ಮೋದಿ ಚಿತ್ರಕ್ಕೆ ವಿಘ್ನ: ನಾಳೆ ಬಿಡುಗಡೆಯಾಗುತ್ತಿಲ್ಲ ಪಿಎಂ ನರೇಂದ್ರ ಮೋದಿ

ಭಾರಿ ಕುತೂಹಲ ಮೂಡಿಸಿರುವ ಪಿಎಂ ನರೇಂದ್ರ ಮೋದಿ ಸಿನಿಮಾ ನಾಳೆ ಬಿಡುಗಡೆಯಾಗುತ್ತಿಲ್ಲ. 'ಪಿಎಂ ನರೇಂದ್ರಮೋದಿ ಸಿನಿಮಾ ನಾಳೆ ರಿಲೀಸ್ ಆಗುತ್ತಿಲ್ಲ. ಮತ್ತೆ ದಿನಾಂಕವನ್ನ ಹೇಳುತ್ತೇವೆ' ಎಂದು ನಿರ್ಮಾಪಕ ಸಂದೀಪ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಆ ಕಾರಣದಿಂದ ಮೋದಿ ಸಿನಿಮಾ ರಿಲೀಸ್ ಆದ್ರೆ, ಮತದಾರರ ಮೇಲೆ ಪ್ರಭಾವ ಬೀರುತ್ತೆ ಎಂಬ ಕಾರಣಕ್ಕೆ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನಾಲ್ಕು ರಾಜ್ಯದಲ್ಲಿ ಹೈಕೋರ್ಟ್ ಈ ಅರ್ಜಿಯನ್ನ ತಿರಸ್ಕರಿದ್ದರೂ, ಸುಪ್ರೀಂ ಕೋರ್ಟ್ ಪುರಸ್ಕರಿಸಿ ವಿಚಾರಣೆ ಸೂಚನೆ ನೀಡಿದೆ.

ಗುರುವಾರ ಪಿಐಎಲ್ ಅರ್ಜಿ ಸ್ವೀಕರಿಸಿದ ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ಮಾಡಿ, ನಿರ್ಧಾರ ಹೇಳುವುದಾಗಿ ತಿಳಿಸಿದೆ. ಅಲ್ಲಿಯವರೆಗೂ ಸಿನಿಮಾ ಬಿಡುಗಡೆಯಾಗಬಾರದು ಎಂದು ಸೂಚನೆ ನೀಡಿದೆ. ಹಾಗಾಗಿ, ನಾಳೆ ರಿಲೀಸ್ ಆಗಬೇಕಿದ್ದ ಮೋದಿ ಬಯೋಪಿಕ್ ಸಿನಿಮಾ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

PM Narendra Modi a biopic postponed

ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ಮೋದಿ ಚಿತ್ರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದ್ದು, ರಿಲೀಸ್ ಬಗ್ಗೆ ಕೋರ್ಟ್ ಏನು ಹೇಳುತ್ತೆ ಎಂಬುದು ಕುತೂಹಲ ಮೂಡಿಸಿದೆ. ಒಂದು ವೇಳೆ ಕೋರ್ಟ್ ಬಿಡುಗಡೆಗೆ ಅನುಮತಿ ನೀಡಿದ್ರೆ ಏಪ್ರಿಲ್ 12ಕ್ಕೆ ಮೋದಿ ಚಿತ್ರ ತೆರೆಕಾಣಲಿದೆ ಎನ್ನಲಾಗಿದೆ.

ವಿವೇಕ್ ಒಬೆರಾಯ್ ಈ ಚಿತ್ರದಲ್ಲಿ ಮೋದಿ ಪಾತ್ರದಲ್ಲಿ ನಟಿಸಿದ್ದಾರೆ. ಓಮಂಗ್ ಕುಮಾರ್ ನಿರ್ದೇಶನ ಮಾಡಿದ್ದು, ಸಂದೀಪ್ ಸಿಂಗ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
The release of PM Narendra Modi, a biopic on the prime minister, has been postponed till further notice, its producer Sandeep Singh said on Thursday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X