. ಅಲ್ಲದೆ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಇದೀಗ 'ಪರಿಮಳ ಲಾಡ್ಜ್' ಟೇಕಾಫ್ ಆಗುವ ಮೊದಲೆ ಪೆಟ್ರೇಮ್ಯಾಕ್ಸ್ ಸಿನಿಮಾ ಪ್ರಾರಂಭಿಸಿದ್ದಾರೆ.

ಅಂದ್ಹಾಗೆ ಸಿನಿಮಾದಲ್ಲಿ ಯಾರೆಲ್ಲ ಕಲಾವಿದರು ಇರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈ ಮೊದಲು ನಾಯಕಿ ಪಾತ್ರಕ್ಕೆ ಅದಿತಿ ಪ್ರಭುದೇವ ಹೆಸರು ಕೇಳಿ ಬರುತ್ತಿತ್ತು. ಆದರೆ ಅದಿತಿ ಈ ಸಿನಿಮಾದ ಭಾಗವಾಗಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಸತೀಶ್ ಗೆ ನಾಯಕಿ ಯಾರಾಗ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.


Click it and Unblock the Notifications











