ಮೆಲ್ಬರ್ನ್ ಭಾರತೀಯ ಚಿತ್ರೋತ್ಸವ: ಪ್ರಶಸ್ತಿ ಮೇಲೆ ಕಣ್ಣಿಟ್ಟ 'ಪಿಂಕಿ ಎಲ್ಲಿ?'
ಮೆಲ್ಬೋರ್ನ್ ಭಾರತೀಯ ಚಲನಚಿತ್ರೋತ್ಸವ ಆಗಸ್ಟ್ 12 ರಂದು ಆರಂಭವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮೆಲ್ಬೋರ್ನ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದ ಸಿನಿಮಾಗಳ ಅಂತಿಮ ನಾಮನಿರ್ದೇಶನ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ಈ ಚಿತ್ರೋತ್ಸವದಲ್ಲಿ ಕನ್ನಡದ 'ಪಿಂಕಿ ಎಲ್ಲಿ?' ಸಿನಿಮಾ ಎರಡು ವಿಭಾಗದಲ್ಲಿ ಸ್ಥಾನ ಪಡೆದಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಪರಿಣಾಮ 12ನೇ ಆವೃತ್ತಿಯ ಪ್ರಶಸ್ತಿ ಸಮಾರಂಭ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ನೆರವೇರಿಸಲು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ವಿಕ್ಟೋರಿಯಾ ಸರ್ಕಾರ ನಿರ್ಧರಿಸಿದೆ. ಬಾಲಿವುಡ್ ನಟಿ ರಿಚಾ ಚಡ್ಡಾ ಮತ್ತು ನಿರ್ದೇಶಕ ಒನಿರ್ ಈ ಚಿತ್ರೋತ್ಸವದಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ. ಆಗಸ್ಟ್ 12 ರಿಂದ 20ರವರೆಗೂ ನಡೆಯುವ ಈ ಚಿತ್ರೋತ್ಸವದಲ್ಲಿ 100ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣಲಿದೆ.
ಹಿಂದಿಯ ಲುಡೊ, ವಿದ್ಯಾ ಬಾಲನ್ ನಟಿಸಿದ್ದ ಶೆರ್ನಿ, ತಮಿಳು ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸೇರಿದಂತೆ ಹಲವು ಹಿಟ್ ಚಿತ್ರಗಳು ರೇಸ್‌ನಲ್ಲಿವೆ. ಕಳೆದ ಎರಡು ವರ್ಷದಲ್ಲಿ ಒಟಿಟಿ ವೇದಿಕೆಗಳು ಹೆಚ್ಚು ಗಮನ ಸೆಳೆದಿದ್ದು, ವಿಶೇಷವಾಗಿ ಪರಿಗಣಿಸಿ ವೆಬ್ ಸಿರೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಟ-ನಟಿಯರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.

ಮೆಲ್ಬೋರ್ನ್ ಭಾರತೀಯ ಚಲನಚಿತ್ರೋತ್ಸವ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿರುವ ಸಿನಿಮಾಗಳ ಪಟ್ಟಿ ಇಲ್ಲಿವೆ.
- ಅತ್ಯುತ್ತಮ ಸಿನಿಮಾ
ಕಾಯಟ್ಟಮ್ (ಮಲಯಾಳಂ) ಸನಲ್ ಕುಮಾರ್ ಸಸಿಧರನ್
ಲೂಟ್ ಕೇಸ್ (ಹಿಂದಿ) ರಾಜೇಶ್ ಕೃಷ್ಣನ್
ಲುಡೊ (ಹಿಂದಿ) ಅನುರಾಗ್ ಬಸು
ಶೆರ್ನಿ (ಹಿಂದಿ) ಅಮಿತ್ ಮಸೂರ್ಕರ್
ಸೂರರೈ ಪೊಟ್ರು (ತಮಿಳು) ಸುಧಾ ಕೊಂಗರಾ
ತಶೆರ್ ಘರ್ವ್ (ಬಂಗಾಳಿ) ಸುದೀಪ್ತೋ ರಾಯ್
- ಅತ್ಯುತ್ತಮ ಸ್ವತಂತ್ರ ಸಿನಿಮಾ
ಪಿಂಕಿ ಎಲ್ಲಿ? - ಪೃಥ್ವಿ ಕೋಣನೂರು
ಫೈರ್ ಇನ್ ದಿ ಮೌಂಟೇನ್ - ಅಜಿತ್ ಪಾಲ್ ಸಿಂಗ್
ಗಾಡ್ ಆನ್ ದಿ ಬಾಲ್ಕನಿ - ಬಿಸ್ವಜೀತ್ ಬೋರಾ
ಲೈಲಾ ಔರ್ ಸತ್ ಗೀತ್ - ಪುಷ್ಪೇಂದ್ರ ಸಿಂಗ್
ನಾಸಿರ್ - ಅರುಣ್ ಕಾರ್ತಿಕ್
ಸೇತುಮಾನ್ - ತಮಿಳ್
ಸ್ಥಲಪುರಾನ್ - ಅಕ್ಷಯ್ ಇಂದಿಕರ್
ದಿ ಗ್ರೇಟ್ ಇಂಡಿಯನ್ ಕಿಚನ್ - ಜಿಯೋ ಬೇಬಿ

- ಅತ್ಯುತ್ತಮ ನಿರ್ದೇಶಕ
ಪೃಥ್ವಿ ಕೋಣನೂರು - ಪಿಂಕಿ ಎಲ್ಲಿ?
ಅಜಿತ್ ಪಾಲ್ ಸಿಂಗ್ - ಫೈರ್ ಇನ್ ದಿ ಮೌಂಟೇನ್
ಅಕ್ಷಯ್ ಇಂದಿಕರ್ - ಸ್ಥಲಪುರಾನ್
ಅಮಿತ್ ಮಸೂರ್ಕರ್ - ಶೆರ್ನಿ
ಅನುರಾಗ್ ಬಸು - ಲುಡೊ
ಅರುಣ್ ಕಾರ್ತಿಕ್ - ನಾಸಿರ್
ಬಿಸ್ವಜೀತ್ ಬೋರಾ - ಗಾಡ್ ಆನ್ ದಿ ಬಾಲ್ಕನಿ
ಜಿಯೋ ಬೇಬಿ - ಗ್ರೇಟ್ ಇಂಡಿಯನ್ ಕಿಚನ್
ಸನಲ್ ಕುಮಾರ್ ಸಸಿಧರನ್ - ಕಾಯಟ್ಟಮ್
ಸುಧಾ ಕೊಂಗರಾ - ಸೂರರೈ ಪೊಟ್ರು
- ಅತ್ಯುತ್ತಮ ವೆಬ್ ಸಿರೀಸ್
ಮಿರ್ಜಾಪುರ ಸೀಸನ್ 2
ಮಿಸ್‌ಮ್ಯಾಚ್ಡ್
ಫ್ಯಾಮಿಲಿ ಮ್ಯಾನ್ ಸೀಸನ್ 2
ಬಂದಿಷ್ ಬ್ಯಾಂಡಿಟ್ಸ್
ಚುಡೇಲ್ಸ್
ಪಿಂಕಿ ಎಲ್ಲಿ? ಚಿತ್ರದ ಬಗ್ಗೆ....
ಕೆನಡಾದ ಒಟ್ಟಾವಾ ಇಂಡಿಯನ್ ಫಿಲಂ ಫೆಸ್ಟಿವಲ್ ಅವಾರ್ಡ್‌ನಲ್ಲಿ 'ಪಿಂಕಿ ಎಲ್ಲಿ?' ಚಿತ್ರ ಎರಡು ಪ್ರಶಸ್ತಿ ಪಡೆದಿತ್ತು. ನಿರ್ದೇಶಕ ಪೃಥ್ವಿ ಕೋಣನೂರು ಅವರಿಗೆ ಅತ್ಯುತ್ತಮ ಚಿತ್ರಕಥೆ ಹಾಗೂ ಅಕ್ಷತಾ ಪಾಂಡವಪುರಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿತ್ತು. ಇದಕ್ಕೂ ಮುಂಚೆ ನ್ಯೂಯಾರ್ಕ್‌ನ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿಯೂ 'ವೇರ್ ಈಸ್ ಪಿಂಕಿ' (ಪಿಂಕಿ ಎಲ್ಲಿ) ಚಿತ್ರಕ್ಕೆ ಎರಡು ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ಅಕ್ಷತಾಗೆ ಅವಾರ್ಡ್ ದೊರೆತಿತ್ತು.

'ವೇರ್ ಈಸ್ ಪಿಂಕಿ' ಚಿತ್ರವನ್ನು ಪೃಥ್ವಿ ಕೋಣನೂರು ನಿರ್ದೇಶಿಸಿದ್ದು ಅಕ್ಷತಾ ಪಾಂಡವಪುರ ಮತ್ತು ದೀಪಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಹಿಂದೆ ಪೃಥ್ವಿ ಕೋಣನೂರು 'ರೈಲ್ವೆ ಚಿಲ್ಡ್ರನ್' ಮತ್ತು 'ಅಲೆಗಳು' ಎಂಬ ಸಿನಿಮಾ ಮಾಡಿದ್ದರು.
ಇದು ನೈಜ ಘಟನೆಯನ್ನು ಆಧರಿಸಿ ಮಾಡಿರುವ ಚಿತ್ರವಾಗಿದ್ದು, 8 ತಿಂಗಳ ಮಗುವೊಂದು ಕಳೆದು ಹೋದಾಗ ಆ ಮಗುವಿನ ಸುತ್ತ ಬರುವ ಪಾತ್ರಗಳ ತಲ್ಲಣವನ್ನು ಸಿನಿಮಾ ಮಾಡಲಾಗಿದೆ. ಇದಕ್ಕೂ ಮುಂಚೆ 'ಪಿಂಕಿ ಎಲ್ಲಿ' ಸಿನಿಮಾ ಭಾರತದ ಕೋಲ್ಕತಾ, ಮುಂಬೈ (ಮಾಮಿ), ಕೇರಳ, ಜೈಪುರ್, ಪನೋರಮ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿತ್ತು.


Click it and Unblock the Notifications











