For Quick Alerts
ALLOW NOTIFICATIONS  
For Daily Alerts

  ಬಿಕಿನಿ, ಬೀಚ್ ಎಂದರೆ ಬೆಚ್ಚದ ಬೆಡಗಿಯರು

  By ಜೇಮ್ಸ್ ಮಾರ್ಟಿನ್
  |

  ಐಟಂ ಹಾಡಿನಷ್ಟೇ ಬಿಕಿನಿ ಸನ್ನಿವೇಶಗಳಿಗೂ ಬೇಡಿಕೆ ಇರುವುದರಿಂದಲೇ ಬೆಡಗಿಯರು ಕಡಲ ಕಿನಾರೆಯಲ್ಲಿ ಒದ್ದೆ ಮುದ್ದೆ ಬಟ್ಟೆ ತೊಟ್ಟು ಕುಣಿಯರು ಹಾತೊರೆಯುತ್ತಾರೆ. ಬಣ್ಣಬಣ್ಣದ ಬಿಕಿನಿಗಳೊಂದಿಗೆ ತಾರೆಯರನ್ನು ತೋರಿಸುವ ಇಂದಿನ ಜಮಾನದಲ್ಲಿ ಸಾಗರದ ಅಲೆಗಳ ನಡುವೆ ನಡೆದು ಬರುವ ಸಪೂರ ನಡುವಿನ ಬೆಡಗಿಯರು ಒಟ್ಟು ಮಾಡಿ ಇಲ್ಲಿ ನೀಡಿದ್ದೇವೆ.

  ಹಿಂದಿ ಚಿತ್ರರಂಗದಲ್ಲಿ ನೂತನ್ ಎಂಬ ತಾರೆ ಮೊದಲು ಈಜುಡುಗೆಯಲ್ಲಿ ಚಿತ್ರರಸಿಕರನ್ನು ಐವತ್ತರ ದಶಕದಲ್ಲೇ ಬೆವರುವಂತೆ ಮಾಡಿದ್ದರು. ಅಲ್ಲಿಂದ ಮುಂದೆ ದಕ್ಷಿಣ ಭಾರತದ ಚಿತ್ರರಂಗಕ್ಕೂ ಸ್ವಲ್ಪ ಮಡಿವಂತಿಕೆ ಬಿಟ್ಟು ಸಮುದ್ರದಲ್ಲಿ ಪ್ರಣಯ ಗೀತೆ ಹಾಡಿಸಿ ಟೂ ಪೀಸ್ ಗಳಲ್ಲಿ ನಾಯಕಿಯರು ಕುಣಿಸತೊಡಗಿತು.

  ಟಾಲಿವುಡ್ ನ ವಿಷಯಕ್ಕೆ ಬಂದರೆ ಸಮುದ್ರ ತೀರದಲ್ಲಿ ನಾಯಕ ನಾಯಕಿ ಪ್ರಣಯ ಗೀತೆ ಹಾಡುವುದು ಸಿನಿರಸಿಕರ ಪಾಲಿನ ಅಮೃತಘಳಿಗೆ ಎನ್ನಬಹುದು. ಅನುಷ್ಕಾ ಶೆಟ್ಟಿ, ಕಾಜಲ್ ಅಗರವಾಲ್, ತಾಪ್ಸಿ ಪನ್ನು, ನಯನತಾರಾ, ಇಲಿಯಾನಾ ಡಿಕ್ರೂಜ್, ತ್ರೀಶಾ ಕೃಷ್ಣನ್, ತಮನ್ನಾ ಭಾಟಿಯಾ, ಪ್ರಿಯಮಣಿ, ಶ್ರೀಯಾ ಸರನ್, ಸಂಜನಾ, ಹಂಸ ನಂದಿ ಸೇರಿದಂತೆ ಅನೇಕ ನಾಯಕಿಯರು 'ಬೀಚ್ ಬೇಬ್' ಗಳಾಗಿ ಕಾಲಕ್ಕೆ ತಕ್ಕಂತೆ ಪರಿವರ್ತನೆಗೊಂಡವರೇ. ತುಂಡುಡುಗೆಯಲ್ಲಿ ರಸಿಕರ ಹೃದಯಕ್ಕೆ ಕನ್ನ ಹಾಕಿದ ತೆಲುಗು ಚಿತ್ರದ ನಾಯಕಿಯರು ಹಾಗೂ ಚಿತ್ರಗಳ ವಿವರ ಇಲ್ಲಿದೆ ನೋಡಿ ಆನಂದಿಸಿ..

  ಅನುಷ್ಕಾ ಶೆಟ್ಟಿ

  ಟಾಲಿವುಡ್ ನ ಟಾಪ್ ಹಾಟ್ ಬೆಡಗಿಯಾಗಿರುವ ಬೆಂಗಳೂರು ಮೂಲದ ಬೆಡಗಿ ಅನುಷ್ಕಾ ಶೆಟ್ಟಿ ಅನೇಕ ಚಿತ್ರಗಳಲ್ಲಿ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಮಂಚು ಮನೋಜ್ ಜತೆಯಲ್ಲಿ ಅಸ್ತ್ರಂ ಚಿತ್ರದಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದು ಬಿಟ್ಟರೆ, ರೆಂಡು ಚಿತ್ರದಲ್ಲಿ ಆರ್ ಮಾಧವನ್ ಜತೆ ಕಡಲಿನಲ್ಲಿ ಕುಣಿದಾಡಿದ್ದು ಹಾಟ್ ವಿಡಿಯೋ ಎನಿಸಿಕೊಂಡಿದೆ.

  ಕಾಜಲ್ ಅಗರವಾಲ್

  ಟಾಲಿವುಡ್ ನ ಟಾಪ್ ನಾಯಕಿಯರಿಗೆ ಟಾಂಗ್ ನೀಡುತ್ತಿರುವ ಕಾಜಲ್ ಅಗರವಾಲ್ ತುಂಡು ಬಟ್ಟೆ ತೊಡಲು ಎಂದಿಗೂ ಮುಜುಗರ ವ್ಯಕ್ತಪಡಿಸಿಲ್ಲ. ಅನುಷ್ಕಾ ರಂತೆ ಉತ್ತಮ ಅಂಗ ಸೌಷ್ಟವ ಹೊಂದಿರುವ ಕಾಜಲ್, ಮಹೇಶ್ ಬಾಬು ಜತೆ ಬಿಸಿನೆಸ್ ಮ್ಯಾನ್ ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು.

  ತಮನ್ನಾ ಭಾಟಿಯಾ

  ಸಪೂರ ಸೊಂಟದ ಸುಂದರಿ ತಮನ್ನಾ ಭಾಟಿಯಾ ತನ್ನ ಸೊಂಟ ಬಳುಕಿಸುವಲ್ಲಿ ಎಂದಿಗೂ ಒಂದು ಹೆಜ್ಜೆ ಮುಂದೆ. ರೆಬೆಲ್ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಜತೆ ಕುಣಿದಿದ್ದು ಸಕತ್ ಹಾಟ್ ಎನಿಸಿದೆ.

  ಇಲಿಯಾನಾ ಡಿಕ್ರೂಜ್

  ಗೋವಾದ ಸುಂದರಿ ಇಲಿಯಾನಾ ಕೂಡಾ ತನ್ನ ಮೈಮಾಟ ಪ್ರದರ್ಶನದಲ್ಲಿ ಹಿಂದೆ ಬಿದ್ದಿಲ್ಲ. ಕಿಕ್ ಚಿತ್ರದಲ್ಲಿ ಯೋಗ ಮಾಡುವ ದೃಶ್ಯಗಳಿರಬಹುದು ಅಥವಾ ಸಲಿಂ ಚಿತ್ರದ ಹಾಡುಗಳಿರಬಹುದು.

  ವಿಷ್ಣು ಮಂಚು ಜತೆ ಸಲಿಂ ಚಿತ್ರದಲ್ಲಿ ಇಲಿಯಾನಾ ಕಾಣಿಸಿಕೊಂಡ ರೀತಿ ರಸಿಕರ ಎದೆಗೆ ಪ್ರಣಯಬಾಣ ಬಿಟ್ಟಂತಾಗಿದೆ.

  ಸಂಜನಾ

  ಬೆಂಗಳೂರು ಹುಡುಗಿ ಸಂಜನಾ 'ಜಗನ್ ನಿರ್ದೋಷಿ' ಚಿತ್ರದಲ್ಲಿ ನಟ ಶಿವ ಜತೆಯಲ್ಲಿ ಶ್ವೇತ ವಸ್ತ್ರಧಾರಿಯಾಗಿ ಸ್ವಿಮ್ ಸೂಟ್ ಧರಿಸಿ ಕುಣಿದಾಡಿದ್ದು ಹಾಟ್ ಹಾಟ್ ಆಗಿದೆ.

  ತ್ರೀಷಾ ಕೃಷ್ಣನ್

  ಸಪೂರ ಮೈಕಟ್ಟು ಹೊಂದಿರುವ ಚೆನ್ನೈ ಸುಂದರಿ ತ್ರಿಶಾ ಕೃಷ್ಣನ್ ಅಗತ್ಯ ಬಿದ್ದಾಗ ಮಾತ್ರ ತುಂಡುಡುಗೆ ತೊಟ್ಟು ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ತಮಿಳಿನ ತಿರುಪ್ಪಾಚಿ ಚಿತ್ರದ ತೆಲುಗು ಅವತರಣಿಕೆಯಲ್ಲಿ ತ್ರಿಶಾ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.

  ನಯನತಾರಾ

  ಬೋಲ್ಡ್ ಪಾತ್ರಗಳಲ್ಲಿ ನಟಿಸಲಾರೆ ಎಂದು ಕೆಲವೊಮ್ಮೆ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದ ನಯನತಾರಾ, ಸ್ವಿಮ್ ಸೂಟ್, ಟೂ ಪೀಸ್ ಗಳಲ್ಲಿ ಕಾಣಿಸಿಕೊಂಡಿದ್ದಿದೆ. ಬಿಲ್ಲಾ ರಿಮೇಕ್ ಚಿತ್ರ ಅಲ್ಲದೆ ವಿಜಯ್ ನಟನೆಯ ವಿಲ್ಲು ಚಿತ್ರದಲ್ಲೂ ಮಲ್ಲು ಬೆಡಗಿ ನಯನತಾರಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

  ಹಂಸಿಕಾ ಮೋತ್ವಾನಿ

  ದೇಶಮುದುರು ಚಿತ್ರದಲ್ಲಿ ತೆಳ್ಳಗಿದ್ದ ಹಂಸಿಕಾ ಮೋತ್ವಾನಿ ರೆಡ್ ಹಾಟ್ ದಿರಿಸಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಹಂಸಿಕಾ ತುಂಡುಡುಗೆ ತೊಡುವ ಬಗ್ಗೆ ಮನಸ್ಸು ಮಾಡುತ್ತಿಲ್ಲ.

  ತಾಪಸಿ ಪನ್ನು

  ದರವು ಚಿತ್ರದಲ್ಲಿ ಕಡಲ ತಟದಲ್ಲಿ ಹಾಡುತ್ತಾ ಓಡಿ ಬರುವ ದೃಶ್ಯ ಪಡ್ಡೆಗಳ ನಿದ್ದೆಗೆದಿಸಿತ್ತು. ರವಿ ತೇಜಾ ಚಿತ್ರದಲ್ಲಿ ತಾಪಸಿ ಗ್ಲಾಮರ್ ಟಚ್ ನೀಡಿದ್ದರು

  ಪ್ರಿಯಾಮಣಿ

  ಪಾತ್ರಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುವ ಬೆಂಗಳೂರು ಮೂಲದ ಪ್ರಿಯಾಮಣಿ ಕೂಡಾ ಬಿಕಿನಿ ತೊಡುವುದರಲ್ಲಿ ಹಿಂದೆ ಬಿದ್ದಿಲ್ಲ. ಮಹಾರಾಣಿ ಚಿತ್ರದಲ್ಲಿ ಕೆಂಪು ಹಾಗೂ ಕಪ್ಪು ದಿರಿಸು ತೊಟ್ಟು ಅಂಗಾಂಗ ಪ್ರದರ್ಶಿಸಿ ಕಿಚ್ಚು ಹಚ್ಚಿದ್ದರು.

  ಶ್ರಿಯಾ ಸರನ್

  ದಕ್ಷಿಣ ಭಾರತದ ಬೋಲ್ಡ್ ನಟಿ ಎಂದೇ ಖ್ಯಾತಿ ಗಳಿಸಿರುವ ಶ್ರೀಯಾ ಸರನ್ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಮೊದಲಿಗರು. ರವಿ ತೇಜ ಅವರ ಡಾನ್ ಸೀನು ಚಿತ್ರದಲ್ಲಿ ಶ್ರಿಯಾ ಸಕತ್ ಹಾಟ್ ಲುಕ್ ನಲ್ಲಿದ್ದರು.

  ನಮಿತಾ

  ಹಾಟ್ ನಟಿಯಾಗಿ ಬೆಳೆದ ಸ್ಥೂಲ ಶರೀರದ ನಮಿತಾ ಇದ್ದರು ಮೊನಗಾಲ್ಲು ಚಿತ್ರದ ಬೀಚ್ ಸಾಂಗ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

  ಹಂಸ ನಂದಿನಿ

  ಅಧಿನೇತ ಚಿತ್ರದ ಅರ್ಜುನ... ಹಾಡಿನಲ್ಲಿ ಹಂಸ ನಂದಿನಿ ಹಾಗೂ ಜಗಪತಿ ಬಾಬು ರೋಮ್ಯಾನ್ಸ್ ಸಕತ್ ಹಾಟ್ ಆಗಿ ಚಿತ್ರಿತವಾಗಿದೆ.

  ಶ್ರದ್ಧಾ ದಾಸ್

  ಮೊಗಡು ಚಿತ್ರದಲ್ಲಿ ಗೋಪಿ ಚಂದ್ ಜತೆಯಲ್ಲಿ ಶ್ರದ್ಧಾ ದಾಸ್ ಸೆಕ್ಸಿ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ.

  ಮೇಘನಾ ನಾಯ್ಡು

  ಅನೇಕ ಚಿತ್ರಗಳಲ್ಲಿ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಬೆಡಗಿ ಮೇಘನಾಗೆ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವುದು ಕಷ್ಟವೇನಲ್ಲ.

  ವಿಮಲಾ ರಾಮನ್

  ಗಾಯಂ 2 ಚಿತ್ರದಲ್ಲಿ ಮೈಚಳಿ ಬಿಟ್ಟು ನಟಿಸಿದ ವಿಮಲಾ ರಾಮನ್ ಹಾಟ್ ಉಡುಗೆಗಳಲ್ಲಿ ಕಾಣಿಸಿಕೊಂಡು ಅನೇಕರ ಹುಬ್ಬೇರಿಸಿದ್ದರು.

  English summary
  The beach songs will usually be romantic tracks featuring scantly-clad heroes and heroines taking a dip in a sea and expressing their passionate feelings for each other. We bring you the photos of bikini-clad Telugu actresses sizzling on various beaches

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more