»   » ಸುದೀಪ್ ಹಾಲಿವುಡ್ ಚಿತ್ರದ ಫೋಟೋಶೂಟ್ ಮಾಡಿದ ಛಾಯಾಗ್ರಾಹಕ ಫುಲ್ ಖುಷಿ.!

ಸುದೀಪ್ ಹಾಲಿವುಡ್ ಚಿತ್ರದ ಫೋಟೋಶೂಟ್ ಮಾಡಿದ ಛಾಯಾಗ್ರಾಹಕ ಫುಲ್ ಖುಷಿ.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಹಾಲಿವುಡ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅವರ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.

ಕನ್ನಡದ ಕಲಾವಿದನಾಗಿ ಹುಟ್ಟಿದ ಸುದೀಪ್ ತಮಿಳು ಮತ್ತು ತೆಲುಗಿನಲ್ಲಿ ಅಬ್ಬರಿಸಿ, ಬಾಲಿವುಡ್ ನಲ್ಲಿ ಮಿಂಚಿ ಈಗ ಮೊದಲ ಬಾರಿಗೆ ಹಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಇದು ಸಹಜವಾಗಿ ಸಿನಿ ಪ್ರೇಕ್ಷಕರಿಗೆ ಖುಷಿ ಕೊಡುತ್ತೆ.

ಆದ್ರೆ, ಈ ಚಿತ್ರಕ್ಕೆ ಫೋಟೋಶೂಟ್ ಮಾಡಿದ ಛಾಯಾಗ್ರಾಹಕ ಕೃಷ್ಣ ಕಾರ್ತಿಕ್ ಅವರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ......

ಅಪರೂಪದ ಕ್ಷಣ

ಸುದೀಪ್ ಅವರ ಹಾಲಿವುಡ್ ಚಿತ್ರಕ್ಕೆ ಫೋಟೋಶೂಟ್ ಮಾಡಿದ್ದು ಅಪರೂಪದ ಕ್ಷಣ. ದಿಢೀರ್ ಎಂದು ಫೋಟೋಶೂಟ್ ಮಾಡುವ ಅವಕಾಶ ಸಿಕ್ಕಿತು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಹಾಲಿವುಡ್ ಸಿನಿಮಾ 'ರೈಸನ್'ನಲ್ಲಿ ಸುದೀಪ್ ಕಂಗೊಳಿಸುವುದು ಹೀಗೆ..!

ಇದು ಮರೆಯಲಾಗದ ಘಟನೆ

''ಸುದೀಪ್ ಅವರು ಬಹಳ ತಾಳ್ಮೆಯಿಂದ ಸಹಕರಿಸಿದರು. ಶೂಟ್ ಉದ್ದಕ್ಕು ಸಿನಿಮಾರಂಗದ ಬಗ್ಗೆ ನಮ್ಮೊಂದಿಗೆ ಮಾತನಾಡುತ್ತಿದ್ದರು. ಅವರ ಜತೆ ಸಂವಾದ ನಡಸಿದ್ದು ಮರೆಯಲಾಗದ ಘಟನೆ'' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಫಸ್ಟ್ ಲುಕ್ ಜೊತೆಗೆ ಕಿಚ್ಚನ ಹಾಲಿವುಡ್ ಚಿತ್ರದ ಸೌಂಡ್ ಟ್ಯ್ರಾಕ್ ರಿಲೀಸ್

ಕಾರ್ತಿಕ್ ಗೆ ಧನ್ಯವಾದ ಹೇಳಿದ ಕಿಚ್ಚ

ಛಾಯಾಗ್ರಾಹಕ ಕೃಷ್ಣ ಕಾರ್ತಿಕ್ ಅವರ ಮಾತುಗಳಿಗೆ ಕಿಚ್ಚ ಸುದೀಪ್ ಅವರು ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.'' ನಿಮ್ಮ ಜೊತೆ ಕೆಲಸ ಮಾಡಿದ್ದು ಖುಚಿ ನೀಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ಹಾಲಿವುಡ್ ಸಿನಿಮಾ ಶೂಟಿಂಗ್ ಯಾವಾಗ?

ಆಸ್ಟ್ರೇಲಿಯಾದ ಎಡ್ಡಿ ಆರ್ಯ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಸುದೀಪ್ ಕಾಮಾಂಡೋ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ ಅಂತೆ.

ಸುದೀಪ್ ಮನೆಗೆ ಭೇಟಿ ನೀಡಿದ ಹಾಲಿವುಡ್ ನಿರ್ದೇಶಕ.!

English summary
Photographer Krishna Karthik speak about Kiccha Sudeep. ಸುದೀಪ್ ಅವರ ಹಾಲಿವುಡ್ ಚಿತ್ರಕ್ಕೆ ಫೋಟೋಶೂಟ್ ಮಾಡಿದ ಛಾಯಾಗ್ರಾಹಕ ಕೃಷ್ಣ ಕಾರ್ತಿಕ್ ಸಂತಸ ವ್ಯಕ್ತಪಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada