For Quick Alerts
  ALLOW NOTIFICATIONS  
  For Daily Alerts

  'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ನಿರ್ಮಾಪಕ ಆನಂದ್ ಅಪ್ಪುಗೋಳ ಆಸ್ತಿ ಹರಾಜು ಕೋರಿ ಅರ್ಜಿ

  By Avani Malnad
  |

  ವಂಚನೆ ಪ್ರಕರಣದಲ್ಲಿ ಸಿಲುಕಿರುವ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೋಳ ಮತ್ತು ಅವರ ಸಹವರ್ತಿಗಳಿಗೆ ಸೇರಿದ ಎಲ್ಲ 110 ಆಸ್ತಿಗಳನ್ನು ಹರಾಜು ಹಾಕುವಂತೆ ಕೋರಿ ಬೆಳಗಾವಿ ಸ್ಥಳೀಯ ಆಡಳಿತ ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

  ಸುಶಾಂತ್ ಮಾಡಿದ್ದ ವಾಟ್ಸಪ್ ಮೆಸೇಜ್ ತೋರಿಸಿದ ನಟಿ ಲಾರೆನ್ | Sushanth Singh Rajput | Lauren Gottlieb

  ಒಂದು ವೇಳೆ ಈ ಅರ್ಜಿಗೆ ನ್ಯಾಯಾಲಯ ಮಾನ್ಯತೆ ನೀಡಿದರೆ ಅಪ್ಪುಗೋಳ ಅವರಿಗೆ ಸೇರಿದ ಕೆಲವು ಐಷಾರಾಮಿ ಬಂಗಲೆಗಳು ಸೇರಿದಂತೆ ನೂರಾರು ಆಸ್ತಿಪಾಸ್ತಿಗಳನ್ನು ಹರಾಜು ಹಾಕಲಾಗುತ್ತದೆ.

  'ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಬಂಧನ!'ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಬಂಧನ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ನಾಗಣ್ಣ ನಿರ್ದೇಶನದ ಬಹುಕೋಟಿ ವೆಚ್ಚದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ನಿರ್ಮಿಸಿದ್ದ ಆನಂದ್ ಅಪ್ಪುಗೋಳ, ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷರೂ ಹೌದು. ಸೊಸೈಟಿಯಲ್ಲಿ ಅವ್ಯವಹಾರ ನಡೆಸಿರುವ ಅವರು ಸಾವಿರಾರು ಠೇವಣಿದಾರರಿಗೆ ಸುಮಾರು 250 ಕೋಟಿ ರೂ. ವಂಚಿಸಿದ್ದಾರೆ ಎಂಬ ಆರೋಪವಿದೆ. ಮುಂದೆ ಓದಿ...

  ಶಾಖೆಗಳನ್ನು ಮುಚ್ಚಿದ್ದ ಆನಂದ್

  ಶಾಖೆಗಳನ್ನು ಮುಚ್ಚಿದ್ದ ಆನಂದ್

  ಗ್ರಾಹಕರನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಅನೇಕ ದೂರುಗಳು ದಾಖಲಾಗಿವೆ. ಗ್ರಾಹಕರಿಗೆ ಅವರ ಹಣ ಮರಳಿಸದೇ ಇದ್ದಕ್ಕಿದ್ದಂತೆ ಬ್ಯಾಂಕ್‌ನ ಎಲ್ಲ ಶಾಖೆಗಳನ್ನೂ ಅವರು ಮುಚ್ಚಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಸೆರೆವಾಸವನ್ನೂ ಅನುಭವಿಸಿದ್ದಾರೆ.

  ಆಸ್ತಿ ಹರಾಜಿನಿಂದ ಹಣ ಸಂಗ್ರಹ

  ಆಸ್ತಿ ಹರಾಜಿನಿಂದ ಹಣ ಸಂಗ್ರಹ

  ಸೊಸೈಟಿಯ ಶಾಖೆಗಳನ್ನು ಮುಚ್ಚಿರುವುದರಿಂದ ಸಾವಿರಾರು ಠೇವಣಿದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಅವರ ಹಣವನ್ನು ಮರಳಿಸಲು ಸರ್ಕಾರ ಆಸ್ತಿ ಹರಾಜು ಪ್ರಕ್ರಿಯೆಗೆ ಮುಂದಾಗಿದೆ. ಆನಂದ್ ಅಪ್ಪುಗೋಳ ಮತ್ತು ಅವರ ಕುಟುಂಬದ ಇತರರಿಗೆ ಸೇರಿದ ಎಲ್ಲ 110 ಆಸ್ತಿಗಳನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಠೇವಣಿದಾರರಿಗೆ ನೀಡುವ ಸಲುವಾಗಿ ಬೆಳಗಾವಿ ಸಹಾಯಕ ಜಿಲ್ಲಾಧಿಕಾರಿ ಈ ಅರ್ಜಿ ಸಲ್ಲಿಸಿದ್ದಾರೆ.

  ದರ್ಶನ್ ಸಿನಿಮಾದ ನಿರ್ಮಾಪಕ ಆನಂದ್ ಅಪ್ಪುಗೋಳ ಮತ್ತೆ ಜೈಲಿಗೆ

  ಬೇರೆಯವರ ಒಡೆತನದಲ್ಲಿ ಆಸ್ತಿ

  ಬೇರೆಯವರ ಒಡೆತನದಲ್ಲಿ ಆಸ್ತಿ

  ಆನಂದ್ ಅಪ್ಪುಗೋಳ ಅವರ ಕನಿಷ್ಠ 90ರಷ್ಟು ಆಸ್ತಿಗಳು ಬೇರೆಯವರ ಒಡೆತನದಲ್ಲಿದೆ. ಈ ಆಸ್ತಿಗಳ ಮಾರಾಟ ಮಾಡುವುದಕ್ಕೆ ಸರ್ಕಾರ ತಡೆಯೊಡ್ಡಿದೆ. ಆದರೆ ಬೇರೆಯವರ ಮಾಲೀಕತ್ವದಲ್ಲಿದ್ದರೆ ಈ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಆಗುವುದಿಲ್ಲ. ಈ ಆಸ್ತಿಗಳಲ್ಲಿ ಅಪ್ಪುಗೋಳ ಹೂಡಿಕೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸುವುದು ಕಷ್ಟ ಎಂದು ಅಪ್ಪುಗೋಳ ಅವರ ಪರ ವಕೀಲರೊಬ್ಬರು ತಿಳಿಸಿದ್ದಾರೆ.

  ಪ್ರತಿಭಟನೆ ನಡೆಸಿದ್ದರು

  ಪ್ರತಿಭಟನೆ ನಡೆಸಿದ್ದರು

  ಅಪ್ಪುಗೋಳ ಅವರ ಸಂಬಂಧಿಕರು, ಸ್ನೇಹಿತರು, ಕುಟುಂಬದ ಸದಸ್ಯರು ಸೇರಿದಂತೆ ಅನೇಕರ ವಿರುದ್ಧ ಸೊಸೈಟಿಯ ಗ್ರಾಹಕರು ಸಲ್ಲಿಸಿದ ದೂರುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೂ ಕಳುಹಿಸಲಾಗಿದೆ. ದೆಹಲಿ ಮತ್ತು ಹೈದರಾಬಾದ್‌ಗಳಲ್ಲಿಯೂ ಅಪ್ಪುಗೋಳ ಐಷಾರಾಮಿ ಬಂಗಲೆಗಳನ್ನು ಖರೀದಿಸಿದ್ದಾರೆ. ತಮ್ಮ ಹಣವನ್ನು ವಾಪಸ್ ನೀಡುವಂತೆ ಠೇವಣಿದಾರರು ಆನಂದ್ ಅಪ್ಪುಗೋಳ ಮನೆ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದರು. ಆದರೆ ಇದುವರೆಗೂ ಠೇವಣಿದಾರರಿಗೆ ಹಣ ದೊರೆತಿಲ್ಲ.

  English summary
  Belagavi administration has filed a plea in local court to auction all 110 properties of Krantiveera Sangolli Rayanna movi producer Anand Appugol.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X