ಅತಿಥಿ/ಕೇಡಿ ಪಾತ್ರ ಮಾಡಬೇಡಿ, ಯಾವನೋ ನಿಮ್ಮನ್ನ ಹೊಡೆಯೋದು ನೋಡಕ್ಕಾಗಲ್ಲ.!

''ಈ ಗೆಸ್ಟ್ ರೋಲ್ ಮತ್ತು ವಿಲನ್ ಪಾತ್ರಗಳೆಲ್ಲಾ ಬೇಡ ಬಾಸ್. ವಿಲನ್ ಅಂತ ಮಾಡಿದ್ರೆ 'ಈಗ' ತರಹದ ಸಿನಿಮಾದಲ್ಲಿ ಮಾತ್ರ ಮಾಡಿ. ಯಾವನೋ ನಿಮ್ಮನ್ನ ಹೊಡೆಯೋದು ನೋಡೋಕ್ಕಾಗಲ್ಲ'' - ಹೀಗಂತ ಮನಸಾರೆ ಹೇಳ್ತಿರೋದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು.!

ಕಿಚ್ಚ ಸುದೀಪ್ ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ.. ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಬಹು ಬೇಡಿಕೆ ಹೊಂದಿರುವ ನಟ. ಪರಭಾಷೆಯ ಕೆಲವು ಚಿತ್ರಗಳಲ್ಲಿ ಸುದೀಪ್ ವಿಲನ್ ಆಗಿ ಮಿಂಚಿದ್ದಾರೆ. ಇನ್ನೂ ಕೆಲ ಚಿತ್ರಗಳಲ್ಲಿ ಅತಿಥಿ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಇತ್ತೀಚೆಗಷ್ಟೇ ತೆರೆಕಂಡ ಸಲ್ಮಾನ್ ಖಾನ್ ಅಭಿನಯದ ಹಿಂದಿ ಚಿತ್ರ 'ದಬಾಂಗ್-3' ನಲ್ಲಿ ಸುದೀಪ್ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಬೇರೆ ಭಾಷೆಯ ನಟರ ಮುಂದೆ ಸುದೀಪ್ ಕೇಡಿಯಾಗಿ ಒದೆ ತಿನ್ನೋದು ಸುದೀಪ್ ಅಭಿಮಾನಿಗಳಿಗೆ ಇಷ್ಟ ಆಗುತ್ತಿಲ್ಲ. ಹೀಗಾಗಿ, ಸುದೀಪ್ ಗೆ ಫ್ಯಾನ್ಸ್ ಟ್ವಿಟ್ಟರ್ ಮೂಲಕ ಪರಭಾಷೆಯಲ್ಲಿ ಗೆಸ್ಟ್/ವಿಲನ್ ಪಾತ್ರ ಮಾಡಬೇಡಿ ಅಂತ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಬೇಕಾದ್ರೆ ನೀವೇ ಕೆಲ ಟ್ವೀಟ್ ಗಳನ್ನು ನೋಡಿ...

ಸ್ಪಷ್ಟನೆ ಕೊಟ್ಟಿದ್ದ ಸುದೀಪ್

ಸ್ಪಷ್ಟನೆ ಕೊಟ್ಟಿದ್ದ ಸುದೀಪ್

ರಾಜಮೌಳಿ ನಿರ್ದೇಶನದ 'ಆರ್.ಆರ್.ಆರ್' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಸುದೀಪ್ ನಟಿಸಲಿದ್ದಾರೆ ಎಂಬ ಗಾಸಿಪ್ ಹಬ್ಬದ ಬೆನ್ನಲ್ಲೆ ಟ್ವಿಟ್ಟರ್ ನಲ್ಲಿ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ''ಆರ್.ಆರ್.ಆರ್' ಚಿತ್ರದ ಬಗ್ಗೆ ನನಗೆ ಗೌರವ ಇದೆ. ಆದ್ರೆ, ಎಲ್ಲರ ಗಮನಕ್ಕೆ ನಾನು ತರಲು ಇಚ್ಛಿಸುವುದೇನೆಂದರೆ, ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು. 'ಆರ್.ಆರ್.ಆರ್' ಚಿತ್ರಕ್ಕಾಗಿ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ನನ್ನ ಹಾಗೂ ರಾಜಮೌಳಿ ನಡುವೆ ಮಾತುಕತೆ ನಡೆದಿಲ್ಲ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿ ನಿಜಕ್ಕೂ ಹಲವು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಬೇರೆ ಭಾಷೆಯ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಬೇಡಿ ಅಂತ ಸುದೀಪ್ ಬಳಿ ಫ್ಯಾನ್ಸ್ ಮನವಿ ಮಾಡುತ್ತಿದ್ದಾರೆ.

ಯಾವನೋ ಹೊಡೆಯುವುದನ್ನು ನೋಡಲು ಆಗಲ್ಲ.!

ಯಾವನೋ ಹೊಡೆಯುವುದನ್ನು ನೋಡಲು ಆಗಲ್ಲ.!

''ನಿಮ್ಮ ಸ್ಪಷ್ಟನೆಗೆ ಥ್ಯಾಂಕ್ಸ್ ಅಣ್ಣ'', ''ಈ ಗೆಸ್ಟ್ ರೋಲ್, ವಿಲನ್ ರೋಲ್ ಎಲ್ಲಾ ಬೇಡ ಬಾಸ್, ವಿಲನ್ ಅಂತ ಮಾಡಿದ್ರೆ ಈಗ ತರಹ ಇದ್ದರೆ ಮಾತ್ರ ಮಾಡಿ, ಯಾವನೋ ನಿಮ್ಮನ್ನ ಹೊಡೆಯೋದು ನೋಡೋಕ್ಕಾಗಲ್ಲ'', ''ಸೈಡ್ ಆಕ್ಟಿಂಗ್ ಮಾಡೋದು ಬೇಡ. ಬೇಕಾದ್ರೆ ಯಶ್ ತರಹ ಪ್ಯಾನ್ ಇಂಡಿಯಾ ಮೂವಿ ಮಾಡಿ'' ಅಂತೆಲ್ಲಾ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.

ಅಭಿಮಾನಿಗಳ ಕಳಕಳಿಯ ಮನವಿ.!

ಅಭಿಮಾನಿಗಳ ಕಳಕಳಿಯ ಮನವಿ.!

''ಇದಕ್ಕೆ ಒಪ್ಪಿಕೊಳ್ಳಬೇಡಿ ಬಾಸ್. ಯಾಕಂದ್ರೆ, ಬೇರೆ ಭಾಷೆಗಳ ಚಿತ್ರಗಳು ಸಾಕು. ಕನ್ನಡದಲ್ಲೇ ನೀವು ಹೆಚ್ಚು ಚಿತ್ರಗಳನ್ನು ಮಾಡಬೇಕು. ನಮ್ಮನ್ನ ಹೆಮ್ಮೆ ಪಡಿಸಬೇಕು'' ಎಂಬ ಟ್ವೀಟ್ ಗಳೇ ಹೆಚ್ಚಾಗಿವೆ.

ಕಾಲರ್ ಎತ್ತಿಕೊಂಡು ತಿರುಗುತ್ತೇವೆ

ಕಾಲರ್ ಎತ್ತಿಕೊಂಡು ತಿರುಗುತ್ತೇವೆ

''ಈ ವಿಲನ್ ರೋಲ್ ಮತ್ತು ಗೆಸ್ಟ್ ರೋಲ್ ನ ಸ್ಟಾಪ್ ಮಾಡಿ. ಹಾಲಿವುಡ್ ಟ್ರೈ ಮಾಡಿ. ನಾವು ನಮ್ಮ ಕಾಲರ್ ಎತ್ತಿಕೊಂಡು ತಿರುಗುತ್ತೇವೆ'' ಎನ್ನುತ್ತಿದ್ದಾರೆ ಅಭಿಮಾನಿಗಳು.

ಪರಭಾಷೆಯಲ್ಲಿ ಸುದೀಪ್ ಚಿತ್ರಗಳು..

ಪರಭಾಷೆಯಲ್ಲಿ ಸುದೀಪ್ ಚಿತ್ರಗಳು..

ತೆಲುಗಿನಲ್ಲಿ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಸುದೀಪ್ ನೆಗೆಟಿವ್ ಶೇಡ್ ನಲ್ಲಿ ಅಭಿನಯಿಸಿದ್ದರು. ತಮಿಳಿನ 'ಪುಲಿ' ಚಿತ್ರದಲ್ಲೂ ಸುದೀಪ್ ವಿಲನ್ ಆಗಿ ನಟಿಸಿದ್ದರು. ಹಿಂದಿಯ 'ದಬಾಂಗ್-3' ಚಿತ್ರದಲ್ಲಿ ಸಲ್ಮಾನ್ ಎದುರಿಗೆ ಸುದೀಪ್ ಕೇಡಿಯಾಗಿ ಅಬ್ಬರಿಸಿದ್ದರು. ಇನ್ನೂ 'ಬಾಹುಬಲಿ-ದಿ ಬಿಗಿನ್ನಿಂಗ್' ಸಿನಿಮಾದಲ್ಲಿ ಸುದೀಪ್ ಅತಿಥಿಯಾಗಿ ಹೀಗೆ ಬಂದು ಹಾಗೆ ಹೋಗಿದ್ದರು. ಉಳಿದಂತೆ 'ಪೂಂಕ್', 'ರಣ್', 'ಫೂಂಕ್-2', 'ರಕ್ತ ಚರಿತ್ರ-1', 'ರಕ್ತ ಚರಿತ್ರ-2', 'ಮುಡಿಂಜ ಇವನ ಪುಡಿ' ಚಿತ್ರಗಳಲ್ಲಿ ಸುದೀಪ್ ಮಿಂಚಿದ್ದಾರೆ.

More from Filmibeat

English summary
Please don't play guest and villain role in other language films: Fans requests Kiccha Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X