twitter
    For Quick Alerts
    ALLOW NOTIFICATIONS  
    For Daily Alerts

    'ಫ್ಯಾಂಟಮ್' ಲೋಕಕ್ಕೆ ಎಂಟ್ರಿ ಕೊಡುತ್ತಿರುವ ಪನ್ನಾ ಯಾರು?

    |

    ಕಿಚ್ಚ ಸುದೀಪ್ ಸದ್ಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೈದರಾಬಾದ್ ನಲ್ಲಿ ಬೀಡು ಬಿಟ್ಟಿರುವ ಕಿಚ್ಚ ಮತ್ತು ಟೀಂ ಫ್ಯಾಂಟಮ್ ಲೋಕವನ್ನು ಭರ್ಜರಿಯಾಗಿ ಸೆರೆಹಿಡಿಯುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾತಂಡ ಫ್ಯಾಂಟಮ್ ಲೋಕದ ಝಲಕ್ ಅನ್ನು ಅಭಿಮಾನಿಗಳಿಗೆ ತೋರಿಸಿತ್ತು. ಕಿಚ್ಚನ ಹೊಸ ಪ್ರಪಂಚ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಬಳಿಕ ಫ್ಯಾಂಟಮ್ ಲೋಕದ ನಾಯಕ ವಿಕ್ರಾಂತ್ ರೋಣ ಮತ್ತು ಸಂಜು ಪ್ರಾತ್ರವನ್ನು ನಿರ್ದೇಶಕ ಅನೂಪ್ ಭಂಡಾರಿ ಪರಿಚಯ ಮಾಡಿಕೊಟ್ಟಿದ್ದಾರೆ. ಹೌದು, ಫ್ಯಾಂಟಮ್ ಸಿನಿಮಾದಲ್ಲಿ ವಿಕ್ರಾಂತ್ ರೋಣನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್ ಫಸ್ಟ್ ರಿಲೀಸ್ ಮಾಡಲಾಗಿದೆ. ನಂತರ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ನಿರೂಪ್ ಭಂಡಾರಿ ಲುಕ್ ಸಹ ಅನಾವರಣವಾಗಿದೆ.

    'ಫ್ಯಾಂಟಮ್' ಲೋಕಕ್ಕೆ ಲಂಡನ್ ನಿಂದ ಬಂದ ಸಂಜು: ವಿಶ್ ಮಾಡಿದ ವಿಕ್ರಾಂತ್ ರೋಣ'ಫ್ಯಾಂಟಮ್' ಲೋಕಕ್ಕೆ ಲಂಡನ್ ನಿಂದ ಬಂದ ಸಂಜು: ವಿಶ್ ಮಾಡಿದ ವಿಕ್ರಾಂತ್ ರೋಣ

    ನಿರೂಪ್ ಭಂಡಾರಿ ಹುಟ್ಟುಹಬ್ಬದಂದು ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಸಂಜು ಪಾತ್ರದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾರೆ ನಿರ್ದೇಶಕ ಅನೂಪ್. ಇದೀಗ ಸಿನಿಮಾದ ಮತ್ತೊಂದು ಇಂಟರೆಸ್ಟಿಂಗ್ ಪಾತ್ರ ರಿವೀಲ್ ಆಗುತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     Phantom Movie Team Will Ready To Introduce The Next Character Panna

    "ಫ್ಯಾಂಟಮ್ ಸಿನಿಮಾದ ಪನ್ನಾ ಪಾತ್ರವನ್ನು ನಾಳೆ ಪರಿಚಯಿಸಲಾಗುತ್ತೆ. ಪಾತ್ರದ ಬಗ್ಗೆ ನಿರ್ದೇಶಕ ಅನೂಪ್ ಹೇಳಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ. ಫ್ಯಾಂಟಮ್ ಪ್ರಪಂಚಕ್ಕೆ ಸ್ವಾಗತ" ಎಂದು ಟ್ವೀಟ್ ಮಾಡಿದ್ದಾರೆ.

    ಅಂದ್ಹಾಗೆ ಪನ್ನಾ ಯಾರು ಎನ್ನ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪನ್ನಾ ಪಾತ್ರಧಾರಿ ಶ್ರದ್ಧಾ ಅವರೇ ಇರಬಹುದ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಯಾರಿರಬಹುದು ಎಂದು ಕಾತರದಿಂದ ಕಾಯುತ್ತಿದ್ದಾರೆ. ಫ್ಯಾಂಟಮ್ ಲೋಕದ ಪನ್ನಾ ಯಾರು ಎಂದು ತಿಳಿದುಕೊಳ್ಳಬೇಕೆಂದರೆ ನಾಳೆವರೆಗೂ ಕಾಯಲೇಬೇಕು.

    English summary
    Phantom movie team will ready to introduce the next character Panna.
    Wednesday, August 19, 2020, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X