ಕೋಮಲ್ ಕುಮಾರ್ ಚಿತ್ರಕ್ಕೆ ಕೈಲಾಶ್ ಖೇರ್ ಹಾಡು
ಹಾಸ್ಯ ನಟ ಕೋಮಲ್ ಕುಮಾರ್ ಅವರ ಮತ್ತೊಂದು ನಿರೀಕ್ಷಿತ ಚಿತ್ರ 'ಪುಂಗಿ ದಾಸ' ಚಿತ್ರಕ್ಕೆ ಕಳೆದ 25 ರಿಂದ ಇನ್ನೊವೇಟಿವ್ ಫಿಲಂ ಸಿಟಿ, ಫನ್ ವರ್ಲ್ಡ್, ನೆಲಮಂಗಲದ ರಸ್ತೆ, ಗುಟ್ಟಹಳ್ಳಿ ಸ್ಥಳಗಳಲ್ಲಿ ಮೂರು ಹಾಡುಗಳ ಚಿತ್ರೀಕರಣ ಮಾಡಲಾಗಿದೆ.
ಕೋಮಲ ಕುಮಾರ್ ಅವರು ಯಕ್ಷಗಾನ, ಕಥಕ್ಕಳಿ ವೇಷಭೂಷಣಗಳಲ್ಲಿ ಈ ಸಿನೆಮಾದ ಹಾಡುಗಳಿಗಾಗಿ ಕುಣಿದಿದ್ದಾರೆ. 150 ನೃತ್ಯಗಾರರ ಜೊತೆ ಕೋಮಲ್ ಕುಮಾರ್ ಅವರು ಕುಣಿದದ್ದು ಒಂದು ಕಡೆ ಆದರೆ, ಕೈಲಾಶ್ ಖೇರ್ ಹಾಡಿರುವ "ಹಾಜಾರೆ ಹಾಜಾರೆ... ಹಾಗೂ ಐ ಯಾಂ ಡೀಸೆಂಟ್ ಹುಡ್ಗ..." ಹಾಡಿನ ಚಿತ್ರೀಕರಣ ಸಹ ಮಾಡಲಾಗಿದೆ. ['ಸರಸಕೆ ಬಾರೆ ಸರಳ' ಹಾಡು ಸೂಪರ್ ಹಿಟ್]

ಮನೆಯಲ್ಲಿ ತಾತ ಅಸುನೀಗಿದ್ದಾನೆ. ಆದರೆ ಆತ ಸಾಲ ಕೊಟ್ಟಿರುವ ತಾತ ಹಾಗೂ ಪಡೆದಿರುವ ಘಾಟಿ ತಾತ. ಅದನ್ನು ಪಡೆಯಲು ಹ್ಯಾಗೆಲ್ಲ ಪುಂಗಿ ಊದಬೇಕಾಗಬಹುದು ಎಂಬುದು ಚಿತ್ರದ ತಿರುಳು. ಕೋಮಲ್ ಕುಮಾರ್ ಅವರಿಗೆ ಆಸ್ಮ ಎಂಬುವರು ನಾಯಕಿ. ಆರ್ ಎನ್ ಸುದರ್ಶನ್ ತಾತ, ಸಾಹುಕಾರ್ ಜಾನಕಿ ಅವರು ಅಜ್ಜಿ ಪಾತ್ರದಾರಿ.
ಬಿ ಸಿ ಪಾಟೀಲ್ ಅವರು '9-12' ಬಳಿಕ ಬಣ್ಣ ಹಚ್ಚುತ್ತಿದ್ದಾರೆ. ಆಶೀಷ್, ತಬ್ಲ ನಾಣಿ, ಕುರಿ ಪ್ರತಾಪ್, ಬುಲ್ಲೆಟ್ ಪ್ರಕಾಶ್, ಪದ್ಮಜಾ ರಾವ್, ರಾಜೇಂದ್ರ ಕಾರಂತ್ ಹಾಗೂ ಇನ್ನಿತರರು ಮುಖ್ಯ ಪಾತ್ರದಲ್ಲಿದ್ದಾರೆ. 'ಪುಂಗಿ ದಾಸ' ಚಿತ್ರಕ್ಕೆ ಸಂಗೀತ ಸಂಯೋಜನೆ ಫರ್ಹಾನ್ ರೋಶನ್ (ಈ ಹಿಂದೆ ಏಮಿಲ್ ಎಂದು ಪರಿಚಯ ಅದವ 'ನಂದ ಲವ್ಸ್ ನಂದಿತಾ' ಚಿತ್ರದ ಜಿಂಕೆಮರಿ ಹಾಡಿನ ಖ್ಯಾತಿ).
ಅರುಳ್ ಅವರ ಛಾಯಾಗ್ರಹಣವಿರುವ ಚಿತ್ರವನ್ನು ಎಸ್ ಎಸ್ ವಿ ಪ್ರೊಡಕ್ಷನ್ ಲಾಂಛನದಲ್ಲಿ ಸದಾಶಿವ ಅವರು ನಿರ್ಮಿಸುತ್ತಿದ್ದಾರೆ. ಬೆಂಗಳೂರಿನ ಸುತ್ತ ಮುತ್ತ, ರಾಜರಾಜೇಶ್ವರಿನಗರ, ತಾವರೆಕೇರೆ, ನೈಸ್ ರಸ್ತೆ, ಗಿರಿನಗರ ಹಾಗೂ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











