ಹೈದರಾಬಾದ್‌ಗೆ ಬಾಯ್ ಹೇಳಿದ ಸುದೀಪ್, 'ಅದ್ಭುತ ಅನುಭವ' ಎಂದ ನಟ
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಸಂಪೂರ್ಣ ಕೆಲಸ ಮುಗಿದಿದ್ದು, ಚಿತ್ರಮಂದಿರಗಳ ಪರಿಸ್ಥಿತಿ ನೋಡ್ಕೊಂಡು ತೆರೆಗೆ ಬರಲು ತಯಾರಾಗಿದೆ. ಈ ಚಿತ್ರದ ಬಳಿಕ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾ ಕೈಗೆತ್ತಿಕೊಂಡಿದ್ದರು.
Recommended Video
ಲಾಕ್‌ಡೌನ್‌ನಿಂದ ಸ್ವಲ್ಪ ಮಟ್ಟಿಗೆ ಸಡಿಲಿಕೆ ಸಿಗುತ್ತಿದ್ದಂತೆ ಚಿತ್ರೀಕರಣ ಆರಂಭಿಸಿದ್ದ ಫ್ಯಾಂಟಮ್, ಹೈದರಾಬಾದ್‌ನಲ್ಲಿ ಅದ್ಧೂರಿ ಸೆಟ್ ನಿರ್ಮಿಸಿದ್ದರು. ರಾಮೋ ಜಿ ಫಿಲಂ ಸಿಟಿಯಲ್ಲಿ ನಿರಂತರವಾಗಿ ಚಿತ್ರೀಕರಣ ಮಾಡುತ್ತಿದ್ದ ಫ್ಯಾಂಟಮ್ ಕೊನೆಗೂ ಹೈದರಾಬಾದ್ ಶೆಡ್ಯೂಲ್ ಮುಗಿಸಿದೆ. ಮುಂದೆ ಓದಿ....

ಹೈದರಾಬಾದ್‌ಗೆ ಬಾಯ್ ಹೇಳಿದ ಸುದೀಪ್
'ಫ್ಯಾಂಟಮ್' ಚಿತ್ರಕ್ಕಾಗಿ ಹಲವು ತಿಂಗಳಿನಿಂದ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವ ಕಿಚ್ಚ ಸುದೀಪ್, ಕೊನೆಗೂ ಶೂಟಿಂಗ್ ಮುಗಿಸಿದ್ದಾರೆ. ''ಸುದೀರ್ಘವಾದ ಶೆಡ್ಯೂಲ್ ಇಂದು ಮುಕ್ತಾಯವಾಯಿತು, ಇದೊಂದು ಅದ್ಭುತ ಅನುಭವ'' ಎಂದು ಮಾಹಿತಿ ನೀಡಿದ್ದಾರೆ.

ಇದು ನಿಜಕ್ಕೂ ಸಾಧನೆ
''ಹೈದರಾಬಾದ್‌ನ ಸುದೀರ್ಘ ಶೆಡ್ಯೂಲ್ ಈಗತಾನೆ ಮುಕ್ತಾಯವಾಗಿದೆ. ಇದೊಂದು ಅದ್ಭುತ ಅನುಭವ. ಯಾರೂ ನಿರೀಕ್ಷೆ ಮಾಡದಿದ್ದಾಗ ಶೂಟಿಂಗ್ ಆರಂಭಿಸಿ, ಯೋಜನೆಯಂತೆ ಮುಗಿಸಿದ್ದು ನಿಜಕ್ಕೂ ಒಂದು ಸಾಧನೆ. ಕೊನೆಯ ಶೆಡ್ಯೂಲ್ ಸದ್ಯದಲ್ಲೇ ಪ್ರಾರಂಭವಾಗಲಿದೆ'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಪೊಲೀಸ್ ಆಫೀಸರ್ ಆಗಿ ಸುದೀಪ್?
ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ತಿಳಿದಿರುವ ವಿಚಾರ. ಈ ವಿಕ್ರಾಂತ್ ರೋಣ ರೋಣ ಪೊಲೀಸ್ ಅಧಿಕಾರಿ ಎನ್ನುವ ವಿಚಾರ ಮೂಲಗಳಿಂದ ಹೊರಬಿದ್ದಿದೆ. ಹೌದು, ಸುದೀಪ್ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಏಪ್ರಿಲ್‌ನಲ್ಲಿ ತೆರೆಗೆ!
ಕೊನೆಯ ಹಂತದ ಚಿತ್ರೀಕರಣ ಮುಗಿದರೆ ಫ್ಯಾಂಟಮ್ ಕೆಲಸ ಮುಗಿತು. ಆಮೇಲೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಲಿದೆ. ಸದ್ಯದ ಮಾಹಿತಿ ಪ್ರಕಾರ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಫ್ಯಾಂಟಮ್ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.


Click it and Unblock the Notifications











