twitter
    For Quick Alerts
    ALLOW NOTIFICATIONS  
    For Daily Alerts

    ತಮಿಳ್ ರಾಕರ್ಸ್ ಮತ್ತೆ ಅಟ್ಟಹಾಸ: ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಆನ್ಲೈನ್ ಲೀಕ್

    |

    ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಜನೀಕಾಂತ್ ಅವರ 'ರೋಬೋ 2.0' ಸಿನಿಮಾವನ್ನು ಲೀಕ್ ಮಾಡುವುದಾಗಿ, ಹೊಸ ಸಿನಿಮಾಗಳಿಗೆ ವಿಲನ್ ಆಗಿರುವ 'ತಮಿಳ್ ರಾಕರ್ಸ್' ವೆಬ್ಸೈಟ್ ಬೆದರಿಕೆಯೊಡ್ಡಿತ್ತು.

    ಮುಂಜಾಗೃತಾ ಕ್ರಮವಾಗಿ ಚಿತ್ರತಂಡ ಮದರಾಸು ಹೈಕೋರ್ಟ್ ಮೊರೆಹೋಗಿ, ಯಾವುದೇ ವೆಬ್ಸೈಟ್ ನಲ್ಲಿ ಪ್ರಸಾರವಾಗದಂತೇ ನಿರ್ಬಂಧ ಹೇರಿತ್ತು. ಆದರೆ, ಇದ್ಯಾವುದನ್ನೂ ಕ್ಯಾರೇ ಮಾಡದ ತಮಿಳ್ ರಾಕರ್ಸ್ ಬಿಡುಗಡೆಯಾದ ದಿನವೇ, ಚಿತ್ರವನ್ನು ಲೀಕ್ ಮಾಡಿತ್ತು.

    ಕೋಟಿಗಟ್ಟಲೆ ಬಂಡವಾಳ ಸುರಿಯುವ ನಿರ್ಮಾಪಕರ ಮತ್ತು ಸಾವಿರಾರು ಜನರ ಪರಿಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡುತ್ತಿರುವ ಈ ಕುಖ್ಯಾತ ವಬ್ಸೈಟಿಗೆ ಸಾವಿರಾರು ಜನ ಫಾಲೋವರ್ಸ್ ಇರುವುದು ದುಃಖದ ವಿಚಾರ.

    2019ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ 'ವಾರ್'2019ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ 'ವಾರ್'

    ಈ ವೆಬ್ಸೈಟ್ ಈಗ, ಮತ್ತೊಂದು, ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾವನ್ನು ಲೀಕ್ ಮಾಡಿದ್ದು, ಸಿನಿಮಾವನ್ನು ತನ್ನ ವೆಬ್ಸೈಟಿನಲ್ಲಿ ಅಪ್ಲೋಡ್ ಮಾಡಿಕೊಂಡಿದೆ.

    ಪ್ರಭಾಸ್ ಅಭಿನಯದ 'ಸಾಹೋ' ಚಿತ್ರ ಬಿಡುಗಡೆಯಾದ ದಿನವೇ ಲೀಕ್

    ಪ್ರಭಾಸ್ ಅಭಿನಯದ 'ಸಾಹೋ' ಚಿತ್ರ ಬಿಡುಗಡೆಯಾದ ದಿನವೇ ಲೀಕ್

    ಸುಮಾರು 350 ಕೋಟಿಗೂ ಅಧಿಕ ಬಂಡವಾಡ ಹೂಡಿ, ತೆರೆಗೆ ಬಂದಿದ್ದ, ಪ್ರಭಾಸ್ ಅಭಿನಯದ 'ಸಾಹೋ' ಚಿತ್ರವನ್ನು ಬಿಡುಗಡೆಯಾದ ದಿನವೇ ಲೀಕ್ ಮಾಡಲಾಗಿತ್ತು. ಮೊದಲ ಶೋ ಪ್ರದರ್ಶನ ಮುಗಿಯುವಷ್ಟರಲ್ಲೇ ಸಾಹೋ ಲೀಕ್ ಆಗಿದೆ. ''ದೊಡ್ಡ ತೆರೆಯಲ್ಲಿ ಸಾಹೋ ಬರ್ತಿದೆ, ಪೈರಸಿಗೆ ಪ್ರೋತ್ಸಾಹ ಕೊಡಬೇಡಿ. ಚಿತ್ರಮಂದಿರಕ್ಕೆ ಬನ್ನಿ'' ಎಂದು ಚಿತ್ರತಂಡ ಮನವಿಯನ್ನೂ ಮಾಡಿತ್ತು.

    ಮುನ್ನೂರು ಕೋಟಿ ಕ್ಲಬ್ ಸೇರಿದ ವಾರ್ ಸಿನಿಮಾ

    ಮುನ್ನೂರು ಕೋಟಿ ಕ್ಲಬ್ ಸೇರಿದ ವಾರ್ ಸಿನಿಮಾ

    ಈಗ, ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಬಾಚುತ್ತಿರುವ, ಹೃತಿಕ್ ರೋಶನ್, ಟೈಗರ್ ಶ್ರಾಫ್ ಅಭಿನಯದ 'ವಾರ್' ಸಿನಿಮಾವನ್ನೂ, ಲೀಕ್ ಮಾಡಿ, ತಮಿಳ್ ರಾಕರ್ಸ್ ತಮ್ಮ ವೆಬ್ಸೈಟಿನಲ್ಲಿ ಅಪ್ಲೋಡ್ ಮಾಡಿದೆ. ಅಕ್ಟೋಬರ್ ಎರಡರಂದು ಬಿಡುಗಡೆಯಾದ ಈ ಸಿನಿಮಾ, ಮುನ್ನೂರು ಕೋಟಿ ಕ್ಲಬ್ ಸೇರಿತ್ತು.

    'ತಮಿಳ್ ರಾಕರ್ಸ್' ಅಟ್ಟಹಾಸಕ್ಕೆ 'ಸಾಹೋ' ಬಲಿ'ತಮಿಳ್ ರಾಕರ್ಸ್' ಅಟ್ಟಹಾಸಕ್ಕೆ 'ಸಾಹೋ' ಬಲಿ

    ಶಿವಣ್ಣ, ಸುದೀಪ್ ಅಭಿನಯದ ‘ದಿ ವಿಲನ್’

    ಶಿವಣ್ಣ, ಸುದೀಪ್ ಅಭಿನಯದ ‘ದಿ ವಿಲನ್’

    ಈ ತಮಿಳ್ ರಾಕರ್ಸ್ ಕಾಟ ಇತ್ತೀಚಿನ ದಿನಗಳಲ್ಲಿ ವಿಪರಿಮೀತವಾಗಿ ಚಿತ್ರೋದ್ಯಮಕ್ಕೆ ಕಾಡುತ್ತಿದೆ. ಕನ್ನಡದ ಬಿಗ್ ಬಜೆಟ್ ಚಿತ್ರ, ಶಿವಣ್ಣ, ಸುದೀಪ್ ಅಭಿನಯದ ‘ದಿ ವಿಲನ್' ಸಹ ಬಿಡುಗಡೆಯಾದ ಐವತ್ತು ದಿನಗಳಲ್ಲಿ ಇದರ ಎಚ್ ಡಿ ಪ್ರಿಂಟ್ ಸೋರಿಕೆಯಾಗಿತ್ತು.

    ಆನ್ಲೈನ್ ಲೀಕ್ ಆಗಿದ್ದ ಕೆಜಿಎಫ್

    ಆನ್ಲೈನ್ ಲೀಕ್ ಆಗಿದ್ದ ಕೆಜಿಎಫ್

    ಇನ್ನು ಕೆಜಿಎಫ್ ಸಿನಿಮಾ ಕೂಡಾ ಇದರ ಕಾಟಕ್ಕೆ ಗುರಿಯಾಗಿತ್ತು. ಈ ಚಿತ್ರದ ಹಿಂದಿ, ತೆಲುಗು ಮತ್ತು ತಮಿಳು ಅವತರಣಿಕೆಯನ್ನು ತಮಿಳ್ ರಾಕರ್ಸ್ ಅಪ್ಲೋಡ್ ಮಾಡಿತ್ತು. ಈ ಬಗ್ಗೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಬೇಸರ ವ್ಯಕ್ತಪಡಿಸಿದ್ದರು. ಪೈಲ್ವಾನ್, ಕುರುಕ್ಷೇತ್ರ ಸಿನಿಮಾಗಳೂ ಲೀಕ್ ಆಗಿದ್ದವು.

    ತಮಿಳ್ ರಾಕರ್ಸ್

    ತಮಿಳ್ ರಾಕರ್ಸ್

    ಒಂದು ಕಡೆ ಬ್ಲಾಕ್ ಆದರೆ, ಇನ್ನೊಂದು ಕಡೆ ತೆರೆಯುವಂತೆ ತಮ್ಮ ವೆಬ್ಸೈಟ್ ಅನ್ನು ತಾಂತ್ರಿಕವಾಗಿ ತಮಿಳ್ ರಾಕರ್ಸ್ ಅಪ್ ಗ್ರೇಡ್ ಮಾಡಿಕೊಂಡಿದೆ. ಕೆಲವೊಮ್ಮೆ, ಸಿನಿಮಾದ ಫೈನಲ್ ಎಡಿಟಿಂಗ್ ಹಂತದಲ್ಲೇ, ಚಿತ್ರವನ್ನು ಸೋರಿಕೆ ಮಾಡಿದ ಕುಖ್ಯಾತಿ ಈ ವೆಬ್ಸೈಟಿಗೆ ಸಲ್ಲುತ್ತದೆ.

    English summary
    Piracy Site Tamil Rockers Leaked Another Blockbuster Movie Of The Year, "War".
    Tuesday, October 22, 2019, 12:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X