twitter
    For Quick Alerts
    ALLOW NOTIFICATIONS  
    For Daily Alerts

    ಮತದಾನದ ಅರಿವು ಮೂಡಿಸುವಂತೆ ಸಿನಿತಾರೆಯರಿಗೆ ಪ್ರಧಾನಿ ಮೋದಿ ಕರೆ

    |

    ಭಾರತದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನ ಹೆಚ್ಚುತ್ತಿದೆ. ಚುನಾವಣೆಯ ದಿನಾಂಕ ಘೋಷಣೆ ಆಗುತ್ತಿದಂತೆ ರಾಜಕೀಯ ಪಕ್ಷಗಳ ನಡುವೆ ಅಸಲಿ ಕದನ ಶುರುವಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆ 7 ಹಂತದಲ್ಲಿ ನಡೆಯಲಿದ್ದು, ಏಪ್ರಿಲ್ 11 ರಿಂದ ಪ್ರಾರಂಭವಾಗುವ ಚುನಾವಣೆ ಮೇ 19ಕ್ಕೆ ಕೊನೆಗೊಳ್ಳಲಿದೆ. ಮೇ 23ಕ್ಕೆ ದೇಶದ ಪ್ರಧಾನಿ ಯಾರಾಗ್ತಾರೆ ಎಂಬ ಭವಿಷ್ಯ ಗೊತ್ತಾಗಲಿದೆ.

    ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಸಿನಿಮಾ ತಾರೆಯರಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ''ಈ ಬಾರಿ ಅತೀ ಹೆಚ್ಚು ಮತದಾನ ಆಗಬೇಕು. ಎಲ್ಲರು ತಮ್ಮ ಹಕ್ಕನ್ನು ಚಲಾಯಿಸಬೇಕು. ಇದಕ್ಕೆ ಸಿನಿಮಾ ತಾರೆಯರು ಸಹಕಾರಿಯಾಗಬೇಕು'' ಎಂದು ದೇಶದ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

    ಮತದಾನದ ಅರಿವು ಮೂಡಿಸಲು ಸೆಲೆಬ್ರಿಟಿಗಳಿಗೆ ಮೋದಿ ಮನವಿ

    ''ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ಕೆಲಸವನ್ನ ಕಲಾವಿದರು ಮಾಡಬೇಕು. ಸೆಲೆಬ್ರಿಟಿಗಳು ಮುಂದೆ ಬಂದು ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಬೇಕಾದರೆ ಸೆಲೆಬ್ರಿಟಿಗಳ ಪಾತ್ರವು ಇರಬೇಕು'' ಎಂದು ಪ್ರಧ್ರಾನಿ ಮೋದಿ ಟ್ವೀಟ್ ಮಾಡಿದ್ದಾರೆ.

    ''ಬಾಲಿವುಡ್ ನ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಆಮೀರ್ ಖಾನ್, ಅಕ್ಷಯ್ ಕುಮಾರ್, ಆಯುಷ್ಮಾನ್ ಖುರಾನ, ಭೂಮಿ ಪಡ್ನೆಕರ್ ಸೇರಿದಂತೆ ಎಲ್ಲರೂ ಮತದಾನದ ಬಗ್ಗೆ ಜಾಗೃತಿ ಮೂಡಿಸಿ'' ಎಂದು ಕರೆ ನೀಡಿದ್ದಾರೆ.

    PM Modi asks celebrities to encourage voting in Lok Sabha polls

    ಚುನಾವಣೆ ಹೊತ್ತಲ್ಲಿ ರಾಹುಲ್ ಗಾಂಧಿ, ಕುಮಾರಸ್ವಾಮಿಗೆ ಮೋದಿ ಮಾಡಿದ ಮನವಿ ಏನು?

    ಕೇವಲ ಬಾಲಿವುಡ್ ಸ್ಟಾರ್ ಗಳು ಮಾತ್ರವಲ್ಲ, ಭಾರತದ ಸಿನಿಮಾ ಉದ್ಯಮದ ಎಲ್ಲಾ ರಂಗದ ಕಲಾವಿದರೂ ಈ ಕಾರ್ಯದಲ್ಲಿ ಭಾಗಿಯಾಗಬೇಕಿದೆ. ಸಿನಿಮಾ ನಟ-ನಟಿಯರ ಮಾತಿಗೆ ಗೌರವ ಮತ್ತು ಬೆಲೆ ಕೊಡುವಂತಹ ಅಭಿಮಾನಿಗಳಿದ್ದಾರೆ. ಹಾಗೆ, ಸಿನಿಮಾ ಕಲಾವಿದರಿಂದ ಇಂತಹ ಸಂದೇಶಗಳು ಬಂದಾಗ, ಅದು ಅನೇಕರಿಗೆ ತಲುಪುತ್ತೆ ಎಂಬ ಉದ್ದೇಶ ಮೋದಿ ಅವರದ್ದು.

    English summary
    Prime minister narendra modi request to celebrities for encourage voting in Lok Sabha polls. pm modi asks bollywood actors amitabh bachchan, salman khan, aamir khan etc.
    Wednesday, March 13, 2019, 14:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X