ಅರಿಶಿನದಲ್ಲಿ ಮಿಂದೆದ್ದ ಧನಂಜಯ್- ಧನ್ಯತಾ ಜೋಡಿ; ಇಲ್ಲಿದೆ ಫೋಟೊಸ್
ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ಜೋಡಿ ಮದುವೆ ಸಂಭ್ರಮ ಶುರುವಾಗಿದೆ. ಭಾನುವಾರ ಮೈಸೂರಿನಲ್ಲಿ ಧನ್ಯ ಕೊರಳಿಗೆ ಧನು ಮಾಂಗಲ್ಯಧಾರಣೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಮುದುವೆ ಶಾಸ್ತ್ರಗಳು ಶುರುವಾಗಿದೆ. ಶಾಸ್ತ್ರೋಕ್ತವಾಗಿ ಅಷ್ಟೇ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ. ಇದೀಗ ಅರಿಶಿನದಲ್ಲಿ ಜೋಡಿ ಮಿಂದೆದ್ದಿದೆ.
ನಂಜನಗೂಡು ಬಳಿಯ ರಿವರ್ ರೇಂಜ್ ರೆಸಾರ್ಟ್‌ನಲ್ಲಿ ಅರಿಶಿನ ಶಾಸ್ತ್ರ ನಡೆದಿದೆ. ಧನಂಜಯ್ ಹಾಗೂ ಧನ್ಯತಾ ಸ್ನೇಹಿತರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಮಾಜಿ ಸಚಿವರಾದ ಬಿ. ಸಿ ಪಾಟೀಲ್, ಜರ್ಮನ್ ಡೈರೆಕ್ಟರ್ ಕ್ಕ್ರಿಸ್ಟೆನ್ ಸ್ಟುಕೆಲ್, ನಟಿ ಸಪ್ತಮಿ ಗೌಡ ಕೂಡ ಈ ವೇಳೆ ಹಾಜರಿದಿದ್ದರು. ಮೈಸೂರಿನ ವಸ್ತುಪ್ರದರ್ಶನ ಮೈದಾನ, ಅಂಬಾ ವಿಲಾಸ ಅರಮನೆ ಮುಂಭಾಗದಲ್ಲಿ ಜೋಡಿಯ ಮದುವೆಗೆ ಮಂಟಪ ಸಿದ್ಧವಾಗುತ್ತಿದೆ. ಧನಂಜಯ್ ಮುಂದೆ ನಿಂತು ಎಲ್ಲಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.

ಧನು ಆಪ್ತ ಸ್ನೇಹಿತರಾದ ಪೂರ್ಣಚಂದ್ರ ಮೈಸೂರು, ನಾಗಭೂಷಣ್ ಸೇರಿದಂತೆ ಆಪ್ತರೆಲ್ಲಾ ಜೊತೆಗೆ ನಿಂತಿದ್ದಾರೆ. ಮದುವೆ ಕೆಲಸಗಳಲ್ಲಿ ಓಡಾಡುತ್ತಿದ್ದಾರೆ. ನಾಳೆ(ಫೆಬ್ರಚರಿ 15) ಸಂಜೆ 6 ಗಂಟೆಗೆ ಮದುವೆ ಆರತಕ್ಷತೆ ಕಾರ್ಯಕ್ರಮ ಆರಂಭವಾಗಲಿದೆ. ಭಾನುವಾರ ಬೆಳಗ್ಗೆ 8.20ರಿಂದ 10 ಗಂಟೆಗೆ ಶುಭ ಮುಹೂರ್ತದಲ್ಲಿ ಮದುವೆ ನೆರವೇರಲಿದೆ. ತನ್ನ ಅಭಿಮಾನಿಯಾಗಿ ಪರಿಚಿತವಾಗಿದ್ದ ಹುಡುಗಿಯನ್ನೇ ಧನಂಜಯ್ ಪ್ರೀತಿಸಿ ಮದುವೆ ಆಗುತ್ತಿದ್ದಾರೆ.
ಧನು ಕೈ ಹಿಡಿಯಲಿರುವ ಹುಡುಗಿ ಧನ್ಯತಾ ವೃತ್ತಿಯಲ್ಲಿ ವೈದ್ಯೆ. ಕೆಲ ತಿಂಗಳಿಂದ ಪ್ರೀತಿಸುತ್ತಿದ್ದ ಜೋಡಿ ಇದೀಗ ಪೋಷಕರ ಒಪ್ಪಿಗೆ ಪಡೆದು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ನಿರ್ಮಾಪಕನಾಗಿ ಗೀತ ಸಾಹಿತಿಯಾಗಿ ಗಮನ ಸೆಳೆದಿರುವ ಧನಂಜಯ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಎರಡು ತಿಂಗಳಿನಿಂದ ರಾಜ್ಯದ ಹಲವರನ್ನು ಭೇಟಿ ಮಾಡಿ ಡಾಲಿ ಮದುವೆಗೆ ಆಮಂತ್ರಣ ನೀಡಿದ್ದಾರೆ.

ರಾಜಕೀಯ ಮುಖಂಡರು, ಸಾಮೀಜಿಗಳು, ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳನ್ನು ಧನು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ. ಕನ್ನಡ ಸಿನಿಮಾ ತಾರೆಯರು ಮಾತ್ರವಲ್ಲದೇ ತೆಲುಗಿನ ಚಿರಂಜೀವಿ, ಅಲ್ಲು ಅರ್ಜುನ್‌ಗೂ ಧನು ಲಗ್ನಪತ್ರಿಕೆ ಕೊಟ್ಟು ಮದುವೆಗೆ ಕರೆದಿದ್ದಾರೆ.
ಆಕ್ಟರ್, ಆಕ್ಟರ್ ಜೋಡಿ ಮದುವೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಮೈಸೂರಿನಲ್ಲಿ ನಡೆಯುವ ಧನಂನಯ್ ಮದುವೆ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ.
ಶಿವರಾಜ್‌ಕುಮಾರ್, ಯಶ್, ಸುದೀಪ್, ಉಪೇಂದ್ರ, ರಮ್ಯಾ, ರಚಿತಾ ರಾಮ್ ಸೇರಿದಂತೆ ಕನ್ನಡ ಸಿನಿಮಾ ತಾರೆಯರೆಲ್ಲಾ ಧನು-ಧನ್ಯಾ ಮದುವೆ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ.


Click it and Unblock the Notifications











