For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಲುಕ್ ನಲ್ಲಿ ಯಶ್

  By Suneetha
  |

  ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಹೊಸ ಚಿತ್ರ 'ಮಾಸ್ಟರ್ ಪೀಸ್' ದಿನದಿಂದ ದಿನಕ್ಕೆ ಯಶ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿಸುತ್ತಿದೆ. ನಿರ್ದೇಶಕ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಶಾನ್ವಿ ಶ್ರೀವಾಸ್ತವ್ ಯಶ್ ಜೊತೆ ಡ್ಯುಯೆಟ್ ಹಾಡಿದ್ದಾರೆ.

  ರಾಕಿಂಗ್ ಸ್ಟಾರ್ ಯಶ್ ಅವರು 'ಮಾಸ್ಟರ್ ಪೀಸ್' ಚಿತ್ರದಲ್ಲಿ ಡಬ್ಬಲ್ ರೋಲ್ ಮಾಡುತ್ತಾರೆ, ಅದೂ ಖಳನಾಯಕನ ರೋಲ್ ನಲ್ಲಿ ಮಿಂಚಲಿದ್ದಾರೆ ಎಂದು ಈ ಮೊದಲು ಸುದ್ದಿಯಾಗಿತ್ತು.

  ಆದರೆ ಅದರೊಟ್ಟಿಗೆ ನಿರ್ದೇಶಕ ಮಂಜು ಅವರು ವಿಶೇಷವಾಗಿ ಯಶ್ ಅವರ ಹೊಚ್ಚ ಹೊಸ ಪೋಸ್ಟರ್ ಒಂದನ್ನು ರಿಲೀಸ್ ಮಾಡುವ ಮೂಲಕ ಯಶ್ ಅವರ ಇನ್ನೊಂದು ಪಾತ್ರದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾರೆ.[ಯಶ್ ಹುಟ್ಟುಹಬ್ಬಕ್ಕೆ 'ಮಾಸ್ಟರ್ ಪೀಸ್' ಗಿಫ್ಟ್]

  ನಿನ್ನೆ(ಸೆಪ್ಟೆಂಬರ್ 28) ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನುಮದಿನದ ಅಂಗವಾಗಿ ಚಿತ್ರತಂಡ, ಯಶ್ ಅವರು ಭಗತ್ ಸಿಂಗ್ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ಯಶ್ ಅವರು ರಾಯಲ್ ಎನ್ ಫೀಲ್ಡ್ ಏರಿ ಬರುತ್ತಿರುವ ಖಡಕ್ ಹಾಗೂ ಸಖತ್ ಸ್ಟೈಲೀಷ್ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

  ಈ ಮೊದಲು ಕನ್ನಡ ಫಿಲ್ಮಿಬೀಟಲ್ಲಿ ನಾವು ನಿಮಗೆ ತಿಳಿಸಿದಂತೆ 'ಮಾಸ್ಟರ್ ಪೀಸ್' ಚಿತ್ರದ ಪೋಸ್ಟರ್, ಟೀಸರ್ ನೋಡುತ್ತಿದ್ದರೆ ಇದೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಸಿನಿಮಾದಂತೆ ಕಂಡು ಬರುತ್ತಿದೆಯಾದರೂ ಚಿತ್ರದ ಬಗ್ಗೆ ನಿರ್ದೇಶಕರು ಇನ್ನು ಗುಟ್ಟು ಬಿಟ್ಟುಕೊಟ್ಟಿಲ್ಲ.

  ಒಟ್ನಲ್ಲಿ ಬ್ಲಾಕ್ ಬಸ್ಟರ್ ಹಿಟ್ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ಚಿತ್ರದ ನಂತರ ಯಶ್ ಅವರು 'ಮಾಸ್ಟರ್ ಪೀಸ್' ಮೂಲಕ ಮತ್ತೆ ಗಾಂಧಿನಗರದಲ್ಲಿ ಸೌಂಡ್ ಮಾಡಲು ತಯಾರಾಗಿದ್ದು, ಅಭಿಮಾನಿಗಳಿಗೆ ಅದ್ಯಾವ ರೀತಿಯಲ್ಲಿ ಮೋಡಿ ಮಾಡಲಿದ್ದಾರೆ ಎಂದು ಚಿತ್ರ ತೆರೆಗೆ ಬರುವವರೆಗೂ ಕಾಯಬೇಕು.[ಯಶ್ 'ಮಾಸ್ಟರ್ ಪೀಸ್' ಶೂಟಿಂಗ್ ನಿಂತೋಯ್ತಾ?]

  ಇನ್ನುಳಿದಂತೆ ಚಿತ್ರದಲ್ಲಿ ನಟಿ ಸುಹಾಸಿನಿ ಅವರು ಯಶ್ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಮೂಲಗಳ ಪ್ರಕಾರ ಸದ್ಯಕ್ಕೆ ಯಶಸ್ಸಿನ ಸರದಾರ ರಾಕಿಂಗ್ ಸ್ಟಾರ್ ಯಶ್ ಅವರಿಗೆ 'ಮಾಸ್ಟರ್ ಪೀಸ್' ಕೂಡ ದೊಡ್ಡ ಮಟ್ಟಿನ ಬ್ರೇಕ್ ನೀಡಲಿದೆ ಎಂದು ಗಾಂಧಿನಗರದಲ್ಲಿ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿವೆ.

  English summary
  Upcoming movie Masterpiece is raising huge expectations among fans, day by day. Directed by Manju Mandavya, Rocking Star Yash and Shanvi Srivastava are playing the lead characters in the movie. To add more to Yash's character, filmmakers have released a new poster of Yash which portrays him as freedom fighter Bhagat Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X