twitter
    For Quick Alerts
    ALLOW NOTIFICATIONS  
    For Daily Alerts

    ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ

    |

    ಭಾರತೀಯ ಸಂಗೀತ ಕ್ಷೇತ್ರಕ್ಕೆ ಕೆಎಸ್ ಚಿತ್ರಾ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ಘೋಷಿಸಿ ಗೌರವಿಸಿದೆ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಿದರೆ, ಕೆಎಸ್ ಚಿತ್ರಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ.

    ವಿಶೇಷ ಅಂದ್ರೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಕೆಎಸ್ ಚಿತ್ರಾ ಅವರು ಅನೇಕ ಹಾಡುಗಳಿಗೆ ಒಟ್ಟಿಗೆ ದನಿಗೂಡಿಸಿದ್ದಾರೆ. ಈ ಇಬ್ಬರಿಗೂ 72ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಭಾರತದ ಅತ್ಯುನ್ನತ ಗೌರವ ನೀಡಲಾಗಿದೆ.

    ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ

    ಕೆಎಸ್ ಚಿತ್ರ ಅವರು ಮೂಲತಃ ಸಂಗೀತ ಕುಟುಂಬದಿಂದ ಬಂದವರು. ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. 1979ರಲ್ಲಿ ಹಿನ್ನೆಲೆ ಗಾಯಕಿಯಾಗಿ ವೃತ್ತಿ ಆರಂಭಿಸಿದ ಚಿತ್ರ ಸುಮಾರು ನಾಲ್ಕು ದಶಕಗಳವರೆಗೂ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.

    Playback singer KS Chitra honoured with Padma Bhushan

    ಕೆಎಸ್ ಚಿತ್ರ ಅವರು ಇದುವರೆಗೂ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಬೆಂಗಾಳಿ, ತುಳು ಸೇರಿದಂತೆ ಇತರೆ ಪ್ರಮುಖ ಭಾಷೆಗಳಲ್ಲಿ ಸೇರಿ ಸುಮಾರು 25000 ಹಾಡುಗಳನ್ನು ಹಾಡಿದ್ದಾರೆ. ಮಲಯ್, ಲ್ಯಾಟಿನ್, ಅರೇಬಿಕ್, ಸಿಂಹಳೀಯ, ಇಂಗ್ಲಿಷ್ ಮತ್ತು ಫ್ರೆಂಚ್ ಮುಂತಾದ ವಿದೇಶಿ ಭಾಷೆಗಳಲ್ಲೂ ಚಿತ್ರ ಹಾಡಿದ್ದಾರೆ.

    ತಮ್ಮ ಅದ್ಭುತ ಗಾಯನಕ್ಕಾಗಿ ಇದುವರೆಗೂ ಏಂಟು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದು ಯಾವ ಮಹಿಳಾ ಗಾಯಕಿಯೂ ಮಾಡಿರದ ಸಾಧನೆ.

    ಕೆಎಸ್ ಚಿತ್ರ ಅವರನ್ನು ಉತ್ತರ ಭಾರತದ ಪಿಯಾ ಬಸಂತಿ ಎಂದು, ಆಂಧ್ರಪ್ರದೇಶದ ಮತ್ತು ತೆಲಂಗಾಣದಲ್ಲಿ ಸಂಗೀತ ಸರಸ್ವತಿ ಎಂದು ಹಾಗೂ ತಮಿಳಿನಲ್ಲಿ ಚಿನ್ನಾ ಕುಯಿಲ್ ಎಂದು ಕರೆಯುತ್ತಾರೆ.

    English summary
    Indian Playback singer KS Chitra has been chosen for Padma Bhushan, India’s third highest civilian award.
    Wednesday, January 27, 2021, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X