For Quick Alerts
  ALLOW NOTIFICATIONS  
  For Daily Alerts

  ದುನಿಯಾ ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವು

  |

  ದುನಿಯಾ ಖ್ಯಾತಿಯ ನಟಿ ರಶ್ಮಿ ಅವರ ಮನೆ ಮೇಲಿಂದ ಯುವಕನೊಬ್ಬ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 25 ವರ್ಷದ ಪ್ರತೀಕ್ ಎಂಬ ಯುವಕ ಸಾವನ್ನಪ್ಪಿದ್ದಾರೆ.

  ಪ್ರತೀಕ್ ವೃತ್ತಿಯಲ್ಲಿ ಫೊಟೋಗ್ರಫರ್ ಆಗಿದ್ದು, ದುನಿಯಾ ರಶ್ಮಿ ಅವರ ಸಹೋದರ ಅರುಣ್ ಅವರ ಸ್ನೇಹಿತರಾಗಿದ್ದರಂತೆ. ರಾತ್ರಿ ಮನೆಯಲ್ಲಿ ಪಾರ್ಟಿ ಇದ್ದ ಕಾರಣ ಆಗಮಿಸಿದ್ದ ಪ್ರತೀಕ್ ಮನೆ ಮೇಲೆ ಹೋಗಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಪಾನಮತ್ತನಾಗಿದ್ದ ಪ್ರತೀಕ್ ಬಿಲ್ಡಿಂಗ್ ಮೇಲಿಂದ ಬಿದ್ದಿದ್ದಾನೆ ಎನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಮಾರ್ಗಮಧ್ಯೆ ಪ್ರತೀಕ್ ಕೊನೆಯುಸಿರೆಳೆದಿದ್ದಾರೆ.

  ದುನಿಯಾ ರಶ್ಮಿ ಯಾರ್ ಜೊತೆಗೂ ಮಾತಾಡುತ್ತಿಲ್ಲ ಯಾಕೆ?ದುನಿಯಾ ರಶ್ಮಿ ಯಾರ್ ಜೊತೆಗೂ ಮಾತಾಡುತ್ತಿಲ್ಲ ಯಾಕೆ?

  ಅಂದ್ಹಾಗೆ, ದುನಿಯಾ ರಶ್ಮಿ ಸಹೋದರ ಅರುಣ್ ಮತ್ತು ಪ್ರತೀಕ್ ಇಬ್ಬರು ಬಿಲ್ಡಿಂಗ್ ಮೇಲೆ ಪಾರ್ಟಿ ಮಾಡುತ್ತಿದ್ದರು. ಈ ಮಧ್ಯೆ ಅರುಣ್ ಊಟ ತರಲು ಮೇಲಿಂದ ಕೆಳಗೆ ಬಂದಿದ್ದಾನೆ. ಆ ಸಮಯದಲ್ಲಿ ಮತ್ತಿನಲ್ಲಿದ್ದ ಪ್ರತೀಕ್ ಮೇಲಿಂದ ಬಿದ್ದಿದ್ದಾನೆ ಎನ್ನಲಾಗಿದೆ.

  ನಂತರ ಅನ್ನಪೂರ್ಣಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದುನಿಯಾ ರಶ್ಮಿ ಕುಟುಂಬದವರು ದೂರು ನೀಡಿದ್ದಾರೆ. ಬಳಿಕ ವಿಷ್ಯ ತಿಳಿದ ಪ್ರತೀಕ್ ಕುಟುಂಬಸ್ಥರು ರಶ್ಮಿ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಅನ್ನಪೂರ್ಣಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

  English summary
  A 25-year-old photographer fell to his death on Sunday night under mysterious circumstances from the terrace of a three floor building in Annapoorneshwari Nagar where Duniya- fame actor Rashmi resides.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X