'ಪೊಗರು' ಸಿನಿಮಾಗೆ ರಶ್ಮಿಕಾ ಮಂದಣ್ಣನೇ ಪೈಪೋಟಿ
Recommended Video
ಧ್ರುವ ಸರ್ಜಾ ಮದುವೆ ದಿನದ ವಿಶೇಷವಾಗಿ ನಿನ್ನೆ (ನವೆಂಬರ್ 24) 'ಪೊಗರು' ಸಿನಿಮಾದ ಬಿಡುಗಡೆ ದಿನಾಂಕ ನಿಗದಿ ಆಗಿದೆ. ಸಂಕ್ರಾಂತಿ ಹಬ್ಬಕ್ಕೆ ಚಿತ್ರ ತೆರೆಗೆ ಬರಲಿದೆ.
ಇತ್ತ 'ಪೊಗರು' ಸಿನಿಮಾ ಬಿಡುಗಡೆ ಆಗುತ್ತಿದ್ದರೆ, ಅತ್ತ ರಶ್ಮಿಕಾ ಮಂದಣ್ಣ ಸಿನಿಮಾವೇ ಈ ಚಿತ್ರಕ್ಕೆ ಪೈಪೋಟಿ ನೀಡಲು ಬರುತ್ತಿದೆ. ರಶ್ಮಿಕಾ ಅಭಿನಯದ ಎರಡು ಸಿನಿಮಾಗಳು 2020ರ ಸಂಕ್ರಾಂತಿಗೆ ಬಿಡುಗಡೆ ಆಗುತ್ತಿವೆ.

ತೆಲುಗಿನ 'ಸರಿಲೇರು ನೀಕೆವ್ವರು' ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಎಂದು ಟೀಸರ್ ಮೂಲಕ ಘೋಷಣೆ ಮಾಡಿತ್ತು. ಇದೀಗ 'ಪೊಗರು' ಸಿನಿಮಾ ಕೂಡ ಅದೇ ದಿನ ಬಿಡುಗಡೆ ಆಗುತ್ತಿದೆ. ಮಹೇಶ್ ಬಾಬು ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನಟಿಸಿದ್ದಾರೆ.
ಸಂಕ್ರಾಂತಿಗೆ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಬಾಕ್ಸ್ ಆಫೀಸ್ ವಾರ್ ನಡೆಯಲಿದೆ. 'ಪೊಗರು' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಬಿಡುಗಡೆ ಆಗಲಿದ್ದು, ದೊಡ್ಡ ಕ್ರೇಜ್ ಹುಟ್ಟುಹಾಕುತ್ತಿದೆ. 'ಸರಿಲೇರು ನೀಕೆವ್ವರು' ಕೂಡ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದೆ.

'ಸರಿಲೇರು ನೀಕೆವ್ವರು' ಮೂಲಕ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನಟ ಮಹೇಶ್ ಬಾಬು ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ಅವರ ಆರನೇ ತೆಲುಗು ಸಿನಿಮಾವಾಗಿದೆ.


Click it and Unblock the Notifications











