ರಾಹುಲ್ ಗಾಂಧಿ ಅಪಹರಣಕ್ಕೆ ಮೂವರು ಉಗ್ರರ ಸಂಚು?
ಲಕ್ನೋ, ನ.16 : ಶುಕ್ರವಾರ(ನ.16) ಪೊಲೀಸ್ ಬಂಧನಕ್ಕೆ ಒಳಗಾಗಿರುವ ಜೈಷ್ ಎ ಮೊಹಮದ್ ಸಂಘಟನೆಯ ಮೂವರು ಭಯೋತ್ಪಾದಕರು, ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಅಪಹರಣಕ್ಕೆ ಸಂಚು ನಡೆಸಿದ್ದರು ಎಂದು ತಿಳಿದು ಬಂದಿದೆ.
ಭಯೋತ್ಪಾದಕರ ಬಂಧನವನ್ನು ಪೊಲೀಸರು ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲ. ಪಾಕಿಸ್ತಾನದ ಪ್ರಜೆಗಳಾಗಿರುವ ಈ ಉಗ್ರರು, ಗುಂಡಿನ ಚಕಮಕಿ ನಂತರ ಪೊಲೀಸರು ಕೈಗೆ ಸಿಲುಕಿದರು. ಉತ್ತರ ಪ್ರದೇಶದ ಪ್ರಮುಖ ರಾಜಕಾರಣಿಯನ್ನು ಅಪಹರಣ ಮಾಡಲು ಸಹಾ ಈ ಉಗ್ರರು ಸಂಚು ನಡೆಸಿದ್ದರು ಎನ್ನಲಾಗಿದೆ.
ಈ ಉಗ್ರರನ್ನು ಮಹಮದ್ ಅಬೀದ್ ಅಲಿಯಾಸ್ ಫಾತೆ, ಯೂಸುಫ್ ಅಲಿಯಕ್ ಫೈಸಲ್ ಮತ್ತು ಮಿರ್ಜಾ ರಶೀದ್ ಬೇಗ್ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
(ಏಜನ್ಸೀಸ್)


Click it and Unblock the Notifications